ಶಿರಸಿ: ಎಂ.ಇ.ಎಸ್ ನ ಎಂ ಎಂ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದ ನಾಲ್ಕು ವಿದ್ಯಾರ್ಥಿನಿಯರು ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡದ ಬಾಲ್ ಬ್ಯಾಡ್ಮಿಂಟನ್ ಬ್ಲ್ಯೂ ಆಗಿ ಆಯ್ಕೆ ಆಗಿದ್ದಾರೆ.
ಬಿ ಎ ದ್ವಿತೀಯ ವರ್ಷದ ಸಂಬ್ರಮಾ ಎಂ, ಬಿಎಸ್ಸಿ ಪ್ರಥಮ ವರ್ಷದ ಪ್ರಜ್ನಾ ತೇಟಿ, ಶ್ರೀರಕ್ಷಾ ರ ನಾಯ್ಕ್, ನಿಸರ್ಗಾ ಎಲ್ ಕೋಟಿ ಆಯ್ಕೆಯಾದ ವಿದ್ಯಾರ್ಥಿನಿಯರಾಗಿದ್ದು, ಇವರ ಈ ಸಾಧನೆಗೆ ಎಂ ಇ ಎಸ್ ನ ಅಧ್ಯಕ್ಷರು ಪದಾಧಿಕಾರಿಗಳು, ಕಾಲೇಜು ಉಪಸಮಿತಿ ಅಧ್ಯಕ್ಷರು ಸದಸ್ಯರು, ಪ್ರಾಚಾರ್ಯರು ಬೋಧಕ ಬೋದಕೇತರ ಸಿಬ್ಬಂದಿಗಳು ಹರ್ಷ ವ್ಯಕ್ತ ಪಡಿಸಿದ್ದಾರೆ.