ಕಾರವಾರ: ಗೋವಾ ರಾಜ್ಯ ವಿಧಾನಸಭಾ ಚುನಾವಣೆಯು ಫೆ.14 ಸೋಮವಾರದಂದು ನಡೆಯುತ್ತಿರುವದರಿಂದ ಉತ್ತರ ಕನ್ನಡ ಜಿಲ್ಲೆಯ ಕೈಗಾರಿಕೆ, ಕಾರ್ಖಾನೆ ಹಾಗೂ ಇನ್ನಿತರ ಸಂಸ್ಥೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಗೋವಾ ರಾಜ್ಯದ ಮತದಾರರಿಗೆ ಮಾತ್ರ ಸೀಮಿತವಾಗಿ ಮತದಾನ ಮಾಡಲು ಅನಕೂಲವಾಗುವಂತೆ ವೇತನ ಸಹಿತ ರಜೆಯನ್ನು ಪಡೆಯಲು ಅವಕಾಶವಿರುತ್ತದೆ ಎಂದು ಸರ್ಕಾರದ ಅಧೀನ ಕಾರ್ಯದರ್ಶಿ ಅಪೇಕ್ಷಾ ಸತೀಶ ಪವಾರ ಅವರು ಜಿಲ್ಲಾಧಿಕಾರಿ ಪತ್ರ ಬರೆದು ತಿಳಿಸಿರುತ್ತಾರೆ.
ಫೆ.14ಕ್ಕೆ ಗೋವಾ ರಾಜ್ಯದ ಮತದಾರರಿಗೆ ವೇತನ ಸಹಿತ ರಜೆ;ಡಿಸಿ ಸೂಚನೆ
