ಅಂಕೋಲಾ : ಅಂಗಡಿಯಲ್ಲಿ ಮಟಕಾ ಆಡಿಸುತ್ತಿದ್ದ ಎನ್ನುವ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೋಲೀಸರು ಓರ್ವನನ್ನು ಬಂಧಿಸಿದ ಘಟನೆ ತಾಲೂಕಿನ ಬಳಲೆ ಕನ್ನಡ ಶಾಲೆಯ ಬಳಿ ನಡೆದಿದೆ. ಮಂಜು ಯಾನೆ ಹನುಮಂತ ಮುಕುಂದ ನಾಯ್ಕ ಈತನೇ ಬಂಧಿತ ವ್ಯಕ್ತಿಯಾಗಿದ್ದಾನೆ.
ಮಾದನಗೇರಿ ಬಳಲೆಯಲ್ಲಿ ಅಂಗಡಿಯೊಂದನ್ನು ಇಟ್ಟುಕೊಂಡಿದ್ದ ಈತ ಹಣದ ಲಾಭಕ್ಕಾಗಿ ಮಟಕಾ ಜೂಜು ನಡೆಸುತ್ತಿದ್ದ ಎನ್ನಲಾಗಿದೆ. ಬಂಧಿತನಿಂದ ರೂ.2780 ಹಾಗೂ ಓಸಿ ಆಟಕ್ಕೆ ಬಳಸುತ್ತಿದ್ದ ಸಾಮಗ್ರಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಪಿ.ಎಸ್.ಐ ಪ್ರೇಮನಗೌಡ ಪಾಟೀಲ ದಾಳಿಯ ನೇತ್ರತ್ವ ವಹಿಸಿದ್ದು ಅಂಕೋಲಾ ಪೋಲೀಸ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.