ಶಿರಸಿ: ರಾಜರಾಜೇಶ್ವರೀ ವಿದ್ಯಾಸಂಸ್ಥೆ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನ ಅಡಿಯಲ್ಲಿ ನಡೆಯುತ್ತಿರುವ ಶ್ರೀನಿಕೇತನ ಶಾಲೆಯ ಲಿಯೋ ಕ್ಲಬ್‍ನ ಮಕ್ಕಳು ಫೆ.13 ರಂದು ಲಿಯೋ ಅಡ್ವೈಸರ್ ಲಯನ್ ಅಶೋಕ ಹೆಗಡೆ, ಲಯನ್ಸ್ ಕ್ಲಬ್ ಶಿರಸಿ, ಸದಸ್ಯರು, ಶ್ರೀನಿಕೇತನ ಶಾಲೆಯ ಮುಖ್ಯಾಧ್ಯಾಪಕರಾದ ಶ್ರೀ ವಸಂತ ಭಟ್ಟ ಹಾಗು ಲಿಯೋ ಸಂಯೋಜಕರು ಸೇರಿ ಲಿಯೋ ಶೈಕ್ಷಣಿಕ ಪ್ರವಾಸ ಕೈಗೊಂಡರು.
ಸಿದ್ದಾಪುರದ ಲಯನ್ಸ್ ಕ್ಲಬ್‍ಗೆ ಭೇಟಿ ನೀಡಿ ಪಿಡಿಜಿ ಎಮ್.ಜೆ.ಎಫ್ ಲಯನ್ ಡಾ. ರವಿ ಹೆಗಡೆ ಹೂವಿನಮನೆ ಇವರಿಂದ ಲಿಯೋ ಕ್ಲಬ್ ಮಾಹಿತಿ ಪಡೆದುಕೊಂಡರು.
ಶ್ರೀನಿಕೇತನ ಶಾಲೆಯ ಲಿಯೋ ಕ್ಲಬ್,ಕಾರ್ಯದರ್ಶಿಯಾದ ಲಿಯೋ ಸಿರಿ ಅಶೋಕ ಹೆಗಡೆ 2021-2022 ರ ಈವರೆಗಿನ ಸೇವೆಗಳ ವರದಿ ವಾಚಿಸಿದಳು. ಲಿಯೋ ಕ್ಲಬ್ ಶ್ರೀನಿಕೇತನ ಶಾಲೆಯ ಲಿಯೋಗಳು ಮುರುಗರಾಜೇಂದ್ರ ಅಂಧ ಮಕ್ಕಳ ಶಾಲೆಗೆ ಭೇಟಿ ಕಿರುಕಾಣಿಕೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಲಯನ್ ಅಶೋಕ ಹೆಗಡೆಯವರು ರೂ. 5000 ದೇಣಿಗೆ ನೀಡಿದರು.ಲಿಯೋ ಕ್ಲಬ್ ಶ್ರೀನಿಕೇತನ ಹಾಗು ಲಿಯೋ ಕ್ಲಬ್ ಹೊನ್ನಾವರ ಇವರು ಕ್ಲಬ್ ಟ್ವಿನ್ನಿಂಗ್ (ಲಿಯೋ ಸಹಭಾಗಿತ್ವ) ನಡೆಸಿದರು.
ನಂತರ ಎರಡೂ ಕ್ಲಬ್‍ನ ಲಿಯೋಗಳು ಗುರುಕುಲ, ಕರ್ಕಿ ಮಿಜೋರಾಮ್ ನಿರಾಶ್ರಿತ ಮಕ್ಕಳ ಶಾಲೆಗೆ ಭೇಟಿ ನೀಡಿ ಕಿರುಕಾಣಿಕೆ ಸಲ್ಲಿಸಿದರು ಇಲ್ಲಿಯೂ ಸಹ ಲಯನ್ ಅಶೋಕ ಹೆಗಡೆ ಇವರು ರೂ. 5000 ದೇಣಿಗೆ ನೀಡಿದರು. ಲಿಯೋಗಳು ಕಾಂಡ್ಲಾ ವನ, ಇಕೋ ಬೀಚ್ ನಲ್ಲಿಆಟ ಆಡಿ ಆನಂದಿಸಿದರು.