ಧಾರವಾಡ: ಅರ್ಜುನ ವಿಜ್ಞಾನ ಪಿಯು ಕಾಲೇಜ್,ಧಾರವಾಡದ ವಿದ್ಯಾರ್ಥಿ ಪ್ರಣೀತ್ ಕಡ್ಲೆ ಈತನು 2021ರ ನೀಟ್ ಪರೀಕ್ಷೆಯಲ್ಲಿ 720 ಕ್ಕೆ 658 ಅಂಕಗಳನ್ನು ಗಳಿಸಿ ಇಡೀ ಭಾರತಕ್ಕೆ 2880 ನೇ ರ‍್ಯಾಂಕ್ ಪಡೆದು ಭಾರತದ ಉನ್ನತ ವೈದ್ಯಕೀಯ ಸಂಸ್ಥೆಗಳಲ್ಲಿ ಒಂದಾದ ಪುಣೆಯ ಸಶಸ್ತ್ರ ಪಡೆಗಳ ವೈದ್ಯಕೀಯ ಕಾಲೇಜಿಗೆ (AFMC) ಆಯ್ಕೆಯಾಗಿದ್ದಾನೆ.
ಈತನ ಸಾಧನೆಗೆ ಅರ್ಜುನ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿ, ಪ್ರಾಂಶುಪಾಲರು, ಎಲ್ಲಾ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಶುಭ ಹಾರೈಸಿದ್ದಾರೆ.