
ಹೊನ್ನಾವರ: ತಾಲೂಕಿನ ಗೋ ರಕ್ಷಣಾ ವೇದಿಕೆ (ರಿ.) ಹೊನ್ನಾವರದ ಕಾರ್ಯಕರ್ತರು ಹಾಗೂ ಸ್ಥಳೀಯ ಎಲ್ಲ ಗೋ ಪ್ರೇಮಿಗಳು ಸೇರಿ ಸಿದ್ದಾಪುರದಿಂದ ಹೊನ್ನಾವರದ ಮಹಿಮೆಗೆ ಅಕ್ರಮ ಗೋ ಸಾಗಾಟ ಮಾಡುತ್ತಿರುವ ವೇಳೆ ವಾಹನ ತಡೆ ಹಿಡಿದು, ಆರೋಪಿಗಳನ್ನು ಪೆÇಲೀಸರಿಗೆ ಒಪ್ಪಿಸಿದ ಘಟನೆ ನಡೆದಿದೆ.
ಯಾವುದೇ ರೀತಿಯ ದಾಖಲಾತಿ ಪತ್ರ ಇಲ್ಲದೆ ಇರುವುದರಿಂದ ಅಕ್ರಮವಾಗಿ ಮೂರು ಎತ್ತುಗಳನ್ನು ಸಾಗಾಟ ಮಾಡುತ್ತಿರುವ ವೇಳೆ ದಾಳಿ ನಡೆಸಿ ವಾಹನ ಸಮೇತ ಪೆÇಲೀಸ್ ಇಲಾಖೆಗೆ ಒಪ್ಪಿಸಲಾಯಿತು. ಪ್ರಕರಣ ದಾಖಲಿಸಿಕೊಂಡ ಪೆÇಲೀಸರು ಈ ಸಂಬಂಧ ಮೂವರನ್ನು ಬಂಧಿಸಿದ್ದು, ಓರ್ವ ತಪ್ಪಿಸಿಕೊಂಡಿದ್ದಾನೆ. ಘಟನೆ ವೇಳೆ ಬೊಲೆರೊ ವಾಹನ ಮತ್ತು ಬೈಕ್ ಅನ್ನು ಪೆÇಲೀಸರು ವಶಕ್ಕೆ ಪಡೆದಿದ್ದಾರೆ.