ಶಿರಸಿ: ಅರಣ್ಯ ಭೂಮಿಯ 30 ವರ್ಷ ಹೋರಾಟದ ದಾಖಲೆಗಳ ಸ್ಮರಣ ಸಂಚಿಕೆಯು ಫೆ.17 ರ ಗುರುವಾರ ಮುಂಜಾನೆ 9 ಗಂಟೆಗೆ ನೌಕರ ಭವನ, ಕಬ್ಬನ್ ಪಾರ್ಕ ಆವರಣ ಬೆಂಗಳೂರಿನಲ್ಲಿ ಬಿಡುಗಡೆಗೊಳ್ಳಲಿದೆ.
ಈ ಕಾರ್ಯಕ್ರಮದಲ್ಲಿ ಸ್ಮರಣ ಸಂಚಿಕೆಯನ್ನು ವಿಧಾನ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಬಿಡುಗಡೆಗೊಳಿಸಲಿದ್ದಾರೆ. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಅರಣ್ಯ ಇಲಾಖೆ ಸಚಿವ ಉಮೇಶ ಕತ್ತಿ, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಬಿ.ಕೆ ಹರಿಪ್ರಸಾದ, ಸಮಾಜ ಕಲ್ಯಾಣ ಸಚಿವ ಶ್ರೀನಿವಾಸ ಪೂಜಾರಿ, ಶಾಸಕ ಹಾಗೂ ಮಾಜಿ ಕಾನೂನು ಸಚಿವ ಹೆಚ್.ಕೆ ಪಾಟೀಲ್,ಶಾಶ್ವತ ಹಿಂದುಳಿದ ವರ್ಗಗಳ ಪ್ರಥಮ ಅಧ್ಯಕ್ಷ ಪ್ರೋ.ರವಿವರ್ಮಕುಮಾರ, ಶಾಸಕ ಹಾಗೂ ಮಾಜಿ ಅರಣ್ಯ ಸಚಿವ ಸತೀಶ ಜಾರಕಿಹೊಳಿ ಆಗಮಿಸಲಿದ್ದಾರೆ.
ಮುನ್ನುಡಿ ನುಡಿಯನ್ನು ವಿಶ್ರಾಂತ ನ್ಯಾಯಮೂರ್ತಿ ಜಸ್ಟೀಸ್ ಹೆಚ್. ಎನ್ ನಾಗಮೋಹನದಾಸ್ ಅವರು ವಾಚಿಸಲಿದ್ದಾರೆ.
ಮಧ್ಯಾಹ್ನ 11:30 ಕ್ಕೆ ಹಿರಿಯ ಪತ್ರಕರ್ತರು, ಕಾನೂನು ತಜ್ಞರು, ರೈತ ಮುಖಂಡರು ಹಾಗೂ ವಿವಿಧ ರಾಜಕೀಯ ಪಕ್ಷದ ಧುರೀಣರೊಂದಿಗೆ ಅರಣ್ಯ ಭೂಮಿ ಹಕ್ಕು ಪರಿಹಾರದ ರಾಜ್ಯ ಮಟ್ಟದ ಸಮಾಲೋಚನಾ ಕೂಟ ನಡೆಯಲಿದೆ. ಮಧ್ಯಾಹ್ನ 1:00 ಗಂಟೆಗೆ ಸಮಾರೋಪ ಸಭೆ ಮತ್ತು ನಿರ್ಣಯ ಮಂಡನೆ ನಡೆಯಲಿದೆ.
ಸ್ಮರಣ ಸಂಚಿಕೆಯ ವಿಶೇಷ:
ಹೋರಾಟದ ಇತಿಹಾಸದಲ್ಲಿ ತನ್ನದೇ ಆದಂತಹ ಹೋರಾಟದ ಹಿನ್ನೆಲೆಯನ್ನು ಹೊಂದಿರುವ ಅರಣ್ಯ ಭೂಮಿ ಹಕ್ಕು ಹೋರಾಟದ ವೇದಿಕೆಯು 104 ಪುಟಗಳ ಸಮಗ್ರ ‘ಸ್ಮರಣ ಸಂಚಿಕೆ’ ತರುತ್ತೀದೆ. ವೇದಿಕೆಯ 30 ವರ್ಷ ಹೋರಾಟದ ದಾಖಲೆಗಳ ಸ್ಮರಣ ಸಂಚಿಕೆಯಲ್ಲಿ ವಿವಿಧ ಹೋರಾಟದ ಮಜಲುಗಳು ಮತ್ತು ಕಾನೂನು ಅಂಶಗಳನ್ನು ಸಹಿತ ಹೊಂದಿರುವುದು ಸ್ಮರಣ ಸಂಚಿಕೆಯ ವಿಶೇಷ.
ಉತ್ತರ ಕನ್ನಡ ಜಿಲ್ಲೆಯ ಕರ್ನಾಟಕದ ವಿವಿಧ 16 ಜಿಲ್ಲೆಗಳಲ್ಲಿ ಹಮ್ಮಿಕೊಂಡಿರುವಂತಹ ಸಾಂಘೀಕ ಹೋರಾಟ ಮತ್ತು ಅರಣ್ಯವಾಸಿಗಳಿಗೆ ಕಾನೂನು ಜಾಗೃತ, ಪ್ರತಿಭಟನೆ, ಪಾದಯಾತ್ರೆ, ರ್ಯಾಲಿ, ಉರುಳು ಸೇವೆ ಮುಂತಾದ ಚಿತ್ರಣಗಳನ್ನು ಸ್ಮರಣ ಸಂಚಿಕೆಯಲ್ಲಿ ದಾಖಲಿಸಿರುವುದು ಗಮನಾರ್ಹ.
ಅರಣ್ಯ ಭೂಮಿ ಹಕ್ಕನ್ನು ಪಡೆಯುವಲ್ಲಿ ಕಾನೂನಾತ್ಮಕ ತೊಡಕುಗಳಿಗೆ ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಪ್ರಸ್ತಾಪಿಸಿದ ಕಾನೂನಿನ ಅಂಶಗಳು, ಕೇಂದ್ರ ಮತ್ತು ರಾಜ್ಯ ಸರಕಾರದ ಅರಣ್ಯ ಭೂಮಿ ಮಂಜೂರಿಗೆ ಆದೇಶ ಪತ್ರ, ಹಂಗಾಮಿ ಲಾಗಣಿಗಾಗಿ ಖಾಯಂ ಲಾಗಣಿಗೆ ಸರಕಾರದಿಂದ ಸ್ಪಷ್ಟೀಕರಣ, ಜಿಲ್ಲೆ ಮತ್ತು ರಾಜ್ಯದ ಅರಣ್ಯವಾಸಿಗಳ ಅಂಕೆ-ಸಂಖ್ಯೆ ಮುಂತಾದ ದಾಖಲೆಗಳನ್ನೊಳಗೊಂಡ ಸ್ಮರಣ ಸಂಚಿಕೆ ಇದಾಗಿದೆ.