ಕಾರವಾರ:ಇಲ್ಲಿನ ಕನ್ನಡ ಭವನದಲ್ಲಿ ಪಂಡಿತ್ ದೀನ ದಯಾಳ್ ಉಪಾಧ್ಯಾಯರ ಸಮರ್ಪಣಾ ದಿವಸದ ನಿಮಿತ್ಯ ಕಾರ್ಯಕ್ರಮ ನಡೆಯಿತು.
ಉ.ಕ. ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮತ್ತು ಕರ್ನಾಟಕ ಪಶ್ಚಿಮ ಪದವೀಧರ ಕ್ಷೇತ್ರದ ಸದಸ್ಯರ ಎಸ್.ವಿ.ಸಂಕನೂರ್ ಸೇರಿದಂತೆ ಕಾರವಾರ ಅಂಕೋಲಾ ಕ್ಷೇತ್ರದ ಶಾಸಕರಾದ ಶ್ರೀಮತಿ ರೂಪಾಲಿ ನಾಯ್ಕರವರು ದೀನ ದಯಾಳ್ ಉಪಾಧ್ಯಾಯರು ದೇಶಕ್ಕಾಗಿ ನೀಡಿದ ಬಲಿದಾನವನ್ನು ಸ್ಮರಿಸಿ, ಅವರ ಆದರ್ಶ ಗಳನ್ನು ಕೊಂಡಾಡಿದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾದ ಗೋವಿಂದ ನಾಯ್ಕರವರು ಕಾರ್ಯಕ್ರಮದ ಪ್ರಾರಂಭದಲ್ಲಿ ಎಲ್ಲರನ್ನು ಸ್ವಾಗತಿಸಿದರು.ಜಿಲ್ಲಾಧ್ಯಕ್ಷ ವೆಂಕಟೇಶ ನಾಯಕರವರು ಪ್ರಾಸ್ತಾವಿಕ ನುಡಿಗಳನ್ನಾಡಿದರು.
ಕಾರವಾರ ಗ್ರಾಮೀಣ ಅಧ್ಯಕ್ಷ ಸುಭಾಷ ಗುನಗಿಯವರು ಕಾರ್ಯಕ್ರಮವನ್ನು ನಿರೂಪಿಸಿದರು.ವೇದಿಕೆಯಲ್ಲಿ ಗಣ್ಯರಾದ ನೂತನ ವಿಧಾನ ಪರಿಷತ್ ಸದಸ್ಯರಾದ ಗಣಪತಿ ಉಳವೇಕರ, ಕಾರವಾರ ನಗರಸಭಾ ಅಧ್ಯಕ್ಷರಾದ ನಿತಿನ್ ಪಿಕಳೆ,ಉಪಾಧ್ಯಕ್ಷರಾದ ಪಿ.ಪಿ.ನಾಯ್ಕ, ರಾಜೇಂದ್ರ ನಾಯ್ಕ,ವಿಭಾಗ ಕಾರ್ಯದರ್ಶಿ ಎನ್.ಎಸ್.ಹೆಗಡೆ, ಜಿಲ್ಲಾ ಕಾರ್ಯದರ್ಶಿ ಉಷಾ ಹೆಗಡೆ, ಜಿಲ್ಲಾ ಉಪಾಧ್ಯಕ್ಷ ನಯನಾ ನೀಲಾವರ, ನಾಗರಾಜ ನಾಯಕ, ನಗರ ಅಧ್ಯಕ್ಷ ನಾಗೇಶ ಕುರ್ಡೇಕರ,ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ನಗರ ಸಭಾ ಸದಸ್ಯರು, ಪಕ್ಷದ ವಿವಿಧ ಹುದ್ದೆ ಹೊತ್ತ ಪದಾಧಿಕಾರಿಗಳು ಸೇರಿದಂತೆ ಮನೋಜ ಭಟ್ಟ,ರಾಜೇಶ ನಾಯ್ಕ ಸಿದ್ದರ, ಕಿಶನ ಕಾಂಬಳೆ ಮುರಳಿ ಗೋವೆಕರ ಹಾಗು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಉಪಸ್ಥಿತರಿದ್ದು ಕಾರ್ಯಕ್ರಮವನ್ನು ಯಶಸ್ವಿ ಗೊಳಿಸಿದರು.