ಭಟ್ಕಳ: ದಿವಂಗತ ಕ್ಯಾಪ್ಟನ್ ಕೆ.ಆರ್. ನಾಯ್ಕ ಇವರ ಸಾರಥ್ಯದಲ್ಲಿ ಕಳೆದ 10 ವರ್ಷಗಳ ಹಿಂದೆ ಚಿಕ್ಕ ಕಟ್ಟಡದಲ್ಲಿ ಪ್ರಾರಂಭಗೊಂಡ ಸಿದ್ದಾರ್ಥ ಶಿಕ್ಷಣ ಸಂಸ್ಥೆ ಇಂದು ಹೆಮ್ಮರವಾಗಿ ಬೆಳೆದು ಸಾವಿರಾರು ಮಕ್ಕಳಿಗೆ ದಾರಿದೀಪವಾಗಿದೆ ಇದು ಜಿಲ್ಲೆಗೆ ಹಮ್ಮೆಯ ವಿಷಯವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ರಾಜ್ಯ ಸಮಾಜ ಕಲ್ಯಾಣ ಇಲಾಖೆ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಹೇಳಿದರು.
ಅವರು ಶನಿವಾರದಂದು ಶಿರಾಲಿಯ ಶಿದ್ದಾರ್ಥ ಎಜ್ಯುಕೇಶನ್ ಟ್ರಸ್ಟ ವತಿಯಿಂದ ಶಿರಾಲಿಯ ಹರಕಲಿಯಲ್ಲಿ ಕಾಲೇಜಿನ ದಶಮಾನೋತ್ಸವ ಸಂಭ್ರಮಾಚರಣೆ ಕಾರ್ಯಕ್ರಮದಲ್ಲಿ ಉದ್ಘಾಟಕರಾಗಿ ಆಗಮಿಸಿ ಮಾತನಾಡಿದರು.
ಈ ಸಂಸ್ಥೆ ಕೋರೋನ ಸೇರಿದಂತೆ ಹಲವು ಕಷ್ಟಕರ ಪರಿಸ್ಥಿತಿಯಲ್ಲಿ ಸರಕಾರದ ಅನುದಾನ ಪಡೆಯದೇ ಸಾವಿರಾರು ಮಕ್ಕಳಿಗೆ ಶಿಕ್ಷಣ ನೀಡಿ ನೂರಾರು ಶಿಕ್ಷಕಕರಿಗೆ ಕೆಲಸ ನೀಡಿ ಸ್ವಂತ ಪ್ರಯತ್ನದಿಂದ ಇಷ್ಟು ದೊಡ್ಡ ಮಟ್ಟಕ್ಕೆ ಬೆಳದಿದೆ ಎಂದರೆ ಇದರ ಹಿಂದಿರುವ ಶ್ರಮವನ್ನು ನಾವು ಗಮನಿಸಬೇಕಾಗುತ್ತದೆ. ಇಂದು ಖಾಸಗಿ ಶಾಲೆಗಳ ಮಕ್ಕಳ ಶಿಕ್ಷಣ ಮತ್ತು ಅವರ ಪಾಲನೆಗೆ ಹೆಚ್ಚು ಒತ್ತುಕೊಡುತ್ತಿರುವುದನ್ನು ಗಮನಿಸಿದ್ದೇನೆ. ಸರಕಾರದ ಅನುದಾನ ಪಡೆಯದೇ ಇಷ್ಟೊಂದು ದೊಡ್ಡ ಮಟ್ಟದಲ್ಲಿ ಈ ಸಂಸ್ಥೆಯನ್ನು ಬೆಳೆಸಿದ್ದಾರೆ. ಉತ್ತಮ ಗುಣಮಟ್ಟ ಶಿಕ್ಷಣದಿಂದ ಈ ಸಂಸ್ಥೆ ದೊಡ್ಡದಾಗಿ ಬೆಳೆದಿದೆ. ಎಂದರಲ್ಲದೇ ಶಿಕ್ಷಣವು ನಾಲ್ಕು ಗೋಡೆಗಳ ಮದ್ಯದಲ್ಲಿರದೇ ಸಮಾಜದ ಹಾಗೂ ದೇಶದ ಬೆಳೆವಣಿಗೆಗೆ ಪಾತ್ರವಾಗುವ ಶಿಕ್ಷಣವನ್ನು ಇಂದು ನಾವು ನಮ್ಮ ಮಕ್ಕಳಿಗೆ ನೀಡಬೇಕಾಗಿದೆ. ಇ ನಿಟ್ಟಿನಲ್ಲಿ ಈ ಸಂಸ್ಥೆ ಶ್ರಮಿಸಿದೆ . ಈ ಶಾಲೆಯಲ್ಲಿ ಕಲಿತು ಹೋಗಿರುವ ವಿದ್ಯಾರ್ಥಿಗಳು ಉತ್ತಮ ಭವಿಷ್ಯವನ್ನು ಕಂಡುಕೊಂಡಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಸ್ಮರಣ ಸಂಚಿಕೆ ಬಿಡುಗಡೆ ಮಾಡಿದ ಶಾಸಕ ಸುನೀಲ್ ನಾಯ್ಕ ಮಾತನಾಡಿ ಇಡೀ ಜಿಲ್ಲೆಗೆ ಮಾದರಿಯಾಗಿರುವ ಶಿಕ್ಷಣವನ್ನು ಸಿದ್ದಾರ್ಥ ಸಂಸ್ಥೆ ಇಲ್ಲಿನ ಮಕ್ಕಳಿಗೆ ನೀಡುತ್ತಿದೆ. ಈ ಶಿಕ್ಷಣ ಸಂಸ್ಥೆ ಶಿಕ್ಷಣದೊಂದಿಗೆ ವಿದ್ಯಾರ್ಥಿಗಳಿಗೆ ಸಂಸ್ಕಾರವನ್ನು ನೀಡಿ ಮಕ್ಕಳ ಸರ್ವತೋಮುಖ ಅಬಿವೃದ್ದಿಗೆ ಸಹಕಾರಿಯಾಗಿದೆ.
ಈ ಸಂಸ್ಥೆ ನಮ್ಮೂರಿನಲ್ಲಿ ಕಾರ್ಯನಿರ್ವಹಸುತ್ತಿರುವುದು ನನ್ನ ಕ್ಷೇತ್ರಕ್ಕೆ ಹೆಮ್ಮೆಯ ವಿಷಯವಾಗಿದೆ. ಈ ಸಂಸ್ಥೆ ರಾಷ್ಟ್ರ
ಹಾಗೂ ಅಂತರಾಷ್ಟ್ರೀಯ ಮಟ್ಟಕ್ಕೆ ಬೆಳೆಯುವಂತಾಗಲಿ ಎಂದು ಹಾರೈಸಿದ ಶಾಸಕರು ನಮ್ಮೂರಿನ ಈ ಶಾಲೆಗೆ ಸರಳ ವ್ಯಕ್ತಿತ್ವದ ಸಚಿವರಾದ ಕೋಟ ಪೂಜಾರಿ ಬಂದಿರುವುದು ತುಂಬಾ ಸಂತೋಷವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಮಾಜಿ ಶಾಸಕ ಜೆ.ಡಿ.ನಾಯ್ಕ, ನಾಮಧಾರಿ ಸಮಾಜದ ಹಳೆಕೋಟೆ ಹನುಮಂತ ದೇವಸ್ಥಾನದ ಅದ್ಯಕ್ಷರಾದ ಸುಬ್ರಾಯ ನಾಯ್ಕ, ಹೊನ್ನಾವರ ಅರ್ಬನ್ ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕ ರಾಜೀವ್ ಶಾನುಭಾಗ್, ಶಿರಾಲಿ ಗ್ರಾಮ ಪಂಚಾಯತ ಅಧ್ಯಕ್ಷ ಶ್ರೀಮತಿ ರೇವತಿ ಆರ್. ನಾಯ್ಕ, ಬಿ.ಜೆ.ಪಿ. ಜಿಲ್ಲಾ ಉಪಾಧ್ಯಕ್ಷ ಗೋವಿಂದ ನಾಯ್ಕ, ಸಿದ್ದಾರ್ಥ ಸಂಸ್ಥೆಯ ಕಾರ್ಯದರ್ಶಿ ಅಶೋಕ್ ಕುಮಾರ ಶೆಟ್ಟಿ ಮಾತನಾಡಿದರು. ಕಾರ್ಯಕ್ರಮದ ಅದ್ಯಕ್ಷತೆಯನ್ನು ಸಿದ್ದಾರ್ಥ ಸಂಸ್ಥೆಯ ಟ್ರಸ್ಟೀ ಸದಸ್ಯರಾದ ಶ್ರೀಧರ ನಾಯ್ಕ ವಹಿಸಿ ಮಾತನಾಡಿದರು. ಪ್ರಾರಂಭದಲ್ಲಿ ಸಿದ್ದಾರ್ಥ ಎಜ್ಯುಕೇಷನ್ ಟ್ರಸ್ಟ್ ನ ಅಧ್ಯಕ್ಷರಾದ ಶ್ರೀಮತಿ ಅರ್ಚನಾ ನಾಯ್ಕ ಎಲ್ಲರನ್ನು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ವೇದಿಕೆಯಲ್ಲಿ ಶಾಸಕ ಸುನೀಲ್ ನಾಯ್ಕ ಕಾಲೇಜಿನ ಸ್ಮರಣ ಸಂಚಿಕೆಯನ್ನು ಬಿಡುಗಡೆ ಮಾಡಿದರು. ವೇದಿಕೆಯಲ್ಲಿ ಸಿದ್ದಾರ್ಥ
ಶಿಕ್ಷಕಣ ಸಂಸ್ಥೆಯ ಪರವಾಗಿ ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಶಾಸಕ ಸುನೀಲ್ ನಾಯ್ಕ ಹಾಗೂ ನಿವೃತ್ತ ಹಿರಿಯ ಆರೋಗ್ಯ ಸಹಾಯಕ ಈರಯ್ಯ ದೇವಾಡಿಗ ರನ್ನು ಗೌರವಿಸಿ ಸನ್ಮಾನಿಸಲಾಯಿತು.
ಪ್ರಾರಂಭದಲ್ಲಿ ವಿದ್ಯಾರ್ಥಿಗಳಾದ ಸಹನಾ ಸಂಗಡಿಗರು ಪ್ರಾರ್ಥನೆ ಹಾಡಿದರು.
ಕಾರ್ಯಕ್ರಮವನ್ನು ಶಿಕ್ಷಕರಾದ ಮಾರುತಿ ನಾಯ್ಕ ಹಾಗೂ ಗಣೇಶ ನಿರೂಪಿಸಿದರು. ಶಿಕ್ಷಕಿ ಜಯಶ್ರೀ ವಂದನಾರ್ಪಣೆ ಮಾಡಿದರು.