ಕಾರವಾರ: ತೆಂಗಿನಕಾಯಿ ತರಲೆಂದು ಮನೆ ಸಮೀಪದ ತೆಂಗಿನಮರದ ಬಳಿ ತೆರಳಿದ ಮಹಿಳೆಯು ಸಾವನ್ನಪ್ಪಿದ ಘಟನೆ ಶನಿವಾರ ತಾಲೂಕಿನ ಸದಾಶಿವಗಡದ ದೋಬಿವಾಡದಲ್ಲಿ ನಡೆದಿದೆ.
ಟೆರೆಜಾ ಮಿನಿನೊ ರೋಡಗ್ರಿಸ್ (73) ಮೃತ ಮಹಿಳೆಯಾಗಿದ್ದು, ಕಳೆದ ಹಲವು ವರ್ಷಗಳಿಂದ ಪಾರ್ಕಿನ್ಸನ್, ಶುಗರ್ ಹಾಗೂ ಬಿಪಿ ಕಾಯಿಲೆಯಿಂದ ಬಳಲುತ್ತಿದ್ದಳು ಎನ್ನಲಾಗಿದೆ. ಎಂದಿನಂತೆ ಕಾಯಿ ತರಲು ತೆರಳಿದ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಹಲವು ಗಂಟೆಗಳ ಕಾಲ ಮೃತದೇಹವು ಬಿಸಿಲಿನಲ್ಲಿಯೇ ಇದ್ದ ಪರಿಣಾಮ ಚರ್ಮ ಸುಟ್ಟಿದ್ದು, ಮಾರುಕಟ್ಟೆಗೆ ತೆರಳಿದ ಪತಿಯು ಮನೆಗೆ ಬಂದು ಹುಡುಕಾಡಿದಾಗ ಈ ಘಟನೆ ಬೆಳಕಿಗೆ ಬಂದಿದೆ. ಅಧಿಕ ರಕ್ತದೊತ್ತಡ ಅಥವಾ ಹೃದಯ ಸಂಬಂಧಿ ಕಾಯಿಲೆಯಿಂದ ಸಾವನ್ನಪ್ಪಿದ್ದಾರೆ ಎಂದು ಶಂಕಿಸಲಾಗಿದೆ.
ಈ ಬಗ್ಗೆ ಚಿತ್ತಾಕುಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಪರಿಶೀಲನೆ ನಡೆಸಿದ್ದಾರೆ.