• Slide
    Slide
    Slide
    previous arrow
    next arrow
  • ಬಾಹ್ಯಾಕಾಶ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ 50ಕ್ಕೂ ಹೆಚ್ಚು ಸ್ಟಾರ್ಟ್‌ಅಪ್‌ಗಳು

    300x250 AD

    ನವದೆಹಲಿ: 50ಕ್ಕೂ ಹೆಚ್ಚು ಸ್ಟಾರ್ಟ್‌ಅಪ್‌ಗಳು ಬಾಹ್ಯಾಕಾಶ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದು, ಅವುಗಳಲ್ಲಿ ಹತ್ತು ಸ್ಟಾರ್ಟ್‌ಅಪ್‌ಗಳು 50 ಕೋಟಿ ರೂಪಾಯಿಗಿಂತ ಹೆಚ್ಚಿನ ಅನುದಾನವನ್ನು ಹೊಂದಿವೆ ಎಂದು ಕೇಂದ್ರ  ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಡಾ.ಜಿತೇಂದ್ರ ಸಿಂಗ್ ಅವರು ಹೇಳಿದ್ದಾರೆ.

    ನವದೆಹಲಿಯ ಪೃಥ್ವಿಅ ಭವನದಲ್ಲಿ ಎಲ್ಲಾ ವಿಜ್ಞಾನ ಸಚಿವಾಲಯಗಳು ಮತ್ತು ವಿಜ್ಞಾನ ಇಲಾಖೆಗಳ ಉನ್ನತ ಮಟ್ಟದ ಜಂಟಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಖಾಸಗಿಯವರಿಗೆ ಬಾಹ್ಯಾಕಾಶ ವಲಯವನ್ನು ತೆರೆದ ನಂತರ, ನವೀನ ಸ್ಟಾರ್ಟ್-ಅಪ್‌ಗಳು ಬಳಕೆಯಾಗದ ಸಾಮರ್ಥ್ಯವನ್ನು ಅನ್ವೇಷಿಸಲು ದೊಡ್ಡ ರೀತಿಯಲ್ಲಿ ಹೊರ ಬರುತ್ತಿವೆ ಎಂದು ಹೇಳಿದ್ದಾರೆ.

    50 ಕ್ಕೂ ಹೆಚ್ಚು ಸ್ಟಾರ್ಟ್‌ಅಪ್‌ಗಳು ಬಾಹ್ಯಾಕಾಶ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿವೆ ಮತ್ತು ಅವುಗಳಲ್ಲಿ ಸುಮಾರು ಹತ್ತು ಸ್ಟಾರ್ಟ್‌ಅಪ್‌ಗಳು 50 ಕೋಟಿ ರೂಪಾಯಿಗಳ ಅನುದಾನವನ್ನು ಹೊಂದಿವೆ ಎಂದ ಅವರು, ಸ್ಟಾರ್ಟ್-ಅಪ್‌ಗಳು ಜಾಗತಿಕ ಪರಿಣಾಮಗಳನ್ನು ಹೊಂದಿರುವ ಬಾಹ್ಯಾಕಾಶದಲ್ಲಿ ಡೆಬ್ರಿಸ್ ನಿರ್ವಹಣೆಗೆ ಸಾಫ್ಟ್‌ವೇರ್ ಪರಿಹಾರಗಳ ಮೇಲೆ ಕಾರ್ಯನಿರ್ವಹಿಸುತ್ತಿವೆ. ಇದುವರೆಗೆ ಸರ್ಕಾರದ 38 ಸಚಿವಾಲಯಗಳು ವಿವಿಧ ಕ್ಷೇತ್ರಗಳಲ್ಲಿ ತಂತ್ರಜ್ಞಾನದ ಬೆಂಬಲವನ್ನು ಕೋರಿವೆ ಎಂದು ಮಾಹಿತಿ ನೀಡಿದರು.

    300x250 AD

    ವೈಜ್ಞಾನಿಕ ಅಪ್ಲಿಕೇಶನ್‌ಗಳು ಮತ್ತು ತಾಂತ್ರಿಕ ಬೆಂಬಲ ಮತ್ತು ಪರಿಹಾರಗಳಿಗಾಗಿ 38  ಸಚಿವಾಲಯಗಳು ಮತ್ತು ಇಲಾಖೆಗಳಿಂದ 200 ಕ್ಕೂ ಹೆಚ್ಚು ಪ್ರಸ್ತಾವನೆಗಳನ್ನು ಸ್ವೀಕರಿಸಲಾಗಿದೆ ಎಂದು ಸಿಂಗ್ ಹೇಳಿದರು.

    Share This
    300x250 AD
    300x250 AD
    300x250 AD
    Leaderboard Ad
    Back to top