ಶಿರಸಿ: ಕೆಪಿಸಿಸಿ ವಕ್ತಾರ ಮತ್ತು ಕರಾವಳಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ನಿವೇದಿತ ಆಳ್ವಾ ಅವರ ವಿನಂತಿಯ ಮೇರೆಗೆ ರಾಜ್ಯಸಭಾ ಸದಸ್ಯ ಜಿ.ಸಿ. ಚಂದ್ರಶೇಖರ ಅವರು ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ಸಿದ್ದಾಪುರ ತಾಲೂಕಿನ ಎರಡು ಕಾಮಗಾರಿಗಳಿಗೆ ಅನುದಾನ ಒಟ್ಟೂ ಹತ್ತು ಲಕ್ಷ ರೂ.ಗಳನ್ನು ಮಂಜೂರಿ ಮಾಡಿದ್ದಾರೆ.
ಬಿಳಗಿ ಗ್ರಾಮ ಪಂಚಾಯತ ವ್ಯಾಪ್ತಿಯ ಕಟ್ಟೆಕೈನಲ್ಲಿ ಸಮುದಾಯ ಭವನದ ನಿರ್ಮಾಣ ಕಾಮಗಾರಿಗೆ ಐದು ಲಕ್ಷ ರೂ. ದೊಡ್ಡನೆ ಪಂಚಾಯತ ಕಲಕ್ಕೆ ಗ್ರಾಮದ ಕಬಗಾರದಲ್ಲಿ ಸಮುದಾಯ ಭವನ ನಿರ್ಮಾಣ ಕಾಮಗಾರಿಗೆ ಐದು ಲಕ್ಷ ರೂ.ಗಳನ್ನು ಮಂಜೂರಿ ಮಾಡಿದ್ದಾರೆ.
ನಿವೇದಿತ ಆಳ್ವಾ ಅವರು ಸಿದ್ದಾಪುರ ಗ್ರಾಮೀಣ ಜನರ ಹಾಗೂ ಆ ಭಾಗದ ಜನಪ್ರತಿನಿಧಿಗಳ ಬೇಡಿಕೆಯ ಮೇರೆಗೆ ಈ ಹಿಂದೆ ಸದರಿ ಸ್ಥಳಕ್ಕೆ ಖುದ್ದಾಗಿ ತೆರಳಿ ಸ್ಥಳ ಪರಿಶೀಲನೆ ನಡೆಸಿ ಸದರಿ ಕಾಮಗಾರಿಗಳು ಸಾರ್ವಜನಿಕರ ಹಿತದೃಷ್ಟಿಯಿಂದ ಅವಶ್ಯವಾಗಿ ಆಗಬೇಕಾಗಿದ್ದನ್ನು ಅರಿತು, ತಮ್ಮ ಅನುದಾನದಲ್ಲಿ ಮಂಜೂರು ಮಾಡುವಂತೆ ಜಿ.ಸಿ. ಚಂದ್ರಶೇಖರ ವರಿಗೆ ಮನವಿ ಸಲ್ಲಿಸಿದ್ದರು.