• Slide
    Slide
    Slide
    previous arrow
    next arrow
  • ಬಿಜೆಪಿ ಪಕ್ಷದೊಳಗೆ ಅಸಮಾಧಾನ ಭುಗಿಲೆದ್ದು ಹಲ್ಲೆ

    300x250 AD

    ಹೊನ್ನಾವರ: ಮೂಲ ಬಿಜೆಪಿಗರು ಹಾಗೂ ಬೇರೆ ಪಕ್ಷದಿಂದ ಬಿಜೆಪಿಗೆ ವಲಸೆ ಬಂದಿರುವ ಕಾರ್ಯಕರ್ತರ ನಡುವೆ ಅಸಮಾಧಾನಗಳು ಭುಗಿಲೆದ್ದು ಹಲ್ಲೆ ಮಾಡುವ ಹಂತಕ್ಕೆ ಬಂದು ನಿಂತಿದೆ.

    ಶಾಸಕ ದಿನಕರ ಶೆಟ್ಟಿಯವರ ಪರಮಾಪ್ತರೇನಿಸಿಕೊಂಡಿರುವ ಕೆಲವರು ಗೂಂಡಾ ವರ್ತನೆ ತೋರಿ ಸಂಘ ಪರಿವಾರದಿಂದ ಬಿಜೆಪಿಗೆ ಬಂದು ಪಕ್ಷ ಸಂಘಟನೆ ಕಾರ್ಯದಲ್ಲಿ ತೊಡಗಿರುವ ಮುಗ್ವಾ ಜಿಲ್ಲಾ ಪಂಚಾಯತ್ ಮಹಾಶಕ್ತಿ ಕೇಂದ್ರದ ಪ್ರಧಾನ ಕಾರ್ಯದರ್ಶಿಯೊಬ್ಬರ ಮೇಲೆ ಹಲ್ಲೆ ಮಾಡಿರುವ ಬಗ್ಗೆ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ಮೂಲ ಬಿಜೆಪಿಗರ ಅಸಮಾಧಾನ ಇನ್ನಷ್ಟು ಹೆಚ್ಚಿಸಿದೆ.

    ಚಂದಾವರದಿಂದ ಮನೆಗೆ ಬರುವ ಸಂದರ್ಬದಲ್ಲಿ ತನ್ನ ಮೇಲೆ ಹಲ್ಲೆ ಮಾಡುವ ಉದ್ದೇಶದಿಂದ ಕಾಯುತ್ತಿದ್ದ ಶಾಸಕರ ಆಪ್ತರು ತನ್ನ ಬೈಕ್ ಅಡ್ಡಗಟ್ಟಿ ತನ್ನ ಬಟ್ಟೆಯನ್ನು ಎಳೆದು ಹರಿದಾಡಿ ನನ್ನ ಮೇಲೆ ಹಲ್ಲೆ ಮಾಡಿದ್ದಾರೆ. ಕೂಡಲೇ ಸ್ಥಳೀಯರು ಬಂದು ಗಾಯಗೊಂಡ ನನ್ನನ್ನು ಅವರಿಂದ ತಪ್ಪಿಸಿ ಹೊನ್ನಾವರ ತಾಲೂಕ ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

    ನಾನು ಸಂಘದ ಸ್ವಯಂ ಸೇವಕನಾಗಿ ನಂತರ 25 ವರ್ಷಗಳಿಂದ ಬಿಜೆಪಿಯ ಸಕ್ರಿಯ ಕಾರ್ಯಕರ್ತನಾಗಿ ಪಕ್ಷದಲ್ಲಿ ಪ್ರಾಮಾಣಿಕನಾಗಿದ್ದೆ. ಕಾಮಗಾರಿಯ ವಿಚಾರವಾಗಿ ಹೊನ್ನಾವರದ ಪರಿವೀಕ್ಷಣಾ ಮಂದಿರದಲ್ಲಿ ಶಾಸಕರ ಎದುರುಗಡೆ ನನ್ನ ಮತ್ತು ಕೃಷ್ಣ ಗೌಡರ ನಡುವೆ ಮಾತಿಗೆ ಮಾತು ಬೆಳೆದಿತ್ತು. ಅದೇ ವಿಷಯಕ್ಕೆ ಹಾಗೆ ಸಾಧಿಸುತ್ತಿದ್ದ ಕೃಷ್ಣ ಗೌಡ ತನ್ನ ಸಹಚರರಾದ ಗುರು ಐಗಳ ಹೊದಕೆ ಶಿರೂರು ಹಾಗೂ ನವೀನ ದತ್ತಾ ನಾಯ್ಕ ಶಿರೂರು ಇವರೊಂದಿಗೆ ಸೇರಿ ಚಂದಾವರದಿಂದ ಬರುವಾಗ ಅಡ್ಡಗಟ್ಟಿ ನನ್ನ ಮೇಲೆ ಹಲ್ಲೆ ಮಾಡಿದ್ದಾರೆ. ಅಲ್ಲಿನ ಸ್ಥಳೀಯರಿಂದ ನಾನು ಬದುಕಿದ್ದೇನೆ. ಅವರು ಕೂಡಲೇ ನನ್ನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ರಾಜಕೀಯ ಒತ್ತಡದಿಂದ ಪೊಲೀಸ್ ಇಲಾಖೆ ಅವರ ಮೇಲೆ ಸಾಧಾರಣ ಕೆಸ್ ಹಾಕಿದ್ದಾರೆ.

    300x250 AD

    ಶ್ರೀನಿವಾಸ ಶಂಕರ ಮಡಿವಾಳ, ಮುಗ್ವಾ ಮಹಾಶಕ್ತಿ ಕೇಂದ್ರದ ಪ್ರ.ಕಾರ್ಯದರ್ಶಿ:

    ಬಿಜೆಪಿ ಪಾಳಯದಲ್ಲಿ ಒಳಜಗಳಗಳು ನಡೆಯುತ್ತಿದ್ದು ಮೂಲ ಕಾರ್ಯಕರ್ತರ ಹಾಗೂ ಶಾಸಕರ ಬೆಂಬಗಲಿಗರ ನಡುವೆ ಮುಸುಕಿನ ಗುದ್ದಾಟಗಳು ಜೋರಾಗೆ ನಡೆಯುತ್ತಿದ್ದರೂ ಪಕ್ಷದ ಮಾನ- ಮರ್ಯಾದೆಯ ಪ್ರಶ್ನೆಯಾಗಿರುವುದರಿಂದ ಸಂಘ ಪರಿವಾರ ಹಾಗೂ ಮೂಲ ಬಿಜೆಪಿಗರು ಕಣ್ಣಿದ್ದೂ ಕುರುಡರಂತೆ ಬಾಯಿದ್ದು ಮೂಕರಂತಿದ್ದಾರೆ. ಶಾಸಕರು ಕೂಡ ಮೂಲ ಕಾರ್ಯಕರ್ತರನ್ನು ಕಡೆಗಣಿಸುತ್ತಿದ್ದಾರೆ ಅದರ ಜೊತೆ ಕೆಲವು ಕಡೆಗಳಲ್ಲಿ ಇವರ ಆಪ್ತರಿಂದ ಗೂಂಡಾ ವರ್ತನೆ ತೋರುತ್ತಿದ್ದಾರೆ ಎನ್ನುವ ಆರೋಪಗಳು ಕೇಳಿ ಬರುತ್ತಿವೆ.

    Share This
    300x250 AD
    300x250 AD
    300x250 AD
    Leaderboard Ad
    Back to top