ಭಟ್ಕಳ: ಸಮುದ್ರದಲ್ಲಿ ಈಜಾಡಲು ಹೋಗಿ ತೆರೆಯ ಹೊಡೆತಕ್ಕೆ ಮುಳುಗುತ್ತಿದ್ದ ಓರ್ವ ಯುವಕನನ್ನು ಮುರುಡೇಶ್ವರದಲ್ಲಿ ಬೀಜ್ ಲೈಪ್ ಗಾರ್ಡ ಸಿಬ್ಬಂದಿಗಳೂ ರಕ್ಷಣೆ ಮಾಡಿದ ಘಟನೆ ಮುರುಡೇಶ್ವರದಲ್ಲಿ ರವಿವಾರ ಬೆಳಿಗ್ಗೆ ನಡೆದಿದೆ.
ರಕ್ಷಣೆ ಮಾಡಿದ ಯುವಕನ್ನು ಮೈಸೂರಿನ ಹರ್ಷ ಎನ್(18) ಎಂದು ಗುರುತಿಸಲಾಗಿದೆ. ಈತ ಶಿರಸಿ ಕಾಲೇಜಿನಲ್ಲಿ ಕಲಿಯುತ್ತಿದ್ದು ತನ್ನ 8 ಮಂದಿ ಸಂಗಡಿಗರೊಂದಿಗೆ ಮುರುಡೇಶ್ವರ ಪ್ರವಾಸಕ್ಕೆ ಬಂದಿದ್ದು ರವಿವಾರ ಬೆಳಿಗ್ಗೆ ದೇವಸ್ಥಾನದ ಎಡಭಾಗದ ಸಮುದ್ರದಲ್ಲಿ ಈಜಾಡುತ್ತಿದ್ದಾಗ ಆಕಸ್ಮಿಕವಾಗಿ ನೀರಿನ ಸೆಳೆತಕ್ಕೆ ಮುಳುಗಿದ್ದಾನೆ. ಲೈಫ ಗಾರ್ಡಗಳಾದ ಹನುಮಂತ, ಚಂದ್ರಶೇಖರ, ದತ್ತಾತ್ರೇಯ ಶೆಟ್ಟಿ ಈತನನ್ನು ರಕ್ಷಿಸಿ ದಡಕ್ಕೆ ತಂದಿದ್ದಾರೆ.