ಶಿರಸಿ: ಮತ್ತಿಘಟ್ಟದ ಮುಂಡಗನಮನೆ ಸೇವಾ ಸಹಕಾರಿ ಸಂಘದ ಗೋದಾಮು ಸಹಿತ ವಿವಿದೋದ್ದೇಶ ಕಟ್ಟಡದ ಶಿಲಾನ್ಯಾಸ ಕಾರ್ಯವನ್ನು ವಿಧಾನ ಸಭಾಧ್ಯಕ್ಷರಾದ ವಿಶ್ವೇಶ್ವರ ಹೆಗಡೆ ಕಾಗೇರಿ ನೆರವೇರಿಸಿದರು.
ಪ್ರಾಥಮಿಕ ಪತ್ತಿನ ಸಂಘ-ವಿವಿಧ ಸೇವಾ ಕೇಂದ್ರ ಯೋಜನೆಯಲ್ಲಿ ಕೆಡಿಸಿಸಿ ಬ್ಯಾಂಕಿನ ಸಾಲದ ನೆರವಿನೊಂದಿಗೆ ರೂ. 1.58 ಕೋಟಿ ವೆಚ್ಚದ ಕಟ್ಟಡದ ಶಿಲಾನ್ಯಾಸವನ್ನು ಕೊವಿಡ್ ಹಿನ್ನೆಲೆಯಲ್ಲಿ ಸಂಕ್ಷಿಪ್ತವಾಗಿ ನೆರವೇರಿತು.
ಸಂಘದ ಅಧ್ಯಕ್ಷ ಗೋಪಾಲಕೃಷ್ಣ ವೈದ್ಯ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ಸಂಘದ ಆಡಳಿತ ಸಮಿತಿ ಸದಸ್ಯರು, ಹಲವಾರು ಸದಸ್ಯರು ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.
ರೈತರಿಗೆ ಕೃಷಿಸಾಲ ಪೂರೈಸಲು ಸರಕಾರವು ಆನ್‍ಲೈನ್ ವ್ಯವಸ್ಥೆಯಾಗಿ ‘ಫ್ರುಟ್ಸ್’ ತಂತ್ರಾಂಶವನ್ನು ಅಳವಡಿಸಲು ಸೂಚಿಸಿದ್ದು, ಇದರ ತಾಂತ್ರಿಕ ಸಮಸ್ಯೆಗಳ ಕಾರಣ ಕೈಬಿಡಬೇಕೆಂದು ವಿನಂತಿಸಿ ಮನವಿ ಹಾಗೂ ಇತರ ವಿಷಯಗಳ ಕುರಿತು ವಿಧಾನ ಸಭಾಧ್ಯಕ್ಷರಿಗೆ ಮನವಿ ಸಲ್ಲಿಸಲಾಯಿತು.