ಕಾರವಾರ: ಮದುವೆಯಾಗುವುದಾಗಿ ನಂಬಿಸಿ ಯುವತಿಯಿಂದ ನಗ್ನ ವಿಡಿಯೋಗಳನ್ನು ಪಡೆದುಕೊಂಡು ಬ್ಲಾಕ್ ಮೇಲ್ ಮಾಡುತ್ತಿದ್ದ ವ್ಯಕ್ತಿಯ ವಿರುದ್ಧ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ತಾಲೂಕಿನ ಸದಾಶಿವಗಡ ಮೂಲದ ಲೆಸ್ಲಿ ಎಂಬಾತ ಕುವೈತ್‍ನಲ್ಲಿದ್ದ ಕಾರವಾರ ಮೂಲದ 24 ವರ್ಷದ ಯುವತಿಯನ್ನು ಪ್ರಿತೀಸುವುದಾಗಿ ನಂಬಿಸಿ, ನಗ್ನ ವಿಡಿಯೋಗಳನ್ನು ಅವಳಿಂದ ಪಡೆದುಕೊಂಡಿದ್ದು, ಬಳಿಕ ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡುವುದಾಗಿ ಯುವತಿಗೆ ಬ್ಲಾಕ್ ಮೇಲ್ ಮಾಡುತ್ತಿದ್ದ ಎಂದು ತಿಳಿದು ಬಂದಿದೆ.
ಈ ಹಿನ್ನೆಲೆಯಲ್ಲಿ ಮನನೊಂದ ಯುವತಿಯು ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.