ಬನವಾಸಿ : ಹಿಜಾಬ್ ವಿವಾದ ಉತ್ತರ ಕನ್ನಡಜಿಲ್ಲೆಯಲ್ಲೂ ಆರಂಭವಾಗಿದ್ದು, ಪಟ್ಟಣದ ಸರಕಾರಿ ಪದವಿ ಪೂರ್ವ ಕಾಲೇಜ್ ಗೆ ಹಿಜಾಬ್ ಧರಿಸಿ ಆಗಮಿಸಿದ ವಿದ್ಯಾರ್ಥಿನಿಯರನ್ನು ಪೊಲೀಸರ ಮಧ್ಯಸ್ಥಿಕೆಯಲ್ಲಿ ಮನೆಗೆ ಕಳುಹಿಸಿದ ಘಟನೆ ಬುಧವಾರ ನಡೆದಿದೆ.
ಕಾಲೇಜಿನ 28 ಜನ ವಿಧ್ಯಾರ್ಥಿನಿಯರ ಪೈಕಿ 4 ಜನ ವಿಧ್ಯಾರ್ಥಿನಿಯರು ಹಿಜಾಬ್ ಧರಿಸಿ ಬಂದಿದ್ದು, ಉಳಿದ 24 ಜನ ವಿಧ್ಯಾರ್ಥಿನಿಯರು ಬುಧವಾರ ಗೈರು ಹಾಜರಾಗಿದ್ದರು. ಹಿಜಾಬ್ ಧರಸಿ ಬಂದ ವಿಧ್ಯಾರ್ಥಿನಿಯರಿಗೆ ಕಾಲೇಜಿನ ಪ್ರಾಂಶುಪಾಲರು ಸೂಕ್ತ ತಿಳುವಳಿಕೆ ನೀಡಿದರೂ ಸಹ ಹಠ ಹಿಡಿದ ವಿದ್ಯಾರ್ಥಿನಿಯರು ಹಿಜಾಬ್ ತೆಗೆಯಲು ನಿರಾಕರಿಸಿದರು. ಸುಮಾರು 15 ನಿಮಿಷ ಗಳ ಕಾಲ ಪ್ರಾಂಶುಪಾಲರು ಪೊಲೀಸರು ಎಷ್ಟೇ ವಿನಂತಿಸಿದರೂ ಹಿಜಾಬ್ ತೆಗೆಯಲು ಒಪ್ಪದೆ ಇದ್ದಾಗ ವಿಧ್ಯಾರ್ಥಿನಿಯರನ್ನು ಮನೆಗೆ ಕಳುಹಿಸಲಾಯಿತು.