ಹೊನ್ನಾವರ: ನನ್ನ ಅವಧಿಯಲ್ಲಿ ಜನರ ಬೇಡಿಕೆಗಳು ಹಂತಹಂತವಾಗಿ ಈಡೇರುತ್ತಿದೆ ಅಭಿವೃದ್ಧಿ ಪರ್ವ ಆರಂಭವಾಗಿದೆ ಎಂದು ಭಟ್ಕಳ-ಹೊನ್ನಾವರ ವಿಧಾನಸಭಾ ಕ್ಷೇತ್ರದ ಶಾಸಕ ಸುನೀಲ್ ನಾಯ್ಕ ಹೇಳಿದರು.
ತಾಲೂಕಿನ ಖರ್ವಾ ಗ್ರಾಮದ ನಾಗೇಶ್ವರ ರಸ್ತೆ ಕಾಮಗಾರಿಗೆ ಶಿಲನ್ಯಾಸ ನೆರವೇರಿಸಿ ಅವರು ಮಾತನಾಡಿದರು. ಈಗಾಗಲೇ 60-70 ಕೋಟಿಯಷ್ಟು ಅನುದಾನ ಗ್ರಾಮೀಣ ಭಾಗದ ರಸ್ತೆಗೆ ಅನುದಾನ ಲಭಿಸಿದೆ.ಜನರಿಗೆ ಅನೂಕೂಲ ಮಾಡಿಕೊಡುವ ದ್ರಷ್ಟಿಯಿಂದ ಗ್ರಾಮೀಣ ಭಾಗದಲ್ಲಿಯೇ ಹೆಚ್ಚು ರಸ್ತೆ ಹಾಕಿದ್ದೇನೆ. ಇನ್ನೂ ಸಹ 470 ರಸ್ತೆಗಳು ಬಾಕಿ ಇದೆ.ಮುಂದಿನ ದಿನಗಳಲ್ಲಿ ಈ ರಸ್ತೆಯ ಕಾಮಗಾರಿ ನಡೆಸುತ್ತೇನೆ ಎಂದು ಭರವಸೆ ನೀಡಿದರು. ನಾಗೇಶ್ವರ-ನಾಥಗೇರಿ ರಸ್ತೆಗೆ ಒಟ್ಟು 75 ಲಕ್ಷ ಮಂಜೂರಿಯಾಗಿದೆ,ಎರಡು ಬ್ರಿಡ್ಜ್ ನಿರ್ಮಾಣವಿದೆ. ಶೀಘ್ರದಲ್ಲೇ ಕಾಮಗಾರಿ ಆರಂಭವಾಗಲಿದೆ ಎಂದರು.
ಹಿಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯುರಪ್ಪ ಹಾಗೂ ಹಾಲಿ ಮುಖ್ಯಮಂತ್ರಿ ಎಸ್.ಆರ್ ಬೊಮ್ಮಾಯಿಯವರ ಅವಧಿಯಲ್ಲಿ ನನ್ನ ಮತ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ಬರುವ ಮೂಲಕ ಇತಿಹಾಸ ಸ್ರಷ್ಟಿಯಾಗಿದೆ.ಕುಡಿಯುವ ನೀರಿನ ಯೋಜನೆ, ಮುಖ್ಯಮಂತ್ರಿ ಪರಿಹಾರ ನಿಧಿ,ರಸ್ತೆ, ಸೇತುವೆ ಸೇರಿದಂತೆ ಎಲ್ಲಾ ಬೇಡಿಕೆಗಳು ಈಡೇರುತ್ತಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಈ ಹಿಂದೆ ಅಭಿವೃದ್ಧಿ ಎನ್ನುವುದು ಕೇವಲ ಪ್ಲೆಕ್ಸ್ ,ಬೊರ್ಡ ಗಳಲ್ಲಿ ಕಂಡಿದ್ದು ಮಾತ್ರವಾಗಿತ್ತು, ಇಗ ಜನರ ಕಣ್ಣಿಗೆ ಅಭಿವೃದ್ಧಿ ಕಾಣುತ್ತಿದೆ.
ಸರ್ಕಾರ ಅನುದಾನ ನೀಡಿದ ಪ್ರಕಾರ ನನ್ನ ಕ್ಷೇತ್ರ ವ್ಯಾಪ್ತಿಯಲ್ಲಿ ಗುಣಮಟ್ಟದ ಕಾಮಗಾರಿ ನಡೆಯಬೇಕು.ಇದರಲ್ಲಿ ಯಾವುದೇ ರಾಜಿಯಾಗುವ ಪ್ರಶ್ನೆಯೇ ಇಲ್ಲ.ಕಳಪೆಯಾದಲ್ಲಿ ಮುಲಾಜಿಲ್ಲದೇ ಗುತ್ತಿಗೆದಾರರನ್ನು ಬ್ಲ್ಯಾಕ್ ಲಿಸ್ಟ್ ಗೆ ಸೇರಿಸುತ್ತೇನೆ ಎಂದು ಖಡಕ್ ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಖರ್ವಾ ಗ್ರಾಮ ಪಂಚಾಯತ ಸದಸ್ಯ ಸಂತೋμï ನಾಯ್ಕ,ಹಡಿನಬಾಳ ಗ್ರಾಮ ಪಂಚಾಯತ ಸದಸ್ಯ ಸಚೀನ್ ಶೇಟ್, ಚಿಕ್ಕನಕೊಡ್ ಗ್ರಾಮ ಪಂಚಾಯತ ಅಧ್ಯಕ್ಷ ವಿಘ್ನೇಶ್ವರ ಹೆಗಡೆ,ಹೆರಂಗಡಿ ಗ್ರಾಮ ಪಂಚಾಯತ ಅಧ್ಯಕ್ಷ ಪ್ರಮೋದ್ ನಾಯ್ಕ,ಜಲವಳ್ಳಿ ವಿಎಸ್ ಎಸ್ ಅಧ್ಯಕ್ಷ ಜಯಂತ ನಾಯ್ಕ,ಗ್ರಾಮಸ್ಥರಾದ ಟಿ.ಎಚ್ ಗೌಡ,ಗಣಪತಿ ನಾಯ್ಕ,ಸುಬ್ರಾಯ ನಾಯ್ಕ,ಪರಮೇಶ್ವರ ನಾಯ್ಕ, ಗುತ್ತಿಗೆದಾರರಾದ ಸಿ.ಬಿ ನಾಯ್ಕ ಮತ್ತಿತರಿದ್ದರು.