• Slide
    Slide
    Slide
    previous arrow
    next arrow
  • ಫೆ.15,16ಕ್ಕೆ ಮಳಲಿಯ ವೀರಭದ್ರೇಶ್ವರ ದೇವಾಲಯದ ವಾರ್ಷಿಕ ಸಮಾರಾಧನೆ

    300x250 AD

    ಶಿರಸಿ: ಮಳಲಿಯ ವೀರಭದ್ರೇಶ್ವರ ದೇವಾಲಯದ 20ನೇ ವರ್ಷದ ವಾರ್ಷಿಕ ಸಮಾರಾಧನೆಯನ್ನು ಫೆ.15 ರ ಮಂಗಳವಾರ ಆಯೋಜಿಸಲಾಗಿದೆ.

    ಪ್ಲವನಾಮ ಸಂವತ್ಸರದ ಮಾಘ ಚತುರ್ದಶಿಯ ಮಂಗಳವಾರ ಬೆಳಗ್ಗೆ 9-00 ರಿಂದ ಗಣಹವನ, ರುದ್ರಾಭಿಷೇಕ, ಮಂಗಳಾರತಿ, ಪ್ರಸಾದ ವಿತರಣೆ ನಡೆಯಲಿದೆ.

    ಫೆ.16 ರ ಬುಧವಾರ ಮಾಘ ಹುಣ್ಣಿಮೆಯಂದು ಬೆಳಗ್ಗೆ 8-00 ರಿಂದ 9-00ರವರೆಗೆ ಗುಗ್ಗಳ ಕಾರ್ಯಕ್ರಮ, ಬೆಳಗ್ಗೆ 10-00ರಿಂದ ವೇದಮೂರ್ತಿ ಕುಮಾರ ಭಟ್ಟರು ಕೊಳಗಿಬೀಸ ಇವರ ಆಚಾರ್ಯತ್ವದಲ್ಲಿ ಸಾಮೂಹಿಕ ಸತ್ಯನಾರಾಯಣ ವೃತ , ಮಧ್ಯಾಹ್ನ 12-30 ರಿಂದ ಮಹಾಮಂಗಳಾರತಿ ಮತ್ತು ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಲಿದೆ.

    ಅದೇ ದಿನ ರಾತ್ರಿ 7-00 ರಿಂದ ಸಭಾ ಕಾರ್ಯಕ್ರಮ ಜರುಗಲಿದೆ.

    300x250 AD

    ಕಾರ್ಯಕ್ರಮವನ್ನು ಶಿರಸಿಯ ಜಿಲ್ಲಾ ಹೋರಾಟ ಸಮಿತಿಯ ಅಧ್ಯಕ್ಷರಾದ ಉಪೇಂದ್ರ ಪೈ ಉದ್ಘಾಟಿಸಲಿದ್ದು, ಮೊಕ್ತಸರರಾದ ಈರಪ್ಪಯ್ಯ ಶಂಕರ ಗೌಡ ತಾರೇಹಳ್ಳಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಉದ್ಯಮಿ ಶಂಕರ ದೀವೇಕರ ದೇವನಳ್ಳಿ, ಹಾರೂಗಾರ ಸೇ.ಸ.ಸಂಘ.ನಿ.ಗೋಳಿಯ ಅಧ್ಯಕ್ಷರಾದ ಗುರುಪಾದ ಎಮ್. ಹೆಗಡೆ, ನೆಗ್ಗು ಗ್ರಾ.ಪಂಚಾಯತ ಅಧ್ಯಕ್ಷೆ ನಾಗವೇಣಿ ಆಚಾರಿ,ನೆಗ್ಗು ಗ್ರಾ.ಪಂ ಸದಸ್ಯರಾದ ಮಂಜುನಾಥ ಚಂದ್ರು ಗೌಡ ಮಳಲಿ,ಲಲಿತಾ ಮುಕ್ತಿ , ಕ.ಒ.ಕ್ಷೇ ಸಂಘದ ಅಧ್ಯಕ್ಷ ಅರುಣ ಬಿ ಗೌಡ ಮಳಲಿ ಹಾಗೂ ಊರಿನ ಹಿರಿಯರಾದ ನಾರಾಯಣ ಗಣಪಾ ಗೌಡ ಮಳಲಿ ಇವರ ಉಪಸ್ಥಿತಿಯಲ್ಲಿ ಕಾರ್ಯಕ್ರಮ ನಡೆಯಲಿದೆ.

    ಸಭಾ ಕಾರ್ಯಕ್ರಮದ ನಂತರ ರಾತ್ರಿ 9.30ರಿಂದ ಶಾಲಾ ಮಕ್ಕಳಿಂದ ಮನರಂಜನಾ ಕಾರ್ಯಕ್ರಮ ಜರುಗಲಿದ್ದು, ರಾತ್ರಿ 10-30ಕ್ಕೆ ವೀರಭದ್ರ ಹವ್ಯಾಸಿ ನಾಟ್ಯಕಲಾ ಸಂಘ ಮಳಲಿ ಇವರಿಂದ ನಾಟಕ ಪ್ರದರ್ಶನಗೊಳ್ಳಲಿದೆ.

    ಈ ಎಲ್ಲಾ ಕಾರ್ಯಕ್ರಮಗಳಿಗೆ ಆಗಮಿಸುವ ಎಲ್ಲರೂ ಕೊರೊನಾ ನಿಯಮಾವಳಿ ಪ್ರಕಾರ ಸಾಮಾಜಿಕ ಅಂತರ ಕಾಯ್ದುಕೊಳ್ಳುವದು ಮತ್ತು ಮಾಸ್ಕ್ ಧರಿಸುವದು ಕಡ್ಡಾಯವಾಗಿದೆ ಎಂದು ಪ್ರಕಟಣೆ ತಿಳಿಸಿದೆ.

    Share This
    300x250 AD
    300x250 AD
    300x250 AD
    Leaderboard Ad
    Back to top