ಸಿದ್ದಾಪುರ: ಕಲಾ ಭಾಸ್ಕರ(ಅ.) ಇಟಗಿ, ಕರ್ನಾಟಕ ಯಕ್ಷಗಾನ ಅಕಾಡೆಮಿ ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಹಿರಿಯರ ನೆನಪಿನೊಂದಿಗೆ ಯಕ್ಷಗಾನ ಕಲಾವಿದ ಗಣಪತಿ ಹೆಗಡೆ, ಗದ್ದೆಮನೆ ಇವರ ಸಂಸ್ಮರಣಾ ಕಾರ್ಯಕ್ರಮವನ್ನು ಫೆ.18 ರ ಶುಕ್ರವಾರ ಮದ್ಯಾಹ್ನ 03-30 ರಿಂದ ಸಿದ್ದಾಪುರದ ಮಹಾಗಣಪತಿ ದೇವಾಲಯ ಜಾತಕ (ಚಪ್ಪರಮನೆ) ಯಲ್ಲಿ ಆಯೋಜಿಸಲಾಗಿದೆ.
ಈ ಕಾರ್ಯಕ್ರಮವನ್ನು ಬೆಂಗಳೂರಿನ ಕರ್ನಾಟಕ ಯಕ್ಷಗಾನ ಅಕಾಡೆಮಿ ಸದಸ್ಯರಾದ ದಿವಾಕರ ಹೆಗಡೆ ಕರಹೊಂಡ ಉದ್ಘಾಟಿಸಲಿದ್ದು, ಆಡಳಿತ ಮಂಡಳಿ ಆ.ಗ.ದೇ ಜಾತಕದ ಅಧ್ಯಕ್ಷ ವಿನಾಯಕ ಹೆಗಡೆ ಆಲ್ಮನೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.ಅಭ್ಯಾಗತರಾಗಿ ಚಪ್ಪರ ಮನೆಯ ಹಿರಿಯ ಯಕ್ಷಗಾನ ಕಲಾವಿದ ಜಿ. ಎಸ್. ಭಾಗವತ, ಬೆಂಗಳೂರಿನ ಕರ್ನಾಟಕ ಯಕ್ಷಗಾನ ಅಕಾಡೆಮಿ ಸದಸ್ಯೆ ನಿರ್ಮಲಾ ಮಂ. ಹೆಗಡೆ ಗೋಳಕೊಪ್ಪ ಇವರು ಆಗಮಿಸಲಿದ್ದಾರೆ. ನಿವೃತ್ತ ಗ್ರಾಮಾಧಿಕಾರಿ ಪಿ. ಎನ್. ಹೆಗಡೆ ಮುಟ್ಟೇರಮನೆ ಇವರಿಂದ ಸಂಸ್ಮರಣಾ ಭಾಷಣ ನಡೆಯಲಿದೆ.
ಸಭಾ ಕಾರ್ಯಕ್ರಮದ ನಂತರ ಕವಿ ದೇವಿದಾಸ ರಚಿಸಿದ ಕರ್ಣ ಬೇಧನ ಯಕ್ಷಗಾನ ತಾಳಮದ್ದಲೆ ನಡೆಯಲಿದೆ.
ಹಿಮ್ಮೇಳದಲ್ಲಿ ಎಂ. ಪಿ. ಹೆಗಡೆ ಉಳ್ಳಾಲಗದ್ದೆ, ಶ್ರೀಪಾದ ಭಟ್ಟ ಮೂಡಗಾರು ಹಾಗೂ ಮುಮ್ಮೇಳದಲ್ಲಿ ದಿವಾಕರ ಹೆಗಡೆ ಕರಹೊಂಡ, ಶ್ರೀನಿವಾಸ ಭಾಗವತ ಮತ್ತಿಘಟ್ಟ, ವೆಂಕಟಗಿರಿ ಹೆಗಡೆ ಚಪ್ಪರಮನೆ, ಇಟಗಿ ಮಹಾಬಲೇಶ್ವರ ಭಟ್ಟ, ವಿನಾಯಕ ಹೆಗಡೆ ಕವಲಕೊಪ್ಪ ಇವರಿಂದ ತಾಳಮದ್ದಲೆ ನಡೆಯಲಿದೆ.
ಈ ಕಾರ್ಯಕ್ರಮಕ್ಕೆ ಎಲ್ಲರೂ ಆಗಮಿಸುವಂತೆ ಹಾಗೂ ಕೊವಿಡ್ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕೆಂದು ಪ್ರಕಟಣೆ ತಿಳಿಸಿದೆ.