ಶಿರಸಿ: ಲಯನ್ಸ್ ಕ್ಲಬ್ ಹಾಗೂ ಡಾ.ಎ.ಎನ್.ಪಟವರ್ಧನ ಪ್ರತಿಷ್ಠಾನದ ಸಹಯೋಗದಲ್ಲಿ ಶಿರಸಿಯ ರಾಮಕೃಷ್ಣ ಸ್ಟೂಡೆಂಟ್ ಹೊಂನಲ್ಲಿ ವಿಶೇಷ ಉಪನ್ಯಾಸ ಕಾರ್ಯಕ್ರಮ ನಡೆಯಿತು.
ಕೋವಿಡ್ ಸಂದರ್ಭದಲ್ಲಿ ರೋಗನಿರೋಧಕ ಶಕ್ತಿ ಬೆಳೆಸಿಕೊಳ್ಳುವದರ ಕುರಿತು ಡಾ.ಋತು ಪಟವರ್ಧನ ಮಾತನಾಡಿದರು. ದಿನನಿತ್ಯದ ಆಹಾರವನ್ನು ಸೂಕ್ತ ರೀತಿಯಲ್ಲಿ ಪರಿಶೀಲಿಸಿ ಕಾಲಕಾಲಕ್ಕೆ ತೆಗೆದುಕೊಳ್ಳುವದರಿಂದ ರೋಗನಿರೋಧಕ ಶಕ್ತಿ ವರ್ಧಿಸಲು ಸಹಾಯಕ. ಒಳ್ಳೆ ಆಹಾರದ ಜೊತೆ ಮಕ್ಕಳಿಗೆ ದಿನಿತ್ಯ ಎಂಟು ತಾಸುಗಳ ನಿದ್ದೆ ಕೂಡಾ ಪ್ರಮುಖವಾಗಿದೆ. ಸಾಮಾಜಿಕ ಅಂತರ ಕಾಪಾಡುವುದು ಮಾಸ್ಕ ಧರಿಸುವುದು ಕೂಡಾ ಪ್ರಮುಖವಾಗಿದೆ ಎಂದರು .
ದೇವರಕಾಡುಗಳ ಕುರಿತು ಹಿರಿಯ ಪತ್ರಕರ್ತೆ ಶ್ರೀಮತಿ ಶೈಲಜಾ ಗೋರನ್ಮನೆ ಉಪನ್ಯಾಸ ನೀಡಿದರು. ಅವರು ದೇವರಕಾಡುಗಳು ಈ ಹಿಂದೆ ನಮ್ಮ ಪೂರ್ವಜರು ಕಾಡಿನ ರಕ್ಷಣೆಯ ಸಲುವಾಗಿಯೇ ದೇವರ ಮೇಲಿನ ಭಯದಿಂದಾದರೂ ಕಾಡಿನ ನಾಶ ಆಗದಿರಲಿ ಎಂಬ ಸದಾಶಯದೊಂದಿಗೆ ರೂಪಿತವಾದ ಪ್ರದೇಶಗಳು.ನಾಗಬನ,ಚೌಡಿಬನ ಇತ್ಯಾದಿಗಳ ಹೆಸರಿನಲ್ಲಿ ಅತ್ಯಂತ ದಟ್ಟವಾದ ಕಾಡುಗಳು ಆ ಪ್ರದೇಶದಲ್ಲಿ ಬೆಳೆಯುವಂತೆ ನೋಡಿಕೊಂಡರು.ಈ ದೇವರ ಕಾಡುಗಳ ಸಂರಕ್ಷಣೆ ಅತ್ಯಗತ್ಯ ಹಾಗೂ ಈ ಕಲ್ಪನೆ ಬೇರೆ ಬೇರೆ ದೇಶಗಳಲ್ಲೂ ಇದೆ. ನಮ್ಮ ಜಿಲ್ಲೆಯಲ್ಲೇ ವ್ಯಾಪಕವಾದ ದೇವರಕಾಡುಗಳು, ಕಾಂಡ್ಲಾ ವನಗಳು ಇವೆ. ಇಂತಹ ಪ್ರದೇಶಗಳನ್ನು ಮಕ್ಕಳು ಬೇಟಿ ಮಾಡಿ ಅಲ್ಲಿಯ ಪರಿಸರವನ್ನು ಅರಿಯುವ ಕೆಲಸವನ್ನು ಮಾಡಬೇಕಿದೆ. ಹಾರ್ನಬಿಲ್ ಬಹಳ ಅಪರೂಪದ ಪಕ್ಷಿ ಪ್ರಬೇಧ. ಈ ಪ್ರಬೇಧದ ಉಳಿವಿಗಾಗಿ ದೇವರ ಕಾಡಿನ ಸಂರಕ್ಷಣೆ ಆಗಬೇಕಾಗಿದೆ ಎಂದು ನುಡಿದರು.
ಡಾ.ಎ.ಎನ್.ಪಟವರ್ಧನ ಪ್ರತಿಷ್ಠಾನದ ಟ್ರಷ್ಟಿಗಳಾದ ಲಯನ್. ಡಾ.ಮುಕುಂದ ಪಟವರ್ಧನ ಹಾಗೂ ಶಿರಸಿ ಲಯನ್ಸ ಕ್ಲಬ್ ಕಾರ್ಯದರ್ಶಿಗಳಾದ ಲಯನ್ ವಿನಯ ಹೆಗಡೆ ಬಸವನಕಟ್ಟೆ ಕಾರ್ಯಕ್ರಮದ ರೂಪು ರೇಷೆ ತಿಳಿಸಿದರು. ಕಾರ್ಯಕ್ರಮದ ಸಂಚಾಲಕರಾದ ಎಂ.ಜೆ.ಎಫ್.ಲಯನ್ ರಮಾ ಪಟವರ್ಧನ ಪ್ರಾಸ್ತಾವಿಕವಾಗಿ ಮಾತನಾಡಿದರು.
ಈ ಕಾರ್ಯಕ್ರಮದಲ್ಲಿ ಶಿರಸಿ ಲಯನ್ಸ ಕ್ಲಬ್ ಉಪಾಧ್ಯಕ್ಷರಾದ ಎಂ.ಜೆ.ಎಫ್.ಲಯನ್ ತ್ರಿವಿಕ್ರಮ ಪಟವರ್ಧನ, ಕೋಶಾಧ್ಯಕ್ಷರಾದ ಲಯನ್ ಅನಿತಾ ಹೆಗಡೆ, ಲಯನ್ ಶ್ರೀಕಾಂತ ಹೆಗಡೆ, ಲಯನ್ ವರ್ಷಾ ಪಟವರ್ಧನ, ಲಯನ್ ನಮಿತಾ ಪಟವರ್ಧನ ಹಾಜರಿದ್ದರು.