ಯಲ್ಲಾಪುರ:ತಾಲೂಕಿನ ಶಿರನಾಲಾ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳನ್ನು ಕೃಷಿ ಜಮೀನುಗಳಿಗೆ ಕರೆದೊಯ್ದು ಕೃಷಿ ಕುರಿತು ಮಾಹಿತಿ ನೀಡಲಾಯಿತು.
ವನಸಿರಿ ಇಕೊ ಕ್ಲಬ್ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಕಬ್ಬು, ಅಡಕೆ, ಚಿಕ್ಕು, ಕಾಳುಮೆಣಸು, ಜೇನು ಸಾಕಾಣಿಕೆ ಸೇರಿದಂತೆ ವಿವಿಧ ರೀತಿಯ ಕೃಷಿ ಚಟುವಟಿಕೆಗಳ ಕುರಿತು ಮಾಹಿತಿ ನೀಡಲಾಯಿತು.
ಶಿಕ್ಷಕ ಸತೀಶ ಶೆಟ್ಟಿ ಹಾಗೂ ಶಿಕ್ಷಕರು, ಪಾಲಕರು ಭಾಗವಹಿಸಿದ್ದರು.