ಅಂಕೋಲಾ : ರಸ್ತೆ ಕೆಲಸಕ್ಕೆ ತೆರಳಿದ್ದ ಕಾರ್ಮಿಕರ ವಾಹನ ಪಲ್ಟಿಯಾಗಿ ವಾಹನದಲ್ದಲಿದ್ದ 9 ಜನ ಕಾರ್ಮಿಕ ರಿಗೆ ಗಾಯಗಳಾದ ಘಟನೆ ತಾಲೂಕಿನ ಆಚವೆ ಗ್ರಾಪಂ ವ್ಯಾಪ್ತಿಯ ವಾಡಗಾರದಲ್ಲಿ ಶನಿವಾರ ರಾತ್ರಿ ನಡೆದಿದೆ.
ವಾಡಗಾರ ಘಟ್ಟದ ಪ್ರದೇಶದ ರಸ್ತೆಯಲ್ಲಿ ತೆರಳುತ್ತಿರುವಾಗ ಟಾಟಾ 407 ಗಾಡಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಪರಿಣಾಮ ಗಾಡಿಯಲ್ಲಿದ್ದ ಮೂವರಿಗೆ ಗಂಭೀರ ಗಾಯಗಳಾಗಿದ್ದು, ಆರು ಮಂದಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಗಾಯಾಳುಗಳನ್ನ ಸ್ಥಳೀಯರು ತಮ್ಮ ವಾಹನದಲ್ಲಿ ಅಂಕೋಲಾ ತಾಲೂಕಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದ್ದು ಮೂವರನ್ನು ಹೆಚ್ಚಿನ ಚಿಕಿತ್ಸೆಗೆ ಕಾರವಾರ ಜಿಲ್ಲಾಸ್ಪತ್ರೆಗೆ ಸಾಗಿಸಲಾಗಿದೆ.
ಅಪಘಾತ ನಡೆದ ಸ್ಥಳ ತಾಲೂಕು ಕೇಂದ್ರದಿಂದ 50 ಕಿಮಿ ಆಗಿದ್ದು ಸ್ಥಳದಲ್ಲಿ ಯಾವುದೇ ಆಂಬುಲೆನ್ಸ್ ಇಲ್ಲದ ಕಾರಣ ಸ್ಥಳೀಯರಾದ ಉದಯ ಹೆಗಡೆ ಮತ್ತು ಗಣೇಶ್ ನಾಯ್ಕ ಮಾಬಗಿ ಎಂಬಾತರು ತಕ್ಷಣ ಧಾವಿಸಿ ಗಾಯಾಳುಗಳನ್ನು ರಕ್ಷಿಸಿದ್ದಾರೆ.
ಈ ಕುರಿತು ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.