ಮುಂಡಗೋಡ: ಅರಣ್ಯ ಭೂಮಿ ಹಕ್ಕು ಭಿಕ್ಷೆಯಲ್ಲ, ದೇಶದ ಪ್ರತಿಯೊಬ್ಬ ಪ್ರಜೆಯ ಸಂವಿಧಾನಾತ್ಮಕ ಹಕ್ಕು. ಅರಣ್ಯ ಹಕ್ಕು ಕಾಯಿದೆ ಅರಣ್ಯವಾಸಿಗಳ ಪರವಾಗಿ ಇದ್ದೂ ಸರಕಾರವು ಭೂಮಿ ಹಕ್ಕು ಕೊಡುವ ದಿಶೆಯಲ್ಲಿ ಇಚ್ಛಾಶಕ್ತಿ ಪ್ರದರ್ಶಿಸಬೇಕು ಎಂದು ಜಿಲ್ಲಾ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದರು.
ಅವರು ಇಂದು ಮುಂಡಗೋಡ ತಾಲೂಕಿನ ಅರಣ್ಯ ಅತಿಕ್ರಮಣದಾರರನ್ನು ಉದ್ಧೇಶಿಸಿ ಮುಂಡಗೋಡ ಪ್ರವಾಸ ಮಂದಿರದಲ್ಲಿ ಜರುಗಿದ ಫೇ. ೧೭ ರ ಬೆಂಗಳೂರು ಕಾರ್ಯಕ್ರಮದ ಪೂರ್ವಭಾವಿ ಸಭೆಯನ್ನು ಉದ್ದೇಶಿಸಿ ಮೇಲಿನಂತೆ ಹೇಳಿದರು.
ಜಿಲ್ಲೆಯ ಅರಣ್ಯ ಅತಿಕ್ರಮಣದಾರರ ಸಮಸ್ಯೆಯು ಇನ್ನೀತರ ಜಿಲ್ಲೆಯ ಅತಿಕ್ರಮಣದಾರರ ಸಮಸ್ಯೆಕ್ಕಿಂತ ವಿಭಿನ್ನವಾಗಿದ್ದು, ಜಿಲ್ಲೆಯ ಅರಣ್ಯ ಅತಿಕ್ರಮಣದಾರರಿಗೆ ಅರಣ್ಯ ಭೂಮಿ ಅನಿವಾರ್ಯವಾಗಿದೆ. ಈ ದಿಶೆಯಲ್ಲಿ ಸರಕಾರ ಕ್ರಮ ಜರುಗಿಸುವುದು ಅವಶ್ಯವೆಂದು ಹೇಳಿದರು.
ಸಭೆಯನ್ನು ಉದ್ಧೇಶಿಸಿ ತಾಲೂಕ ಅಧ್ಯಕ್ಷ ಶಿವಾನಂದ ಜೋಗಿ, ಬುತೇಶ್ ಗೋಣುರು, ಮಲ್ಲಿಕಾರ್ಜುನ ಓಣಿಕೇರಿ, ಶಬ್ಬೀರ್ ಚಪಾತಿ, ಬಮ್ಮು ಗೌಳಿ, ಜುಮ್ಮಾ ಗೌಳಿ, ಪರಶುರಾಮ ತಡಸದ ಚಿಗಳ್ಳಿ, ರಮೇಶ ಫಕೀರಪ್ಪ ಮುಂತಾದವರು ಮಾತನಾಡಿದರು.