ಕಾರವಾರ: ವಾಯುವ್ಯ ಕರ್ನಾಟಕ ಸಾರಿಗೆ ಸಂಸ್ಥೆಯ ಕಾರವಾರ ಘಟಕದಿಂದ ಕಡವಾಡ ಗ್ರಾಮಕ್ಕೆ ಈಗಾಗಲೇ ಪ್ರತಿದಿನ ಮೂರು ಸಣ್ಣ ಸಿಟಿ (ನಗರ ಸಾರಿಗೆ) ಬಸ್ಸುಗಳು ಬೆಳಿಗ್ಗೆಯಿಂದ ರಾತ್ರಿಯವರೆಗೆ ಸಂಚರಿಸುತ್ತವೆ. ಆದರೆ ಈ ಎರಡು ಸಿಟಿ ಬಸ್ಸುಗಳು ಚಿಕ್ಕದಾಗಿದ್ದು ಪ್ರಯಾಣಿಕರಿಗೆ ನಿಲ್ಲುವ ಸ್ಥಳಾವಕಾಶವಿಲ್ಲದ ಕಾರಣ ಹಲವಾರು ದಿನಗಳಿಂದ ತೀವ್ರ ಸ್ವರೂಪದ ತೊಂದರೆ ಅನುಭವಿಸಿದ್ದಾರೆ. ಮತ್ತು ಎರಡು ಬಾಗಿಲು ಹೊಂದಿರುವ ದೊಡ್ಡ ಸಿಟಿ ಬಸ್ಸುಗಳು ಬಿಡಬೇಕೆಂದು ಪ್ರಯಾಣಿಕರು ಆಗ್ರಹಿಸಿದ್ದಾರೆ.
ಕಾರವಾರ ಸಾರಿಗೆ ಸಂಸ್ಥೆಯ ಘಟಕದಿಂದ ಪ್ರತಿದಿನ ಎರಡು ಸಣ್ಣ ಸಿಟಿ ಬಸ್ಸುಗಳು ಬಿಡಲಾಗುತ್ತದೆ. ಆದರೆ ಈ ಬಸ್ಸುಗಳು ಯಾವಾಗಲೂ ಜನದಟ್ಟಣೆಯಿಂದ ತುಂಬಿರುತ್ತವೆ. ಮತ್ತು ಬೆಳಿಗ್ಗೆ ಸಂಜೆ ಈ ಬಸ್ಸುಗಳಲ್ಲಿ ಮಹಿಳೆಯರು ಸಣ್ಣ ಸಣ್ಣ ವಿದ್ಯಾರ್ಥಿ ಗಳು ಸಂಚರಿಸುವುದೇ ದುಸ್ತರವಾದಂತಿದೆ. ಮತ್ತು ಶಾಲಾ ವಿದ್ಯಾರ್ಥಿಗಳ ಪರೀಕ್ಷೆ ಕೂಡಾ ಸಮೀಪಿಸುತ್ತಿದೆ. ಸಾರಿಗೆ ಸಂಸ್ಥೆಯ ಬಸ್ ಗಳಿಂದ ಹೀಗೆ ಅನಾನುಕೂಲವುಂಟಾದರೆ ತೀವ್ರ ಸಮಸ್ಯೆ ಎದುರಾಗಲಿದೆ.
ಈಗಾಗಲೇ ಶಾಸಕರಿಗೆ ಸಾರಿಗೆ ಸಚಿವರಿಗೆ ಹಾಗೂ ಹಿರಿಯ ಅಧಿಕಾರಿಗಳಿಗೆ ಬಸ್ ಸಮಸ್ಯೆ ಕುರಿತು ಗಮನ ಸೆಳೆಯಲು ನಾಗರಿಕರು ಮುಂದಾಗಿದ್ದಾರೆ. ಏಕೆಂದರೆ ಬೆಳಿಗ್ಗೆಯಿಂದ ರಾತ್ರಿಯವರಗೆ ಘಂಟೆಗೆ ಕಡವಾಡದಿಂದ ಈ ಸಣ್ಣ ಸಿಟಿ ಬಸ್ಸುಗಳು ಪ್ರಯಾಣಿಕರಿಂದ ಪೂರ್ತಿಯಾಗಿ ಬರುತ್ತದೆ. ಮತ್ತು ಮುಂದೆ ರೈಲ್ವೆ ಬಸ್ ನಿಲ್ದಾಣದಲ್ಲಿ ನೂರಾರು ಪ್ರಯಾಣಿಕರು ನಿಂತು ಕೊಂಡು ಇರುತ್ತಾರೆ. ಅವರು ಬಸ್ ಹತ್ತಿದ ಬಳಿಕ ಪುಲ್ ಆಗುತ್ತದೆ. ಈ ರೈಲು ಪ್ರಯಾಣಿಕರು ದೊಡ್ಡ ದೊಡ್ಡ ಲಗೇಜ್ ಬಾಗ್ ಗಳು ಇಡಲು ಸ್ಥಳಾವಕಾಶವಿಲ್ಲದೇ ಪರದಾಡುವರ ಗೋಳು ಒಂದೆಡೆಯಾದರೆ ಈ ಮಾರ್ಗ ಮಧ್ಯದಲ್ಲಿ ಇಳಿಯುವ ಪ್ರಯಾಣಿಕರ ಗೋಳು ಮತ್ತೊಂದೆಡೆಯಾಗಿದೆ.
ಶಾಲೆ ಕಾಲೇಜುಗಳು ಹೋಗುವ ವಿದ್ಯಾರ್ಥಿಗಳಿಗೆ, ಮಹಿಳೆಯರಿಗೆ ತೀವ್ರ ತೊಂದರೆಯಾಗುತ್ತಿದೆ.ಈ ಬಸ್ಸುಗಳು ಕಡವಾಡದಿಂದ ಬರುವಾಗ ಯಾವಾಗಲೂ ಪ್ರಯಾಣಿಕರ ಸಂಖ್ಯೆ ಹೆಚ್ಚು ಇರುತ್ತದೆ. ಪ್ರತಿದಿನ ಬೆಳಿಗ್ಗೆ ಸಮಯದಲ್ಲಿ ಕಡವಾಡ ಗ್ರಾಮದಿಂದ ನಗರಕ್ಕೆ ಕೆಲಸಕ್ಕೆಂದು ಹೆಚ್ಚಿನ ಸಂಖ್ಯೆಯಲ್ಲಿ ನಾಗರಿಕರು ಬರುತ್ತಾರೆ.ಅಷ್ಟೇ ಅಲ್ಲದೇ ಶಿರವಾಡ ರೈಲ್ವೆ ಬಸ್ ನಿಲ್ದಾಣದಿಂದ ನೂರಾರು ಪ್ರಯಾಣಿಕರು ಈ ಬಸ್ ಹತ್ತುತ್ತಾರೆ. ಕೆಲವರು ಬಸ್ ಹತ್ತಲು ಸ್ಥಳಾವಕಾಶವಿಲ್ಲದೇ ಹಾಗೆ ಪರದಾಡುತ್ತಾರೆ ಮತ್ತು ಮುಂದಿನ ನಾರಗೇರಿ, ಬಂಗಾರಪ್ಪ ನಗರ ,ಶಿರವಾಡ,ಜಾಂಬಾ ಕ್ರಾಸ್,ಮಕೇರಿ ಹೀಗೆ ಮೊದಲಾದ ಸ್ಥಳಗಳಲ್ಲಿ ಶಾಲಾ ಹಾಗೂ ಕಾಲೇಜು ಹೋಗುವ ವಿದ್ಯಾರ್ಥಿಗಳು ಮತ್ತು ಕೆಲಸಕ್ಕೆ ಹೋಗುವರಿಗೆ ತೀವ್ರ ತೊಂದರೆ ಅನುಭವಿಸಿದ್ದಾರೆ.
ಈ ಸಣ್ಣ ಬಸ್ಸಿನಲ್ಲಿ ಪ್ರಯಾಣಿಕರನ್ನು ತುಂಬಿಸಿ ಕೊಳ್ಳುವ ಸಾಮಥ್ರ್ಯ ಕಡಿಮೆ ಇದೆ . ಕಡವಾಡ ಗ್ರಾಮಕ್ಕೆ ಸಂಚರಿಸುವ ಈ ಮೂರು ಸಣ್ಣ ಸಿಟಿ ಬಸ್ಸುಗಳಲ್ಲಿ ಒಂದು ದೊಡ್ಡ ಸಿಟಿ ಬಸ್ (ವಾಯುವ್ಯ ಸಾರಿಗೆ )ಬಿಡಬೇಕೆಂದು ಈ ಭಾಗದ ನಾಗರಿಕರ ಒತ್ತಾಸೆ ಯಾಗಿದೆ. ಆದ್ದರಿಂದ ಸಂಬಂಧ ಪಟ್ಟ ಸಾರಿಗೆ ಸಂಸ್ಥೆಯ ಹಿರಿಯ ಅಧಿಕಾರಿಗಳು ಇತ್ತ ಗಮನ ಹರಿಸಬೇಕಾಗಿದೆ ಎಂದು ನಾಗರಿಕರು ಆಗ್ರಹಿಸಿದ್ದಾರೆ.