ಭಟ್ಕಳ: ಮುರುಡೇಶ್ವರ ಸಮುದ್ರದಲ್ಲಿ ನೀರಿನ ಸೆಳೆತಕ್ಕೆ ಸಿಕ್ಕಿ ಮುಳುಗುತ್ತಿದ್ದ ಮೂವರು ಪ್ರವಾಸಿಗರನ್ನು ಲೈಫ್ ಗಾರ್ಡ ಸದಸ್ಯರು ರಕ್ಷಣೆ ಮಾಡಿ ದಡಕ್ಕೆ ಕರೆತಂದ ಘಟನೆ ಮುರುಡೇಶ್ವರದಲ್ಲಿ ಬುಧವಾರ ಮಧ್ಯಾಹ್ನ ನಡೆದಿದೆ.
ರಕ್ಷಣೆಗೊಳಗಾದವರನ್ನು ಶಿವಮೊಗ್ಗದ ಮೂರ್ತಿ ಎಸ್. (23) ಅನೀಲ್ ಕುಮಾರ್, (20)ಸಾಗರ, ಹಾಗೂ ಪುರುಶೋತ್ತಮ ಎನ್. (30) ಎಂದು ಗುರುತಿಸಲಾಗಿದೆ. ಇವರು ಒಟ್ಟು 15 ಮಂದಿ ಶಿವಮೊಗ್ಗದಿಂದ ಮುರುಡೇಶ್ವರ ಪ್ರವಾಸಕ್ಕೆ ಆಗಮಿಸಿ ಬುಧವಾರ ಮಧ್ಯಾಹ್ನ ಸಮುದ್ರದಲ್ಲಿ ಈಜಾಡುತ್ತಿದ್ದರು. ಆಕಸ್ಮಿಕವಾಗಿ ನೀರಿನ ಸೆಳೆತಕ್ಕೆ ಇವರು ಸಿಲುಕಿ ಈಜಾಡಲು ಆಗದೇ ಮುಳುಗುವ ಹಂತದಲ್ಲಿದ್ದಾಗ ಇವರ ಸಹದ್ಯೋಗಿಗಳು ಕೂಗಿ ರಕ್ಷಣೆಗಾಗಿ ಮನವಿ ಮಾಡಿದ್ದಾರೆ. ತಕ್ಷಣ ಲೈಪ್ ಗಾರ್ಡ ಸದಸ್ಯರಾದ ಹನುಮಂತ, ಸಂದೀಪ ಹರಿಕಾಂತ ,ಕೇಶವ ಮೊಗೇರ ಹಾಗೂ ಬೀಚ್ ಸುಪರ್ ವೈಸರ್ ದತ್ತಾತ್ರೇಯ ಶೆಟ್ಟಿ ತಂಡವು ಮುರುಡೇಶ್ವರ ಎಡ್ವೆಂಚರ್ ಕಂಪನಿಯ ಬೋಟ್ ನೊಂದಿಗೆ ಸಮುದ್ರಕ್ಕೆ ತೆರಳಿ ಮೂವರನ್ನು ರಕ್ಷಿಸಿ ದಡಕ್ಕೆ ತಂದಿದ್ದಾರೆ. ಇವರ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.