ಶಿರಸಿ: ನಗರದ ಪಿ.ಡಬ್ಲೂ.ಡಿ ಇಲಾಖೆಯಿಂದ ರಸ್ತೆ ಅಗಲಿಕರಣ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಹಾಗೂ ಮಾರಿಕಾಂಬಾ ಜಾತ್ರೆಯ ಸಲುವಾಗಿ ಫೆ.14 ರ ಸೋಮವಾರ ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆವರೆಗೆ ಪಟ್ಟಣ ಶಾಖೆಯ ಬಿಡ್ಕಿಬೈಲ್, ವೀರಭದ್ರಗಲ್ಲಿ, ರಾಯರ ಪೇಟೆ ಮುಸ್ಲಿಂ ಗಲ್ಲಿ ,ಸಿಂಪಿ ಗಲ್ಲಿ, ಸಿ.ಪಿ. ಬಝಾರ್, ಹಳೆ ಬಸ್ ಸ್ಟ್ಯಾಂಡ್ ಹಾಗೂ ನಟರಾಜ್ ರಸ್ತೆ ಮಾರ್ಗದ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
ಕಾರಣ ಗ್ರಾಹಕರು ಸಹಕರಿಸಬೇಕು ಎಂದು ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರು ಕಾರ್ಯ ಮತ್ತು ಪಾಲನಾ ಉಪ ವಿಭಾಗ, ಹೆಸ್ಕಾಂ ಶಿರಸಿರವರು ತಿಳಿಸಿದ್ದಾರೆ.