ಶಿರಸಿ: ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಜರುಗಿದ ಬಾಲ್ ಬ್ಯಾಡಮಿಂಟನ್ ಸ್ಪರ್ಧೆಯಲ್ಲಿ ವಿಶ್ವವಿದ್ಯಾಲಯದ ಮಟ್ಟದಲ್ಲಿ ‘ಯುನಿವರ್ಸಿಟಿ ಬ್ಲೂ’ ಆಗಿ ಇದೀಗ ಫೆಬ್ರವರಿ 18 ರಿಂದ 21 ರವರೆಗೆ ತಮಿಳುನಾಡಿನ ಎಸ್ ಆರ್ ಎಮ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಅಂಡ್ ಟೆಕ್ನಾಲಜಿ ಯೂನಿವರ್ಸಿಟಿ ಚೆನ್ನೈ ನಲ್ಲಿ ನಡೆಯುವ ರಾಷ್ಟ್ರಮಟ್ಟದ ಬಾಲ್ ಬ್ಯಾಡಮಿಂಟನ ಸ್ಫರ್ಧೆಗೆ ಎಂ.ಇ.ಎಸ್. ವಾಣಿಜ್ಯ ಮಹಾವಿದ್ಯಾಲಯದ ವಿದ್ಯಾರ್ಥಿನಿಯರಾದ ಶ್ರೀನಿಧಿ ಹೆಗಡೆ ಮತ್ತು ವಿನುತಾ ವಿ ಭಟ್ಟ ತೆರಳಿದ್ದಾರೆ.
ಇವರ ಸಾಧನೆಗೆ ಎಂ.ಇ.ಎಸ್. ಅಧ್ಯಕ್ಷ ಜಿ.ಎಂ.ಹೆಗಡೆ ಮುಳಖಂಡ, ಕಾಲೇಜು ಸಮಿತಿ ಚೇರಮನ್ ವರೀಂದ್ರ ಕಾಮತ್, ಪ್ರಾಚಾರ್ಯ ಡಾ.ಟಿ.ಎಸ.ಹಳೆಮನೆ ಹಾಗೂ ಆಡಳಿತ ಮಂಡಳಿಯ ಸದಸ್ಯರು,ಸಿಬ್ಬಂದಿಗಳು ಹರ್ಷ ವ್ಯಕ್ತಪಡಿಸಿದ್ದಾರೆ.