ಶಿರಸಿ: ರಾಜರಾಜೇಶ್ವರೀ ವಿದ್ಯಾಸಂಸ್ಥೆ ಸೋಂದಾ, ಸ್ವರ್ಣವಲ್ಲೀ ಮಹಾಸಂಸ್ಥಾನ ಅಡಿಯಲ್ಲಿ ನಡೆಯುತ್ತಿರುವ ಶ್ರೀನಿಕೇತನ ಶಾಲೆಯ 10 ನೇ ತರಗತಿಯ ವಿದ್ಯಾರ್ಥಿನಿ ವಿಭಾ ಕೆ. ಭಟ್ ಇವಳು ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ರಾಜ್ಯಮಟ್ಟದ ಮಕ್ಕಳ ವಿಜ್ಞಾನ ಸಮಾವೇಶದಲ್ಲಿ ಮಂಡಿಸಿದ “ಅಪ್ರಾಪ್ರಿಯೇಟ್ ಟೆಕ್ನಾಲಜಿ ಫಾರ್ ಸಸ್ಟೆನೇಬಲ್ ಲಿವಿಂಗ್” ವಿಷಯದ ಮೇಲಿನ ಪ್ರಬಂಧ ಮಂಡನೆಯು ರಾಷ್ಟ್ರಮಟ್ಟದ ಬಾಲವಿಜ್ಞಾನಿ ಸ್ಪರ್ಧೆಗೆ ಆಯ್ಕೆಯಾಗಿದೆ.
ಇವಳು ಫೆಬ್ರವರಿ 15 ರಿಂದ 18 ರ ವರೆಗೆ ಗುಜರಾತಿನ ಗಾಂಧಿನಗರದಲ್ಲಿ ನಡೆಯುವ 29 ನೇ ರಾಷ್ಟ್ರಮಟ್ಟದ ಮಕ್ಕಳ ವಿಜ್ಞಾನ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾಳೆ.
ಕಳೆದ ತಿಂಗಳು ರಾಜಕೋಟ್‍ದಲ್ಲಿ ನಡೆದ ರೀಜನಲ್ ಸೈನ್ಸ್ ಮತ್ತು ಇಂಜನಿಯರಿಂಗ್ ಫೇರ್‍ನಲ್ಲಿ ಇವಳು ಪ್ರದರ್ಶಿಸಿದ ಪ್ರುಟ್ಸಫ್ಲಕರ್ ಮಾದರಿಗೆ ಸಿಲ್ವರ್ ಮೆಡಲ್ ಪ್ರಶಸ್ತಿಗಳಿಸಿ ಶಾಲೆಗೆ ಕೀರ್ತಿ ತಂದಿದ್ದಾಳೆ.
ಇವಳಿಗೆ ಶಿಕ್ಷಕ ಕೆ.ಎಲ್. ಭಟ್ಟ ಮಾರ್ಗದರ್ಶನ ನೀಡಿದರೆ, ಅಭಿಷೇಕ್ ನಾಯ್ಕ ಹಾಗೂ ಅನಿಲ್ ನಾಯ್ಕ ತಾಂತ್ರಿಕ ಸಹಾಯ ನೀಡಿದ್ದಾರೆ.
ವಿದ್ಯಾರ್ಥಿನಿಯ ಈ ಸಾಧನೆಗೆ ಶಾಲಾ ಆಡಳಿತ ಮಂಡಳಿ, ಪ್ರಾಚಾರ್ಯರು , ಶಿಕ್ಷಕ ಶಿಕ್ಷಕಿಯರು , ಪಾಲಕರು ಹಾಗೂ ಸಿಬ್ಬಂದಿಗಳು ಹರ್ಷ ವ್ಯಕ್ತಪಡಿಸಿದ್ದಾರೆ.