ಹೊನ್ನಾವರ: ತಾಲೂಕಿನ ಹಳದೀಪುರ ಮೀನು ಮಾರುಕಟ್ಟೆ ಕ್ರಾಸ್ ಬಳಿ ಬೈಕ್ ಸವಾರನ ಮೇಲೆ ಲಾರಿ ಹರಿದು ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ.
ಹೆಬ್ಬಾರ್ನಕೆರೆ ನಿವಾಸಿ ನಿವೃತ್ತ ಕಾನ್ ಸ್ಟೇಬಲ್ ರಾಘವೇಂದ್ರ ಸುಬ್ಬಾ ರಾವ್ (42) ಮೃತ ದುರ್ದೈವಿ ಎಂದು ಗುರುತಿಸಲಾಗಿದೆ.
ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಕುಮಟಾ ಕಡೆಯಿಂದ ಹೊನ್ನಾವರ ಕಡೆಗೆ ಹೋಗಲು ಬಂದ ಲಾರಿ ಚಾಲಕನಾದ ಅಸ್ಲಾಂ ಖಾನ್ ಅಯೂಬ್ (36 ) ಪಾವಸರ, ಕೊಟ್ ಪಲವಲ್ ಜಿಲ್ಲಾ ಹರಿಯಾಣ ರಾಜ್ಯ ಈತನು ಲಾರಿಯನ್ನು ಅತಿವೇಗ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿ ಕೊಂಡು ಬಂದು ತನ್ನ ಮುಂದೆ ಹೋಗುತ್ತಿದ್ದ ಮೋಟಾರ ಸೈಕಲ್ ಡಿಕ್ಕಿ ಹೊಡೆದರ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾನೆ.