ಕಾರವಾರ: ನಗರದ ಬಾಡದಲ್ಲಿರುವ ಪದ್ಮನಾಭ ತೀರ್ಥ ಮಹಾರಾಜರ ಮಠವಾದ ಗುರುಮಠದಿಂದ ರವಿವಾರ ಸಿದ್ದಾಪುರದ ಕೊಂಡ್ಲಿ ಹಾಳದಕಟ್ಟಾದಲ್ಲಿರುವ ಪಾದುಕಾ ಮಠಕ್ಕೆ (ದತ್ತ ಮಂದಿರ) ಪಾದಯಾತ್ರೆ ಆರಂಭವಾಯಿತು.
ಫೆ.17ರ ಗುರುವಾರ ಪಾದುಕಾ ಮಠದಲ್ಲಿ ಗುರು ಪ್ರತಿಪದಾ ಉತ್ಸವ ಜರುಗಲಿದ್ದು ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಭಕ್ತರು ಪಾದಯಾತ್ರೆ ಹೊರಟಿದ್ದಾರೆ. ಈ ಪಾದಯಾತ್ರೆಯು ಕುಮಟಾ ಮೂಲಕ ಹಾಯ್ದು ಚಂದಾವರ, ದೊಡ್ಮನೆಯ ಮೂಲಕ ಬುಧವಾರ ತಲುಪಲಿದೆ.
ಪಾದಯಾತ್ರೆಯಲ್ಲಿ ಹಿರಿಯ ನಾಗರಿಕರೂ ಭಾಗವಹಿಸಿದ್ದು ಇವರಲ್ಲಿ ಹಲವರು ಪ್ರತಿವರ್ಷ ಪಾದಯಾತ್ರೆಯ ಮೂಲಕ ಸಿದ್ದಾಪುರಕ್ಕೆ ಹೋಗುವ ಪ್ರತೀತಿ ಬೆಳೆಸಿಕೊಂಡಿದ್ದಾರೆ.
ಪಾದಯಾತ್ರೆಯಲ್ಲಿ ಭಾಗವಹಿಸಿದ ಭಕ್ತರಿಗೆ ಗುರುಮಠದ ಸಮೀತಿ ಹಾಗೂ ಭಕ್ತರು ಶುಭ ಹಾರೈಸಿ ಬೀಳ್ಕೊಟ್ಟರು.