• Slide
    Slide
    Slide
    previous arrow
    next arrow
  • ಬುಡಕಟ್ಟು ಜನರ ಸಮಸ್ಯೆ ನಿವಾರಣೆಗೆ ಅರಣ್ಯ ಮತ್ತು ಸಮಾಜ ಕಲ್ಯಾಣ ಇಲಾಖೆ ಸಮನ್ವಯ ಅಗತ್ಯ; ಶಾಂತಾರಾಮ ಸಿದ್ದಿ

    300x250 AD

    ಯಲ್ಲಾಪುರ: ದೇಶದಲ್ಲಿ ವಾಸಿಸುವ ಸುಮಾರು 10 ಕೋಟಿ ಬುಡಕಟ್ಟು ಸಮುದಾಯವು ಆರ್ಥಿಕವಾಗಿ ಮತ್ತು ಸಾಂಸ್ಕೃತಿಕವಾಗಿ ತಮ್ಮ ಜೀವನವನ್ನು ಸಾಗಿಸಲು ಅರಣ್ಯ ಪ್ರದೇಶವನ್ನೇ ಹೊಂದಿರುತ್ತದೆ. ಅರಣ್ಯದ ಕೃಷಿ ಭೂಮಿ ಹಾಗೂ ಅರಣ್ಯದ ಕೀರುಕಾಡು ಉತ್ಪನಗಳ ಆಧಾರದ ಮೇಲೆ ಅವರ ಜೀವನ ಅವಲಂಬಿತವಾಗಿದೆ ಎಂದು ಎಮ್‍ಎಲ್‍ಸಿ, ವನವಾಸಿ ಕಲ್ಯಾಣ ಪ್ರಾಂತ ಕಾರ್ಯದರ್ಶಿ ಶಾಂತಾರಾಮ ಸಿದ್ದಿ ಅಭಿಪ್ರಾಯ ಪಟ್ಟರು.
    ಅವರು ವನವಾಸಿ ಕಲ್ಯಾಣ ಪ್ರಾಂತ ಹಿತರಕ್ಷಕ ಪ್ರಮುಖ ಡೊಂದು ಪಾಟೀಲ್, ವನವಾಸಿ ಕಲ್ಯಾಣ ಜಿಲ್ಲಾ ಅಧ್ಯಕ್ಷ ನಾರಾಯಣ ಮರಾಟೆ ನೇತೃತ್ವದಲ್ಲಿ ಸಭೆ ನಡೆಸಿ ಮಾತನಾಡುತ್ತಿದ್ದರು.
    ಈ ಅರಣ್ಯ ಕೃಷಿ ಭೂಮಿ ಮತ್ತು ಕೀರುಕಾಡು ಉತ್ಪನ್ನಗಳು ಹಾಗೂ ಇತರೆ ಕಾಡು ಉತ್ಪನ್ನಗಳನ್ನು ಸಂಗ್ರಹ ಮಾಡುವಂತಹ ಸಾಮೂದಾಯಿಕ ಅರಣ್ಯ ಪ್ರದೇಶಗಳ ಹಕ್ಕು ಇದರಡನ್ನು ಬುಡಕಟ್ಟು ಜನರಿಗೆ ನೀಡುವಸಲುವಾಗಿ 2006 ರಲ್ಲಿ ರಚನೆಯಾದ ಕಾನೂನು “ಅರಣ್ಯ ಹಕ್ಕುಕಾಯ್ದೆ”.

    “ಅರಣ್ಯ ಹಕ್ಕು ಕಾಯ್ದೆಯು” ಕಳೆದ ವರ್ಷಗಳಿಂದ ಇಡೀ ದೇಶದಲ್ಲಿ ಹೇಳಿಕೊಳ್ಳುವಷ್ಟು ಸಾಧನೆ ಮಾಡಿದಂತಿಲ್ಲ. ಬೇರೆಬೇರೆ ರಾಜ್ಯಗಳಲ್ಲಿಯ ಅರಣ್ಯ ಇಲಾಖೆಯು ತಮ್ಮದೆ ಆದ ರೀತಿಯಲ್ಲಿ ಈ ಕಾನೂನನ್ನು ಅರ್ಥೈಸಿಕೊಂಡು ಕೆಲವು ರಾಜ್ಯಗಳಲ್ಲಿ ವ್ಯಯಕ್ತಿಕ ಅರಣ್ಯ ಹಕ್ಕು ಪತ್ರಗಳನ್ನು ಮಾತ್ರ ನೀಡಿದ್ದು ಉಳಿದ ಸಾಮೂದಾಯಿಕ ಅರಣ್ಯ ಹಕ್ಕು ಪತ್ರಗಳನ್ನು ನೀಡುವುದು ಹಾಗೆ ಬಾಕಿ ಇರುತ್ತದೆ. ಕರ್ನಾಟಕದಲ್ಲಿಯೂ ವೈಯಕ್ತಿಕ ಅರಣ್ಯ ಹಕ್ಕನ್ನು ಎಲ್ಲಾ ಬುಡಕಟ್ಟು ಜನರಿಗೆ ನೀಡದೆ ಕೆಲವರಿಗೆ ಮಾತ್ರ ನೀಡಿರುವುದು ನಮಗೆಲ್ಲ ತಿಳಿದಿರುವ ಸಂಗತಿ

    ಇದರ ಜೊತೆಗೆ ಸಾಮೂದಾಯಿಕ ಅರಣ್ಯ ಹಕ್ಕಿನ ಹಕ್ಕು ಪತ್ರಗಳು ಇದುವರೆಗೂ ಸಿಕ್ಕೆ ಇಲ್ಲ. ಬುಡಕಟ್ಟು ಜನರು ವಾಸಿಸುವ ಪ್ರದೇಶಗಳಲ್ಲಿನ ಕೀರುಕಾಡು ಉತ್ಪನ್ನಗಳ ಸಂಗ್ರಹಣೆ, ಸಂಸ್ಕರಣೆ, ಮಾರಾಟ, ಕಾಡು ಉಳಿಸುವುದು, ಬೆಳೆಸುವುದು ಮುಂತಾದ ಹಕ್ಕುಗಳನ್ನು ಬುಡಕಟ್ಟು ಸಮುದಾಯದವರಿಗೆ ಸಾಮೂದಾಯಿಕವಾಗಿ ಕೊಡಬೇಕೆನ್ನುವುದು, ಈ ಸಾಮೂದಾಯಿಕ ಅರಣ್ಯ ಹಕ್ಕು ಕಾಯ್ದೆಯ ನಿಯಮ. ಈ ವಿಷಯವಾಗಿ ಯಾವುದೇ ತೊಡಕು ಕಾನೂನಲ್ಲಿ ಇರುವುದಿಲ್ಲ ಆದರೆ ಅರಣ್ಯ ಇಲಾಖೆ ಮತ್ತು ಸಮಾಜ ಕಲ್ಯಾಣ ಇಲಾಖೆ (ಬುಡಕಟ್ಟು ವ್ಯವಹಾರಗಳ ಇಲಾಖೆ) ಇವರ ಸಮನ್ವಯದ ಕೊರತೆಯಿಂದ ಇವರೆಗೆ ಈ ಸಾಧನೆ ಬಹಳಕಡಿಮೆಯಾಗಿದೆ.

    ಇದನ್ನು ಅರ್ಥ ಮಾಡಿಕೊಂಡ ಅಖಿಲ ಭಾರತೀಯ ವನವಾಸಿ ಕಲ್ಯಾಣ ಆಶ್ರಮವು 18 ಜೂನ್ 2021 ರಂದು ಸಂಸ್ಥೆಯ ಅಖಿಲ ಭಾರತೀಯ ಹಿತರಕ್ಷ ಪ್ರಮುಖರಾದ ಗಿರೀಶ್ ಕುಬೇರ್ ರವರ ನೇತ್ರತ್ವದಲ್ಲಿ ಅನೇಕ ಕಾರ್ಯಕರ್ತರ ತಂಡ ಕೇಂದ್ರ ಪರಿಸರ ಮತ್ತು ಅರಣ್ಯ ವ್ಯವಹಾರಗಳ ಸಚಿವರಾದ ಪ್ರಕಾಶ್ ಜಾವಡೆಕರ್ ಮತ್ತು ಕೇಂದ್ರ ಬುಡಕಟ್ಟು ವ್ಯವಹಾರಗಳ ಸಚಿವರಾದ ಅರ್ಜುನ ಮುಂಡಾ ರವರನ್ನು ಭೇಟಿಮಾಡಿ ತಮ್ಮ ಮನವಿಯನ್ನು ನೀಡಿ ಈಗಿರುವ ಅರಣ್ಯ ಹಕ್ಕುಕಾಯ್ದೆಯ ಪ್ರಗತಿ ಮತ್ತು ಆಗಬೇಕಿರುವ ಅವಶ್ಯಕತೆಗಳ ಬಗ್ಗೆ ವಿವರ ನೀಡಿದರು.

    ಇದರ ಪರಿಣಾಮವಾಗಿ ಕೇಂದ್ರ ಅರಣ್ಯ ಮತ್ತು ಪರಿಸರ ಮಂತ್ರಿಗಳು ಹಾಗೂ ಬುಡಕಟ್ಟು ವ್ಯವಹಾರಗಳ ಮಂತ್ರಿಗಳು, ಎರಡೂ ಇಲಾಖೆಗಳ ಅಧಿಕಾರಿಗಳ ಜೊತೆಗೆ ಸಭೆಯನ್ನು ನಡೆಸಿ ಒಂದು ಜಂಟಿಘೋಷಣಾ ಪತ್ರವನ್ನು ಹೊರಡಿಸಿರುತ್ತಾರೆ .ಈ ಜಂಟಿ ಸುತ್ತೋಲೆ ಮತ್ತು ಆದೇಶಗಳ ಪ್ರಕಾರ ಇನ್ನು ಮುಂದೆ ಅರಣ್ಯ ಇಲಾಖೆ ಮತ್ತು ಬುಡಕಟ್ಟು ವ್ಯವಹಾರಗಳ ಇಲಾಖೆ ಮಾನವೀಯ ದೃಷ್ಟಿಯಿಂದ, ಸಮನ್ವಯತೆಯಿಂದ ಬುಡಕಟ್ಟುಗಳ ಅವಶ್ಯಕತೆಗೆ ತಕ್ಕಂತೆ ಅವರ

    ವೈಯಕ್ತಿಕ ಅರಣ್ಯ ಹಕ್ಕು ಪತ್ರ ಹಾಗೂ ಸಾಮೂದಾಯಿಕ ಅರಣ್ಯ ಹಕ್ಕು ಪತ್ರಗಳನ್ನು ನೀಡುವಂತಾಗಬೇಕು. ಆಗ ಮಾತ್ರ ಅರಣ್ಯ ಹಕ್ಕು ಕಾಯ್ದೆ ಸಮರ್ಥವಾಗಿ ಅನುಷ್ಠಾನ ಗೊಂಡಂತಾಗುತ್ತದೆ.

    ಈ ವರೆಗೆ ಆಗಿರುವ ಪ್ರಗತಿ ಅತ್ಯಂತ ಕಡಿಮೆಯಾಗಿರುವುದರಿಂದ ಮುಂದಿನ ದಿನಗಳಲ್ಲಿ ಅರಣ್ಯ ಹಕ್ಕುಕಾಯ್ದೆಗೆ ಸಂಬಂಧಪಟ್ಟಂತಹ ಗ್ರಾಮ ಸಭೆಗಳಲ್ಲಿ ಹೆಚ್ಚಿನ ಸದಸ್ಯರು ಮತ್ತು ಅಧ್ಯಕ್ಷ ಹಾಗೂ ಕಾರ್ಯದರ್ಶಿಗಳು ಬುಡಕಟ್ಟು ಸಮುದಾಯದವರ ಇರಬೇಕಲ್ಲದೆ, ಈ ಸಾಮೂದಾಯಿಕ ಅರಣ್ಯ ಹಕ್ಕನ್ನು ನೀಡುವ ನಿರ್ಧಾರವನ್ನು ಮತ್ತು ವೈಯಕ್ತಿಕ ಅರಣ್ಯ ಹಕ್ಕನ್ನು ನೀಡುವ ನಿರ್ಧಾರವನ್ನು ಈ ಗ್ರಾಮ ಸಭೆಯೆ ಮಾಡಬೇಕಾಗಿರುತ್ತದೆ.

    ಒಟ್ಟಾರೆಯಾಗಿ ಅರಣ್ಯ ಹಕ್ಕು ಕಾಯ್ದೆಯಲ್ಲಿ ರಾಜ್ಯದ ಅರಣ್ಯ ಇಲಾಖೆ ಮತ್ತು ಸಮಾಜ ಕಲ್ಯಾಣ ಇಲಾಖೆ ಸಮನ್ವಯದ ದೃಷ್ಟಿಯಿಂದ ಕೆಲಸ ಮಾಡುತ್ತಾ ಮುಂದೆ ಬರುವ ಎರಡು ವರ್ಷಗಳಲ್ಲಿ ಸಂಪೂರ್ಣವಾಗಿ ನೂರಕ್ಕನೂರು ಬುಡುಕಟ್ಟು ಕುಟುಂಬಗಳಿಗೆ ಸಾಮೂದಾಯಿಕ ಮತ್ತು ವೈಯಕ್ತಿಕ ಹಕ್ಕು ನೀಡುವಂತಾಗಬೇಕು ಎನ್ನುವುದು ಈ ದಿನದ ಮನವಿ.

    300x250 AD

    ಇನ್ನು ಮೇಲಾದರೂ ವನವಾಸಿ ಬುಡಕಟ್ಟು ಸಮುದಾಯದ ಸಮಸ್ಯೆಯನ್ನು ಪರಿಹರಿಸಲು ಅನುಕೂಲವಾಗಬಹುದು. ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಕಳದರೂ ಈ ವರೆಗೂ ಬುಡಕಟ್ಟು ಸಮುದಾಯ ವಿಶೇಷವಾಗಿ ರಾಮನಗರ, ಚಾಮರಾಜನಗರ, ಮೈಸೂರು, ಕೊಡಗು, ಚಿಕ್ಕಮಗಳೂರು, ಉಡುಪಿ, ದಕ್ಷಿಣಕನ್ನಡ, ಉತ್ತರಕನ್ನಡ. ಇನ್ನು ಅನೇಕ ಜಿಲ್ಲೆಗಳಲ್ಲಿ ಸರ್ಕಾರಿ ಸೌಲಭ್ಯಗಳನ್ನು ಪಡೆದಿರುವುದಿಲ್ಲ. ಉದಾಹರಣೆಗೆ ಮನ

    ವೈಯಕ್ತಿಕ ಅರಣ್ಯ ಹಕ್ಕು ಪತ್ರ ಹಾಗೂ ಸಾಮೂದಾಯಿಕ ಅರಣ್ಯ ಹಕ್ಕು ಪತ್ರಗಳನ್ನು ನೀಡುವಂತಾಗಬೇಕು. ಆಗ ಮಾತ್ರ ಅರಣ್ಯ ಹಕ್ಕು ಕಾಯ್ದೆ ಸಮರ್ಥವಾಗಿ ಅನುಷ್ಠಾನ ಗೊಂಡಂತಾಗುತ್ತದೆ.

    ಈ ವರೆಗೆ ಆಗಿರುವ ಪ್ರಗತಿ ಅತ್ಯಂತ ಕಡಿಮೆಯಾಗಿರುವುದರಿಂದ ಮುಂದಿನ ದಿನಗಳಲ್ಲಿ ಅರಣ್ಯ ಹಕ್ಕುಕಾಯ್ದೆಗೆ ಸಂಬಂಧಪಟ್ಟಂತಹ ಗ್ರಾಮ ಸಭೆಗಳಲ್ಲಿ ಹೆಚ್ಚಿನ ಸದಸ್ಯರು ಮತ್ತು ಅಧ್ಯಕ್ಷ ಹಾಗೂ ಕಾರ್ಯದರ್ಶಿಗಳು ಬುಡಕಟ್ಟು ಸಮುದಾಯದವರೆ ಇರಬೇಕಲ್ಲದೆ, ಈ ಸಾಮೂದಾಯಿಕ ಅರಣ್ಯ ಹಕ್ಕನ್ನು ನೀಡುವ ನಿರ್ಧಾರವನ್ನು ಮತ್ತು ವೈಯಕ್ತಿಕ ಅರಣ್ಯ ಹಕ್ಕನ್ನು ನೀಡುವ ನಿರ್ಧಾರವನ್ನು ಈ ಗ್ರಾಮ ಸಭೆಯೆ ಮಾಡಬೇಕಾಗಿರುತ್ತದೆ.

    ಒಟ್ಟಾರೆಯಾಗಿ ಅರಣ್ಯ ಹಕ್ಕು ಕಾಯ್ದೆಯಲ್ಲಿ ರಾಜ್ಯದ ಅರಣ್ಯ ಇಲಾಖೆ ಮತ್ತು ಸಮಾಜ ಕಲ್ಯಾಣ ಇಲಾಖೆ ಸಮನ್ವಯದ ದೃಷ್ಟಿಯಿಂದ ಕೆಲಸ ಮಾಡುತ್ತಾ ಮುಂದೆ ಬರುವ ಎರಡು ವರ್ಷಗಳಲ್ಲಿ ಸಂಪೂರ್ಣವಾಗಿ ನೂರಕ್ಕೆ ನೂರು ಬುಡುಕಟ್ಟು ಕುಟುಂಬಗಳಿಗೆ ಸಾಮೂದಾಯಿಕ ಮತ್ತು ವೈಯಕ್ತಿಕ ಹಕ್ಕು ನೀಡುವಂತಾಗಬೇಕು ಎನ್ನುವುದು ಈ ದಿನದ ಮನವಿ.

    ಇನ್ನು ಮೇಲಾದರೂ ಈ ವನವಾಸಿ ಬುಡಕಟ್ಟು ಸಮುದಾಯದ ಸಮಸ್ಯೆಯನ್ನು ಪರಿಹರಿಸಲು ಅನುಕೂಲವಾಗಬಹುದು. ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷ ಕ¼ಳೆದರೂ ಈ ವರೆಗೂ ಬುಡಕಟ್ಟು ಸಮುದಾಯ ವಿಶೇಷವಾಗಿ ರಾಮನಗರ, ಚಾಮರಾಜನಗರ, ಮೈಸೂರು, ಕೊಡಗು, ಚಿಕ್ಕಮಗಳೂರು, ಉಡುಪಿ, ದಕ್ಷಿಣಕನ್ನಡ, ಉತ್ತರಕನ್ನಡ ಇನ್ನು ಅನೇಕ ಜಿಲ್ಲೆಗಳಲ್ಲಿ ಸರ್ಕಾರಿ ಸೌಲಭ್ಯಗಳನ್ನು ಪಡೆದಿರುವುದಿಲ್ಲ. ಉದಾಹರಣೆಗೆ ಮನೆ, ಕುಡಿಯುವನೀರು, ರಸ್ತೆ, ವಿದ್ಯುತ್ ಮತ್ತು ಕೃಷಿಗೆ ಸಂಬಧಿಸಿದ ಸಹಾಯ, ಈ ರೀತಿ ಅನೇಕ ಸರ್ಕಾರಿ ಸೌಲಭ್ಯಗಳನ್ನು ಪಡೆಯಲು ಅರಣ್ಯ ಹಕ್ಕುಕಾಯ್ದೆ ಅನುಷ್ಠಾನ ಆಗದೇ ಇರುವುದು ದೊಡ್ಡ ಸಮಸ್ಯೆಯಾಗಿದೆ.

    ಹೀಗಾಗಿ ರಾಜ್ಯದ ಬುಡಕಟ್ಟು ಜನರ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಲು ಅರಣ್ಯ ಇಲಾಖೆ ಮತ್ತು ಸಮಾಜ ಕಲ್ಯಾಣ ಇಲಾಖೆ ಜಂಟಿಯಾಗಿ ಮಾನವಿಯ ದೃಷ್ಟಿಯಿಂದ ಪ್ರಾಮಾಣಿಕವಾಗಿ ಸಹಕರಿಸಬೇಕೆಂದು ಶಾಂತಾರಾಮ ಸಿದ್ದಿ ವಿನಂತಿಸಿದರು.

    Share This
    300x250 AD
    300x250 AD
    300x250 AD
    Leaderboard Ad
    Back to top