ಅಂಕೋಲಾ: ಎರಡುವರೆ ವರ್ಷಗಳ ಸುದೀರ್ಘ ಪರಿಶ್ರಮದ ಫಲ. ಡೋಂಗ್ರಿ,ಸುಂಕಸಾಳ ಪಂಚಾಯತಗಳನ್ನು ಪುನಃ ಒಗ್ಗೂಡಿಸುತ್ತಿರುವ ಮಹತ್ತರ ಯೋಜನೆ. ಇತಿಹಾಸದಲ್ಲೇ ಪ್ರಪ್ರಥಮವಾಗಿ ಎರಡು ಪಂಚಾಯತ್ ಹಿಂದೆಂದೂ ಕಾಣದಂತಹ ಅತಿಹೆಚ್ಚು ಬಜೆಟ್ ಹೊಂದಿರುವ ಯೋಜನೆ ರಾಮನಗುಳಿ-ಕಲ್ಲೇಶ್ವರ ಶಾಶ್ವತ ಸೇತುವೆಗೆ ಶಾಸಕಿ ರೂಪಾಲಿ ನಾಯ್ಕ ಹಾಗೂ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಶಂಕುಸ್ಥಾಪನೆ ನೆರವೇರಿಸಿದ್ದಾರೆ.
ಈ ಭಾಗದ ಜನ 2019 ರಲ್ಲಿ ಗಂಗಾವಳಿ ನದಿಯಿಂದ ಬಂದ ನೆರೆಹಾವಳಿಯಲ್ಲಿ ರಾಮನಗುಳಿ-ಕಲ್ಲೇಶ್ವರ ತೂಗು ಸೇತುವೆ,2021ರ ನೆರೆಹಾವಳಿಯಲ್ಲಿ ಗುಳ್ಳಾಪುರ ಬ್ರೀಜ್ ಕಳೆದು ಕೊಂಡು ಅತ್ಯಂತ ಕಷ್ಟದಿಂದ ಬದುಕನ್ನು ಸಾಗಿಸುತ್ತಿದ್ದಾರೆ.ಇಂಥ ಸಮಯದಲ್ಲಿ ಜನರ ಕಷ್ಟ ನನ್ನ ಕಷ್ಟ ನಾನೀದ್ದೆನೆ. ನಿಮ್ಮ ಜೊತೆ ಎಲ್ಲವನ್ನು ನಿರ್ಮಿಸಿ ಕೊಡುವ ಭರವಸೆ ನೀಡಿದ್ದರು.ಅದರಂತೆ ಡೊಂಗ್ರಿ ತೂಗು ಸೇತುವೆ,ರಸ್ತೆ ಪ್ರಾರಂಭಿಸಲಾಗಿದೆ.ನಿನ್ನೆ ನಮ್ಮ ಸೇತುವೆಗೂ ಶಂಕುಸ್ಥಾಪನೆ ಮಾಡಿದ್ದಾರೆ.ಇನ್ನು ಅನೇಕ ಕೆಲಸಗಳು ಮುಂದುವರಿದಿದೆ,ಕೆಲವು ಮಂಜೂರಿ ಹಂತದಲ್ಲಿ ಇವೆ.
ಇಂತ ಕುಗ್ರಾಮವನ್ನು ದತ್ತು ಪಡೆದು ಅಭಿವೃದ್ಧಿ ಪಡಿಸುತ್ತಿರುವುದು ಶ್ಲಾಘನೀಯವಾದದ್ದು.ನುಡಿದಂತೆ ನಡೆದು ರಸ್ತೆ,ಶಾಲೆ, ಸೇತುವೆ, ದೇವಸ್ಥಾನ, ಕುಡಿಯುವ ನೀರು ಎಲ್ಲ ಕಡೆ ಅನುದಾನ ನೀಡಿ ಅಭಿವೃದ್ಧಿ ಪಡಿಸುತ್ತಿದ್ದಾರೆ. ತೀರಾ ನಿರ್ಲಕ್ಷಕ್ಕೆ ಒಳಗಾದ ಪ್ರದೇಶವಾದ ಡೋಂಗ್ರಿ ಪಂಚಾಯತ ನ್ನು ರೂಪಾಲಿ ನಾಯ್ಕ ದತ್ತು ಪಡೆದು ಅಭಿವೃದ್ಧಿ ಪಡಿಸುತ್ತಿದ್ದಾರಲ್ಲದೇ ಇಡೀ ಕಾರವಾರ-ಅಂಕೋಲಾ ಕ್ಷೇತ್ರದಲ್ಲಿ ಅಭಿವೃದ್ಧಿ ಪರ್ವ ಶುರುವಾಗಿದೆ.ಈ ಸಂದರ್ಭದಲ್ಲಿ ತಾಲೂಕಿನ ರೈತ ಮೋರ್ಚಾ ಪರವಾಗಿ ರೈತಮೊರ್ಚಾ ಅಂಕೋಲಾ ಮಂಡಲ ಅಧ್ಯಕ್ಷರು ವಿ.ಎಸ್.ಭಟ್ಟ ಕಲ್ಲೇಶ್ವರ ಮಾನ್ಯ ಶಾಸಕರಿಗೆ ಅಭಿನಂದಿಸಿದ್ದಾರೆ.