ಕುಮಟಾ: ಕುಮಟಾದ ಮಾನೀರ ಸಮೀಪವಿರುವ ಗ್ರಾಮ ಒಕ್ಕಲಿಗ ಸಭಾಭವನಕ್ಕೆ ತೆರಳುತ್ತಿದ್ದ ಮದುವೆ ಟೆಂಪೋ ಪಲ್ಟಿಯಾಗಿ ಹಲವರಿಗೆ ಗಾಯವಾದ ಘಟನೆ ನಡೆದಿದೆ. ಮಕ್ಕಳು ಮಹಿಳೆಯರು ಸೇರಿ ಹಲವರು ಟೆಂಪೋದಲ್ಲಿ ಇದ್ದರು.
ರಾಷ್ಟ್ರೀಯ ಹೆದ್ದಾರಿಯಿಂದ ಸಭಾಭವನಕ್ಕೆ ತೆರಳುತ್ತಿದ್ದ ವೇಳೆ ಏರಿನಲ್ಲಿ ಹೋಗುತ್ತಿರುವಾಗ ಹಿಮ್ಮುಖದಲ್ಲಿ ಬಂದು ಟೆಂಪೋ ಪಲ್ಟಿಯಾಗಿದೆ ಎನ್ನಲಾಗಿದೆ. ಗಾಯಾಳುಗಳನ್ನು ಕುಮಟಾ ಸರ್ಕಾರಿ ಆಸ್ಪತ್ರೆಗೆ ಸೇರಿಸಿ, ಚಿಕಿತ್ಸೆ ನೀಡಲಾಗುತ್ತಿದೆ. ಹೆಚ್ಚಿನ ಮಾಹಿತಿ ಇನ್ನು ತಿಳಿದುಬರಬೇಕಾಗಿದೆ.