ಶಿರಸಿ: ಸೀನಿಯರ್ ಛೇಂಬರ್ ಇಂಟರ್‌ನ್ಯಾಶನಲ್ ಶಿರಸಿ ಮಾರಿಕಾಂಬಾ ಅಜನ್ (ಏರಿಯಾ E) ವತಿಯಿಂದ ಜವಾಬ್ದಾರಿಯುತ ಮತ್ತು ಸಕ್ರಿಯ ಪೌರತ್ವ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಫೆ. 16 ರಂದು ಬುಧವಾರ ಸಂಜೆ 5.00 ರಿಂದ 7.00 ಘಂಟೆಯ ವರೆಗೆ ಹೊಟೇಲ್ ಸಾಮ್ರಾಟ್ ಎದುರಿನ ‘ಕಣಜ’ ನೆಮ್ಮದಿ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ.
ಆಯುರ್ವೇದ ವೈದ್ಯರು ಮತ್ತು ಸಮಾಜಮುಖಿ ಕಾರ್ಯಕರ್ತರಾದ ಡಾ. ರವಿಕಿರಣ ಪಟವರ್ಧನರವರಿಗೆ ಜವಾಬ್ದಾರಿಯುತ ಮತ್ತು ಸಕ್ರಿಯ ಪೌರತ್ವ ಪ್ರಶಸ್ತಿ ಪ್ರದಾನ ನಡೆಯಲಿದ್ದು,ಸಮಾಜಮುಖಿ ಕಾರ್ಯಕರ್ತೆ ಡಾ. ವಿಜಯನಳಿನಿ ರಮೇಶ ರವರಿಗೆ ವಿಜಯಸ್ಮೃತಿ ಪುರಸ್ಕಾರ ಪ್ರಶಸ್ತಿ ಪ್ರದಾನ ನಡೆಯಲಿದೆ.