ಅಂಕೋಲಾ: ಹಾರವಾಡ ಗ್ರಾಮ ಪಂಚಾಯತ ವ್ಯಾಪ್ತಿಯ ಸೀಬರ್ಡ ಕೊಲೋನಿಯ ಈಶ್ವರ ದೇವಸ್ಥಾನದ 21ನೇ ವರ್ಷದ ಜಾತ್ರಾ ಮಹೋತ್ಸವ ಅತ್ಯಂತ ವಿಜ್ರಂಭಣೆಯಿಂದ ಜರುಗಿತು ದೇವರ ಪಲ್ಲಕ್ಕಿಯನ್ನು ಗ್ರಾಮದ ಸುತ್ತ ಮೆರವಣಿಗೆ ನಡೆಯಿತು.
ಅದೇ ದಿನ ರಾತ್ರಿ ಶ್ರೀ ಶಿವಶಂಕರ ತರುಣ ನಾಟ್ಯಮಂಡಳಿ ಹಾರವಾಡ ಇವರಿಂದ “ದಡಸೇರಿದ ಪ್ರೇಮದ ನೌಕೆ” ಎಂಬ ನಾಟಕವನ್ನು ಪ್ರದರ್ಶಿಸಲಾಯಿತು.
ಇದೇ ಸಂದರ್ಭದಲ್ಲಿ ಕಳೆದ 21 ವರ್ಷಗಳಿಂದ ನಾಟಕದಲ್ಲಿ ಪಾತ್ರ ನಿರ್ವಹಿಸಿಕೊಂಡು ಬಂದಿರುವಂತಹ ಕಲಾವಿದರಾದ ವಿಶ್ವನಾಥ ಡಿ ಹರಿಕಂತ್ರ, ಮಧು ಯುದಿಷ್ಟಿರ ದುರ್ಗೇಕರ ಹಾಗೂ ಉಮಾಕಾಂತ ಕೆ ಕುಮಾರಸ್ ಇವರನ್ನು ಸನ್ಮಾನಿಸಲಾಯಿತು.
ಸಂದರ್ಭದಲ್ಲಿ ದೇವಸ್ಥಾನ ಆಡಳಿತ ಮಂಡಳಿಯ ಅದ್ಯಕ್ಷರು ಸದಸ್ಯರು ಹಾಗೂ ಊರ ನಾಗರಿಕರು ಉಪಸ್ಥಿತರಿದ್ದರು.