ಅಂಕೋಲಾ : ನಾವು ಗಳಿಸಿದ್ದರಲ್ಲಿ ಸ್ವಲ್ಪ ಭಾಗವನ್ನು, ನಮ್ಮನ್ನು ಬೆಳೆಸಿದ ಸಮಾಜಕ್ಕೆ ಕೊಡುಗೆಯಾಗಿ ನೀಡಬೇಕು. ಅಂದಾಗ ಮಾತ್ರ ನಮ್ಮ ಬದುಕು ಸಾರ್ಥಕವಾಗುತ್ತದೆ ಎಂದು ಲಯನ್ಸಿನ ಎಸ್.ಆರ್. ಉಡುಪಿ ಹೇಳಿದರು.
ಅವರು ಲಯನ್ಸ್ ಕ್ಲಬ್ ಅಂಕೋಲಾ ಕರಾವಳಿ, ತಮ್ಮ ಶೈಕ್ಷಣಿಕ ಸಹಾಯ ಯೋಜನೆಯ ಅಡಿಯಲ್ಲಿ ನೀಡಿದ ಲೈಬ್ರೆರಿ ಸ್ಟ್ಯಾಂಡ್‍ಗಳನ್ನು ಅಂಕೋಲಾದ ಬೋಳೆಯ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಹಸ್ತಾಂತರಿಸಿ ಮಾತನಾಡುತ್ತಿದ್ದರು.
ಈ ಸಭೆಯ ಅಧ್ಯಕ್ಷತೆ ವಹಿಸಿದ ಲಾಯನ್ಸ್ ಅಧ್ಯಕ್ಷ ಡಾ. ಕರುಣಾಕರ ಮಾತನಾಡಿ, ಶಾಲೆಗಳು ನಿಜವಾದ ದೇವಾಲಯಗಳಿದ್ದಂತೆ. ವಿದ್ಯಾರ್ಥಿಗಳ ಭವಿಷ್ಯ ನಿರ್ಮಾಣ ಮಾಡುವಲ್ಲಿ ಪ್ರಾಥಮಿಕ ಶಾಲೆಗಳು ಮಹತ್ವದ ಪಾತ್ರ ವಹಿಸುತ್ತದೆ ಎಂದರು. ಮುಂದಿನ ದಿನಗಳಲ್ಲಿ ಹೆಚ್ಚಿನ ಸಹಾಯವನ್ನು ಈ ಶಾಲೆಗೆ ಲಾಯನ್ಸ್ ಕ್ಲಬ್ ನೀಡಲಿದೆ ಎಂದು ಹೇಳಿದರು. ಈ ಸ್ಟ್ಯಾಂಡ್‍ಗಳ ಪ್ರಾಯೋಜಕರಾದ ಕೇರಳದ ಅಬ್ದುಲ್ ಖಾದರ್ ಕಣ್ಣೂರ್ ಅವರ ಸಹಾಯವನ್ನು ಸ್ಮರಿಸಿದರು.
ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ವಂದಿಗೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪುಷ್ಪಲತಾ ನಾಯಕ ತಾವು ದತ್ತು ತೆಗೆದುಕೊಂಡ ವಿದ್ಯಾರ್ಥಿಗೆ ಅವಶ್ಯಕ ವಸ್ತುಗಳನ್ನು ಕೊಡುಗೆಯಾಗಿ ನೀಡಿದರು. ಲಾಯನ್ಸಿನ ಸೇವಾ ಕಾರ್ಯಗಳನ್ನು ಮುಕ್ತ ಕಂಠದಿಂದ ಪ್ರಶಂಸಿಸಿದರು. ಇದೇ ಸಂದರ್ಭದಲ್ಲಿ ಲಾ. ಕೇಶವಾನಂದ ನಾಯಕ ತಮ್ಮ ವಿವೇಕ ಸೌಹಾರ್ದ ಸಂಸ್ಥೆ ಬೇಲೇಕೇರಿಯ ಪರವಾಗಿ ವಿದ್ಯಾರ್ಥಿಗಳಿಗೆ ಉಚಿತ ನೋಟ್‍ಬುಕ್‍ಗಳನ್ನು ವಿತರಿಸಿದರು.
ಮುಖ್ಯಾಧ್ಯಾಪಕ ಜಗದೀಶ ನಾಯಕ ಹೊಸ್ಕೇರಿ ಕಾರ್ಯಕ್ರಮದಲ್ಲಿ ಎಲ್ಲರನ್ನು ಆತ್ಮೀಯವಾಗಿ ಸ್ವಾಗತಿಸಿ, ಲಾಯನ್ಸ್ ಕೊಡುಗೆಯನ್ನು ಅತ್ಯಂತ ಕೃತಜ್ಞತೆಯಿಂದ ಸ್ವೀಕರಿಸುವುದಾಗಿ ಹೇಳಿದರು. ವಲಯಾಧ್ಯಕ್ಷ ಮಹಾಂತೇಶ ರೇವಡಿ, ಲಾಯನ್ಸ್ ಸದಸ್ಯರಾದ ಹಸನ ಶೇಖ್, ಶಂಕರ ಹುಲಸ್ವಾರ, ಗಣಪತಿ ನಾಯಕ, ಕೇಶವಾನಂದ ನಾಯಕ ಸಾಂದರ್ಭಿಕವಾಗಿ ಮಾತನಾಡಿದರು.
ಲಯನ್ಸ್ ಸದಸ್ಯರಾದ ಸತೀಶ ನಾಯಕ, ಸಂತೋಷ ಸಾಮಂತ, ಖಜಾಂಚಿ ಓಂ ಪ್ರಕಾಶ್ ಪಟೇಲ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.ಶಾಲಾ ಶಿಕ್ಷಕಿ ಸವಿತಾ ರಮೇಶ ನಾಯ್ಕ ವಂದಿಸಿದರು. ಕಾರ್ಯಕ್ರಮದಲ್ಲಿ ಊರ ನಾಗರಿಕರು, ಪಾಲಕರು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದರು.