ಕಾರವಾರ: ಶೇಜವಾಡ ಉಪಕೇಂದ್ರದಲ್ಲಿ ಶಕ್ತಿ ಪರಿವರ್ತಕದ ತುರ್ತು ನಿರ್ವಹಣೆ ಕೆಲಸ ಕೈಕೊಂಡಿರುವುದರಿಂದ ಫೆ.16 ರಂದು ಬುಧವಾರ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.
ಕೆ.ಎಚ್.ಬಿ, ತೆಲಂಗ ರೋಡ್, ನಂದನಗದ್ದಾ, ಸುಂಕೇರಿ ಹಾಗೂ ಶಿರವಾಡ ಪ್ರದೇಶಗಳಲ್ಲಿ ತುರ್ತು ನಿರ್ವಹಣೆ ಕೆಲಸ ಕೈಕೊಂಡಿರುವುದರಿಂದ ಬೆಳಗ್ಗೆ 9 ರಿಂದ ಸಾಯಂಕಾಲ 7 ಗಂಟೆಯವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದ್ದು, ಈ ಸಂದರ್ಭದಲ್ಲಿ ಗ್ರಾಹಕರು ಸಹಕರಿಸಬೇಕೆಂದು ಹೆಸ್ಕಾಂ ತಿಳಿಸಿದೆ.