ಅಂಕೋಲಾ : ತಾಲೂಕಿನ ಕೇಣಿ ಗ್ರಾಮದ ಬಂಟ ಸಮಾಜದವರ ವತಿಯಿಂದ ಶೃಂಗೇರಿ ಗುರುಗಳ ಮಂತ್ರಾಕ್ಷತೆಯ ಅನ್ನಸಂತರ್ಪಣೆ ಪ್ರಸಾದ ವಿತರಣೆ ಸೋಮವಾರ ಕೇಣಿಯಲ್ಲಿ ನಡೆಯಿತು.
ಪ್ರತಿ ವರ್ಷ ಮಾಘ ಮಾಸದಲ್ಲಿ ಶೃಂಗೇರಿ ಕ್ಷೇತ್ರಕ್ಕೆ ತೆರಳಿ ಶ್ರೀ ಶ್ರೀ ಶ್ರೀ ಶೃಂಗೇರಿ ಜಗದ್ಗುರುಗಳ ದರ್ಶನ ಪಡೆದು ಅವರ ಆಶೀರ್ವಾದಕ್ಕೆ ಪಾತ್ರರಾಗುವ ಮೂಲಕ ಜಗದ್ಗುರುಗಳು ಆಶೀರ್ವಾದ ರೂಪದಲ್ಲಿ ನೀಡಿದ ಮಂತ್ರಾಕ್ಷತೆಯನ್ನು ತಂದು ಎಲ್ಲಾ ಸಮಾಜ ಬಾಂಧವರಿಗೆ ಅನ್ನಸಂತರ್ಪಣೆ ಮೂಲಕ ಪ್ರಸಾದ ನೀಡುವ ಪದ್ದತಿಯನ್ನು ಅನೇಕ ವರ್ಷಗಳಿಂದ ಆಚರಿಸಿಕೊಂಡು ಬರಲಾಗುತ್ತಿದೆ.ಈ ವರ್ಷ ಕೂಡ ಸಮಾಜದ ಹಿರಿಯರು ಪ್ರಸಾದ ವಿತರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಪುರಸಭೆ ಅಧ್ಯಕ್ಷೆ ಶಾಂತಲಾ ನಾಡಕರ್ಣಿ ಉಪಸ್ಥಿತರಿದ್ದು ಶೃಂಗೇರಿ ಗುರುಗಳ ಭಾವ ಚಿತ್ರಕ್ಕೆ ಪುಷ್ಪ ಸಮರ್ಪಿಸಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿ ಗ್ರಾಮಸ್ಥರು ಹೇಳಿದ ಹಾಗೆ ಗ್ರಾಮದ ಕುಂದು-ಕೊರತೆಗಳ ಬಗ್ಗೆ ಅಭಿವೃದ್ಧಿ ಕಾರ್ಯ ಮಾಡುವುದಾಗಿ ಭರವಸೆ ನೀಡಿದರು.
ಪುರಸಭೆ ಮಾಜಿ ಅಧ್ಯಕ್ಷ ಅರುಣ ನಾಡಕರ್ಣಿ ಹಾಗೂ ಸಮಾಜದ ಹಿರಿಯ ಹಾಗೂ ಪಿ ಎಮ್ ಹೈಸ್ಕೂಲ್ ನಿವೃತ್ತ ಪ್ರಾಚಾರ್ಯ ರವೀಂದ್ರ ಕೇಣಿ ಮಾತನಾಡಿದರು.
ನಂತರ ಬಂಟ ಸಮಾಜದ ವತಿಯಿಂದ ಶಾಂತಲಾ ನಾಡಕರ್ಣಿ ಹಾಗೂ ಅರುಣ ನಾಡಕರ್ಣಿಯವರಿಗೆ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಉತ್ತರ ಕನ್ನಡ ಜಿಲ್ಲೆಯ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿಯವರ ಆಪ್ತ ಕಾರ್ಯದರ್ಶಿ ರಾಜಕುಮಾರ ಬಂಟ, ಹಾಗೂ ಸ್ಥಳೀಯರು ಹಾಗೂ ಪುರಸಭೆ ಸದಸ್ಯೆ ಶೀಲಾ ಶೆಟ್ಟಿ ಹಾಗೂ ಬಂಟ ಸಮಾಜದ ಪ್ರಮುಖರು ಉಪಸ್ಥಿತರಿದ್ದರು. ಜೈಹಿಂದ್ ಹೈಸ್ಕೂಲ ಮುಖ್ಯಾಧ್ಯಾಪಕ ಪ್ರಭಾಕರ ಬಂಟ, ಸ್ವಾಗತಿಸಿದರು, ನ್ಯಾಯವಾದಿ ನಾಗಾನಂದ ಬಂಟ ನಿರೂಪಿಸಿದರು. ನಿವೃತ್ತ ಮುಖ್ಯಾಧ್ಯಾಪಕ ಮಹೇಶ್ ಬಂಟ ವಂದಿಸಿದರು.