ಕಾರವಾರ: ಗುರುಭವನದಲ್ಲಿ ಲಯನ್ಸ್ ಕ್ಲಬ್ ಕಾರವಾರ ವತಿಯಿಂದ ಫೆಬ್ರುವರಿ 10 ರಂದು ಉಚಿತ ಕಣ್ಣಿನ ಪೊರೆ ತಪಾಸಣಾ ಶಿಬಿರವನ್ನು ಆಯೋಜಿಸಿತ್ತು. ಒಟ್ಟು 37 ಜನರು ತಪಾಸಣೆಗೊಳಪಟ್ಟವರಲ್ಲಿ 8 ಜನರನ್ನು ಕುಮಟಾದ ಲಯನ್ಸ್ ರೇವಣಕರ ಧರ್ಮಾರ್ಥ ಕಣ್ಣಿನ ಆಸ್ಪತ್ರೆಯಲ್ಲಿ ಕಣ್ಣಿನ ಪೊರೆ (ಮೋತಿ ಬಿಂದು)ಗಾಗಿ ಶಸ್ತ್ರ ಚಿಕಿತ್ಸೆ ಮಾಡಲಾಯಿತು. ಶಸ್ತ್ರ ಚಿಕಿತ್ಸೆಗೊಳಪಟ್ಟವರನ್ನು ಫೆಬ್ರುವರಿ 12 ರಂದು ಕುಮಟಾ ಆಸ್ಪತ್ರೆಯಿಂದ ಬಿಡುಗಡೆಗೊಳಿಸಿ ಕಾರವಾರಕ್ಕೆ ಕರೆ ತಂದು ಅವರ ಕುಶಲೋಪಚಾರ ವಿಚಾರಿಸಿ ಬಿಳ್ಳೊಟ್ಟರು.
ಈ ಸಂದರ್ಭದಲ್ಲಿ ಕಾರವಾರದ ಲಾಯನ್ಸ್ ಕ್ಲಬ್ಬಿನ ಅಧ್ಯಕ್ಷರು ಹಾಗೂ ಸದಸ್ಯರು ಉಪಸ್ಥಿತರಿದ್ದರು