• Slide
  Slide
  Slide
  previous arrow
  next arrow
 • ಅಂಕೋಲಾದಲ್ಲಿ ಜಿಲ್ಲಾ ಕಸಾಪದ ಮೊದಲ ಕಾರ್ಯಕಾರಿಣಿ ಸಭೆ

  300x250 AD

  ಅಂಕೋಲಾ: ಉತ್ತರ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಥಮ ಜಿಲ್ಲಾ ಕಾರ್ಯಕಾರಿ ಸಮಿತಿ ಸಭೆ ಜಿಲ್ಲಾ ಕಸಾಪ ಅಧ್ಯಕ್ಷ ಬಿ. ಎನ್. ವಾಸರೆಯವರ ಅಧ್ಯಕ್ಷತೆಯಲ್ಲಿ ಅಂಕೋಲಾದಲ್ಲಿ ನಡೆಯಿತು.

  ಸಭೆಯಲ್ಲಿ ಕಸಾಪ ಜಿಲ್ಲಾ ಸಮಿತಿಯ ನೂತನ ಪದಾಧಿಕಾರಿಗಳನ್ನು ಹಾಗೂ ಎಲ್ಲ ತಾಲೂಕುಗಳ ಅಧ್ಯಕ್ಷರುಗಳನ್ನು ಪರಿಚಯಿಸಿ, ಕಸಾಪದ ನಿಬಂಧನಾ ಪುಸ್ತಕವನ್ನು ನೀಡಿ ಸ್ವಾಗತಿಸಲಾಯಿತು.

  ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಕಸಾಪ ಅಧ್ಯಕ್ಷ ಬಿ. ಎನ್. ವಾಸರೆಯವರು ತಕ್ಷಣ ತಾಲೂಕು ಘಟಕಗಳ ಕಾರ್ಯಕಾರಿ ಸಮಿತಿಯನ್ನು ರಚಿಸಿ ಹೆಚ್ಚೆಚ್ಚು ಕನ್ನಡದ ಕಾರ್ಯಕ್ರಮ ನಡೆಸಲು ತೊಡಗಿಸಿಕೊಳ್ಳಬೇಕು. ಕೇವಲ ಸಾಹಿತ್ಯ ಸಮ್ಮೇಳನಗಳಿಗೆ ಸಂಘಟನೆಯನ್ನು ಸೀಮಿತಗೊಳಿಸುವ ಶಾಲೆಗಳತ್ತ ಸಾಹಿತಿಗಳು, ಹಳಗನ್ನಡ ಓದು, ಪುಸ್ತಕ ಬಿಡುಗಡೆ ಕಾರ್ಯಕ್ರಮ ಸೇರಿದಂತೆ ಹಲವಾರು ಕಾರ್ಯಕ್ರಮಗಳ ಆಯೋಜಿಸುವಂತಾಗಬೇಕು.

  ವಿದ್ಯಾರ್ಥಿ ಯುವಜನರ ನಡುವೆ ಸಾಹಿತ್ಯ ಪರಿಷತ್ತನ್ನ ಹೆಚ್ಚಾಗಿ ತೊಡಗಿಸಿಕೊಳ್ಳುವಂತಾಗಬೇಕು . ಸಾಹಿತ್ಯದ ಕಾರ್ಯಕ್ರಮಗಳು ಕೇವಲ ನಗರಕ್ಕೆ ಸೀಮಿತವಾಗದೆ ಗ್ರಾಮೀಣ ಪ್ರದೇಶಗಳಿಗೂ ಕೂಡ ಕಾರ್ಯಕ್ರಮಗಳನ್ನು ಸಂಘಟಿಸುವ ವಂತಾಗಬೇಕು. ಪರಿಷತ್ತಿನ ಎಲ್ಲ ಕಾಗದ ಪತ್ರಗಳನ್ನು ಹಾಗೂ ಲೆಕ್ಕ ಪತ್ರ ವ್ಯವಹಾರವನ್ನು ಅಚ್ಚುಕಟ್ಥಾಗಿ ಹಾಗೂ ಪಾರದರ್ಶಕವಾಗಿರಬೇಕು. ಪ್ರತಿ ತಾಲ್ಲೂಕುಗಳಲ್ಲಿ ಕನ್ನಡ ಭವನ ನಿರ್ಮಾಣಕ್ಕಾಗಿ ಸ್ಥಳೀಯ ಸಂಸ್ಥೆಗಳ ಮೂಲಕ ನಿವೇಶನ ಮಂಜೂರಿಗೆ ಕಾರ್ಯಪ್ರವೃತ್ತರಾಗಬೇಕು ಎಂಬನೇಕ ಸಲಹೆಗಳನ್ನು ನೀಡಿ, ಮುಂದೆ ಪ್ರತಿ ತಾಲ್ಲೂಕುಗಳಲ್ಲಿ ಕಸಾಪ ಜಿಲ್ಲಾ ಸಮಿತಿಯ ಸಭೆ ನಡೆಯಲಿದೆ ಎಂದರು.

  ಜಿಲ್ಲಾ ಗೌರವ ಕಾರ್ಯದರ್ಶಿ ಪಿ.ಆರ್. ನಾಯ್ಕರವರು ಕಾಗದ ಪತ್ರಗಳ ನಿರ್ವಹಣೆ ಹಾಗೂ ಆರ್ಥಿಕ ವ್ಯವಹಾರದ ಅಚ್ಚುಕಟ್ಟುತನದ ಬಗ್ಗೆ ತಿಳಿಸಿ ಕೇಂದ್ರ ಹಾಗೂ ಜಿಲ್ಲಾ ಕಸಾಪ ಸೂಚಿಸುವ ಎಲ್ಲ ಸೂಚನೆಗಳನ್ನು ಸಕಾಲದಲ್ಲಿ ಪಾಲಿಸಬೇಕು ಎಂದರು.

  300x250 AD

  ಜಿಲ್ಲಾ ಗೌರವ ಕಾರ್ಯದರ್ಶಿ ಜಾರ್ಜ್ ಫನಾರ್ಂಡಿಸ್ ಅವರು ಪ್ರತಿಯೊಬ್ಬರು ಸಹ ಅತ್ಯಂತ ಕ್ರಿಯಾಶೀಲತೆಯಿಂದ ಹಾಗೂ ಪ್ರಾಮಾಣಿಕತೆಯಿಂದ ಕಾರ್ಯನಿರ್ವಹಿಸುವ ಮೂಲಕ ಜಿಲ್ಲಾ ಕನ್ನಡ ಸಾಹಿತ್ಯ ಪ್ರಶಸ್ತಿಗೆ ಹೆಸರು ತರುವಂತೆ ಮಾಡಬೇಕು ಎಂದರು.

  ಸಭೆಯಲ್ಲಿ ಕಸಾಪ ಜಿಲ್ಲಾ ಗೌರವ ಕೋಶಾಧ್ಯಕ್ಷ ಮುರ್ತುಜಾ ಹುಸೇನ ಆನೆಹೊಸೂರ, ತಾಲ್ಲೂಕು ಘಟಕಗಳ ಅಧ್ಯಕ್ಷರಾದ ಕಾರವಾರದ ರಾಮಾ, ನಾಯ್ಕ, ಅಂಕೋಲದ ಗೋಪಾಲಕಷ್ಣ ನಾಯಕ, ಕುಮಟಾದ ಸುಬ್ಬಯ್ಯ ನಾಯ್ಕ್, ಹೊನ್ನಾವರದ ಎಸ್.ಎಚ್. ಗೌಡ, ಭಟ್ಕಳದ ಗಂಗಾಧರ ನಾಯ್ಕ, ಸಿದ್ಧಾಪುರದ ಗೋಪಾಲ ನಾು್ಕ, ಶಿರಸಿಯ ಜಿ. ಸುಬ್ರಾಯ ಭಟ್ ಬಕ್ಕಳ, ಯಲ್ಲಾಪುರದ ಸುಬ್ರಹ್ಮಣ್ಯ ಭಟ್, ಮುಂಡಗೋಡದ ಸಹದೇವಪ್ಪ ನಡಿಗೇರ್ , ಹಳಿಯಾಳದ ಸುಮಂಗಲಾ ಅಂಗಡಿ, ದಾಂಡೇಲಿಯ ನಾರಾಯಣ ನಾಯ್ಕ, ಜೊಯಿಡಾದ ಪಾಂಡುರಂಗ ಪಟಗಾರ, ಜಿಲ್ಲಾ ಸಮಿತಿಯ ವಿವಿಧ ಪ್ರಾತಿನಿಧ್ಯದ ಸದಸ್ಯರುಗಳಾದ ಜಯಶೀಲ ಆಗೇರ ಪಿ.ಎಮ್. ಮುಕ್ರಿ, ಸಿದ್ದಪ್ಪ ಬಿರಾದಾರ್ ಮುಂತಾದವರು ಸಭೆಯಲ್ಲಿ ಭಾಗವಹಿಸಿದ್ದರು.

  ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿ ಪಿ. ಆರ್. ನಾಯ್ಕ ಸ್ವಾಗತಿಸಿದರು. ಕೋಶಾಧ್ಯಕ್ಷ ಮುರ್ತುಜಾ ಹುಸೇನ ಅನೆಹೊಸೂರ ವಂದಿಸಿದರು.

  Share This
  300x250 AD
  300x250 AD
  300x250 AD
  Leaderboard Ad
  Back to top