ಹೊನ್ನಾವರ: ಸಾಮಾಜಿಕ ಜಾಲತಾಣದಲ್ಲಿ ಮಹಿಳೆಯೊರ್ವಳ ಅಶ್ಲೀಲ ವಿಡಿಯೋ ಹರಿಬಿಟ್ಟ ವ್ಯಕ್ತಿಯು,ಪ್ರಕರಣ ದಾಖಲಿಸಿದಕ್ಕೆ ಸಿಟ್ಟಿಗೆದ್ದು ತನ್ನ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ಆರೋಪಿಸಿ ಸಂತ್ರಸ್ಥ ಮಹಿಳೆ ಹೊನ್ನಾವರ ಪೋಲೀಸ್ ಠಾಣೆಯಲ್ಲಿ ರವಿವಾರ ದೂರು ನೀಡಿದ್ದಾಳೆ.
ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ನಮ್ಮ ಊರಿನ ದಂಡಿನದುರ್ಗಾ ದೇವಸ್ಥಾನದಲ್ಲಿ ಕಮೀಟಿಯವರ ಮಿಟಿಂಗ್ ಇದ್ದುದರಿಂದ ನನ್ನ ತಂಗಿ ಹಾಗೂ ನನ್ನ ಅಮ್ಮ ಇವರು ನನಗಾದ ಅನ್ಯಾಯದ ಬಗ್ಗೆ ಹಿರಿಯರನ್ನು ಕೇಳಲು ಹೋಗಿದ್ದರು. ಆಗ ಅಲ್ಲಿದ್ದ ಉಮೇಶ್ ಸಾರಂಗನು ನನ್ನನ್ನು ಕರೆಸುವಂತೆ ಹೇಳಿದ್ದರಿಂದ ನನ್ನ ತಂಗಿ ನನ್ನನ್ನು ಕರೆದು ಕೊಂಡು ಹೋಗಿದ್ದಳು. ನಾನು ಅಲ್ಲಿಗೆ ಹೋದಾಗ ಆರೋಪಿ, ಉಮೇಶ ಸಾರಂಗಮ ಒಮ್ಮಲೆ ನನ್ನ ಎರಡೂ ಕೈಗಳನ್ನು ಹಿಡಿದು ಕೊಂಡು ಎಲ್ಲಾ ತಪ್ಪನ್ನು ನೀವೇ ಮಾಡಿ ನನ್ನ ಮೇಲೆ ಹಾಕುತ್ತಿಯಾ ಅಂತ ಹೇಳಿ ನನ್ನ ಬಲಗೈಯನ್ನು ಗಟ್ಟಿಯಾಗಿ ತಿರುಪಿ ನನ್ನ ತಲೆ ಕೂದಲನ್ನು ಹಿಡಿದು ಎಳೆದು ಅವಮಾನ ಗೊಳಸಿ ಕೈಯಿಂದ ನನ್ನ ತಲೆ ಮೇಲೆ ಹೊಡೆದಿದ್ದಾನೆ. ಆಗ ಸಭೆಯಲ್ಲಿ ಹಾಜರಿದ್ದ ಕಿರಣ ಮೇಸ್ತಾ ಹಾಗೂ ಸಂತೋಷ ಮೇಸ್ತಾ ಹಾಗೂ ನನ್ನ ತಂಗಿ, ನನ್ನ ತಾಯಿ ಸೇರಿ ನನಗೆ ಮತ್ತೆ ಹೊಡೆಯುವದನ್ನು ತಪ್ಪಿಸಿದರು ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಈ ಪ್ರಕರಣ ದಾಖಲಿಸಿಕೊಂಡ ಪೋಲೀಸರು ತನಿಖೆ ಕೈಗೊಂಡಿದ್ದಾರೆ.