ಶಿರಸಿ: ಇಲ್ಲಿನ ಸೀನಿಯರ್ ಛೆಂಬರ್ ಇಂಟರನ್ಯಾಶನಲ್ ಶಿರಸಿ ಮಾರಿಕಾಂಬಾ ಲೀಜನ್ ನಡೆಸಿದ ಪ್ರಥಮ ಪ್ರಶಸ್ತಿ ಪ್ರದಾನ ಸಮಾರಂಭ ನಗರದ ಕಣಜದಲ್ಲಿ ಬುಧವಾರ ನಡೆಯಿತು.
ಹಿರಿಯ ಕನ್ನಡ ವಿದ್ವಾಂಸೆ, ಪ್ರಾಧ್ಯಾಪಕಿ ಡಾ. ವಿಜಯನಳಿನಿ ರಮೇಶ ಅವರಿಗೆ ವಿಜಯಸ್ಮೃತಿ ಪ್ರಶಸ್ತಿ ನೀಡಲಾಯಿತು. ಜವಬ್ದಾರಿಯುತ ಮತ್ತು ಸಕ್ರೀಯ ಪೌರತ್ವ ಪ್ರಶಸ್ತಿಯನ್ನು ಹಿರಿಯ ಆಯುರ್ವೇದ ವೈದ್ಯ, ಭಾರತೀಯ ಯೋಧರಿಗೆ ಉಚಿತ ಆರೋಗ್ಯ ಚಿಕಿತ್ಸಾ ಸೌಲಭ್ಯ ಕೂಡ ನೀಡುತ್ತಿರುವ ಡಾ. ರವಿಕಿರಣ ಪಟವರ್ಧನ್ ಅವರಿಗೆ ಪ್ರದಾನ ಮಾಡಲಾಯಿತು.
ಸಮಾರಂಭದ ಅಧ್ಯಕ್ಷತೆಯನ್ನು ಪ್ರಶಸ್ತಿ ಪುರಸ್ಕೃತರಾದ ಜೆಸಿ ಅಧ್ಯಕ್ಷ ಮಲ್ಲಿಕಾರ್ಜುನ ನೆಜ್ಜೂರು ವಹಿಸಿದ್ದರು.
ಈ ವೇಳೆ ಕಾರ್ಯದರ್ಶಿ ಬಾಲಕೃಷ್ಣ ಹೆಗಡೆ, ಕೋಶಾಧ್ಯಕ್ಷ ಸೀತಾರಾಮ ಹೆಗಡೆ, ಉಪಾಧ್ಯಕ್ಷೆ ಜ್ಯೋತಿ ಭಟ್ಟ, ಸದಸ್ಯ ಸಂಚಾಲಕಿ ಸೀತಾ ಕೂರ್ಸೆ, ವಿನಾಯಕ ಶೇಟ್, ಅನಿಲ್‌ಕರಿ, ಕುಮಾರ ಕೂರ್ಸೆ,ಬಿ.ಎನ್.ಭಟ್ಟ, ಅನಿತಾ ಪಟವರ್ಧನ, ಧನಂಜಯ ಗೌಡ, ಪ್ರೋ. ಸತೀಶ ಹೆಗಡೆ, ಭಾಗೀರಥಿ ಕರಿ, ಮಂಗಳಗೌರಿ ನೆಜ್ಜೂರು, ವನಜಾ ಬೆಳಗಾಂವಕರ, ರಕ್ಷಾ ಪಟವರ್ಧನ್ ಇತರರು ಇದ್ದರು.
ಇದೇ ವೇಳೆ ಜೆಸಿ ರಾಷ್ಟ್ರೀಯ ಪ್ರಶಸ್ತಿಗೆ ಪುರಸ್ಕೃತರನ್ನು ಶಿಫಾರಸ್ಸು ಮಾಡಲಾಗುತ್ತಿರುವದು ವಿಶೇಷವಾಯಿತು.