• Slide
    Slide
    Slide
    previous arrow
    next arrow
  • ಜಿ.ಎಲ್.ಹೆಗಡೆ’ಗೆ ಅರ್ಹ ಸ್ಥಾನ ಲಭಿಸಿರುವುದು ಸಂತಸ ತಂದಿದೆ; ಶಿವಾನಂದ ಹೆಗಡೆ

    300x250 AD

    ಹೊನ್ನಾವರ : ಅರ್ಹತೆ ಇರುವವರಿಗೆ ಹುದ್ದೆ ಗೌರವಗಳ ಅಪೇಕ್ಷೆ ಇರುವುದಿಲ್ಲ ಆದರೆ ಇಂದಿನ ರಾಜಕೀಯ ಪರಿಸ್ಥಿತಿಯಲ್ಲಿ ಅರ್ಹತೆ ಇಲ್ಲದವರೂ ಹುದ್ದೆ ಪಡೆಯುವ ಬಗ್ಗೆ ಕೆಲಸ ಮಾಡುತ್ತಾರೆ. ಆದರೆ ಕರ್ನಾಟಕ ಯಕ್ಷಗಾನ ಅಕಾಡೆಮಿಗೆ ಅರ್ಹರಾದ ಡಾ. ಜಿ.ಎಲ್ ಹೆಗಡೆಯವರಿಗೆ ಈ ಸ್ಥಾನ ಲಭಿಸಿರುವುದು ಎಲ್ಲರಿಗೂ ಸಂತಸ ಉಂಟುಮಾಡಿದೆ ಅದಷ್ಟೇ ಅಲ್ಲದೆ ಅವರು ನಮ್ಮವರು ಎಂಬುದೇ ನಮಗೆಲ್ಲರಿಗೆ ಹೆಮ್ಮೆ ಎಂದು ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿ ನಿರ್ದೇಶಕರಾದ ಶಿವಾನಂದ ಹೆಗಡೆ ಕೆರೆಮನೆ ಹೇಳಿದರು.

    ಅವರು ಹವ್ಯಕ ಮಂಡಲ ಕುಮಟಾ, ಶ್ರೀ ರಘೋತ್ತಮ ಮಠ ಕಕ್ಕಾರು ಹಾಗೂ ಶ್ರೀ ಅಖಿಲ ಹವ್ಯಕ ಮಹಾಸಭಾ, ಬೆಂಗಳೂರು, ಶಾಖೆ ಉತ್ತರ ಕನ್ನಡ ಇವುಗಳ ಸಂಯುಕ್ತ ಆಶ್ರಯದಲ್ಲಿ ಶ್ರೀ ರಘೋತ್ತಮ ಮಠ, ಕೆಕ್ಕಾರಿನ ಶ್ರೀ ವಿದ್ಯಾರಣ್ಯ ಸಂಸ್ಕೃತ ಪಾಠಶಾಲೆ, ಶ್ರೀ ಭಾರತಿ ಸಭಾಭವನದಲ್ಲಿ ನಡೆದ ಕರ್ನಾಟಕ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷರಾಗಿರುವ ಡಾ. ಜಿ.ಎಲ್. ಹೆಗಡೆಯವರಿಗೆ ಅಭಿನಂದನಾ ಕಾರ್ಯಕ್ರಮ ಉದ್ಘಾಟಿಸುವ ಜೊತೆಗೆ ಅಭಿನಂದನೆ ಸಲ್ಲಿಸಿ ಅವರು ಮಾತನಾಡಿದರು.

    ಯಕ್ಷಗಾನದ ಮೂಲಕ ಕಲಾಲೋಕಕ್ಕೆ ತೆರೆದುಕೊಂಡ ಹೆಗಡೆಯವರು ಯಕ್ಷಗಾನಕ್ಕೆ ಹವ್ಯಕರ ಕೊಡುಗೆ ಎನ್ನುವ ಬಗ್ಗೆ ವಿಶೇಷ ಕಾರ್ಯವನ್ನು ಮಾಡಿದ್ದು ಹವ್ಯಕರೆಲ್ಲರೂ ಹೆಮ್ಮೆಪಡುವಂತಹ ವಿಷಯ ಸೂಕ್ತ ವ್ಯಕ್ತಿಗೆ ಸೂಕ್ತ ಸ್ಥಾನ ದೊರೆತಿರುವುದು ಸಂತಸ ತಂದಿದೆ ಎಂದರು.

    ನಾಗರಾಜ ಹೆಗಡೆ ಅಪಗಾಲ ಶುಭಾಶಂಸನಾ ನುಡಿಯೊಂದಿಗೆ ಡಾ. ಜಿ.ಎಲ್ ಹೆಗಡೆಯವರ ಬದುಕು-ಬರಹ ಹಾಗೂ ಜೀವನದ ಕುರಿತಾಗಿ ಸಮಗ್ರ ಮಾಹಿತಿಯನ್ನು ಸಭೆಗೆ ತಿಳಿಸಿಕೊಟ್ಟರು. ಯಕ್ಷಗಾನ ಕ್ಷೇತ್ರದಲ್ಲಿ ಅವರು ಮಾಡಿದ ಸಾಧನೆ ಸಾಹಿತ್ಯ ಕ್ಷೇತ್ರದಲ್ಲಿ ಅವರ ಕೃಷಿ ಅವರಿಗೆದುರಾದ ಸಮಸ್ಯೆಗಳ ಬಗ್ಗೆ ಹೀಗೆ ಹತ್ತು ಹಲವು ವಿಷಯಗಳ ಕುರಿತಾಗಿ ಸಮಗ್ರ ಮಾಹಿತಿ ನೀಡಿದರು.

    ಇದೇ ಸಂದರ್ಭದಲ್ಲಿ ಕಲಾವಿದ ಜಿ.ಡಿ ಭಟ್ಟರವರು ಅಭಿಮಾನದಿಂದ ತಯಾರಿಸಿದ ಕಿರೀಟ ವಿನ್ಯಾಸದ ಆಸನದಲ್ಲಿ ಕುಳ್ಳಿರಿಸಿ ಡಾ. ಜಿ.ಎಲ್ ಹೆಗಡೆಯವರನ್ನು ಹಾಗೂ ಅವರ ಧರ್ಮಪತ್ನಿ ಮಾಯಾ ಹೆಗಡೆಯವರನ್ನು ಸನ್ಮಾನಿಸಿ ಗೌರವಿಸಲಾಯಿತು.

    ಈ ಸಂದರ್ಭದಲ್ಲಿ ಮಾತನಾಡಿದ ಡಾ. ಜಿ.ಎಲ್ ಹೆಗಡೆ. ತುಂಬು ಪ್ರೀತಿಯಿಂದ ಈ ಸನ್ಮಾನವನ್ನು ಸ್ವೀಕರಿಸಿದ್ದು, ಜೀವನದಲ್ಲಿ ಅತ್ಯಂತ ಕಷ್ಟದ ಸಂದರ್ಭಗಳನ್ನು ನಾನು ಎದುರಿಸಿದ್ದು ಇದೀಗ ನನಗೆ ದೇವರು ಬೇರೊಂದು ಗೌರವದ ಸ್ಥಾನ ನೀಡಿದ್ದಾರೆ. ಪ್ರತಿ ಹಂತದಲ್ಲಿ ದೇವರು ನಮ್ಮನ್ನು ಪರೀಕ್ಷಿಸುತ್ತಿದ್ದಾರೆ, ದೊಡ್ಡ ಸ್ಥಾನ ಬಂದಿರುವ ನಿಟ್ಟಿನಲ್ಲಿ ನಾನು ಬದಲಾಗುವುದಿಲ್ಲ, ನಾನು ಸದಾ ನಿಮ್ಮೆಲ್ಲರ ಜೊತೆಗೆ ಇರುತ್ತೇನೆ ಎಂದರು.

    300x250 AD

    ಯಕ್ಷಗಾನದಲ್ಲಿ ತೆಂಕುತಿಟ್ಟು ಬಡಗುತಿಟ್ಟು ಹೀಗೆ ಬೇರೆ ಬೇರೆ ವಿಭಾಗಗಳಿವೆ ಆದರೆ ಅವೆಲ್ಲವೂ ಒಂದೇ ಆಗಿದೆ. ಆ ಬೇಧದ ಜಗಳ ಮೊದಲು ಬಿಡಬೇಕು ಎಂದರು. ಯಕ್ಷಗಾನಕ್ಕೆ ಉತ್ತರ ಕನ್ನಡವೇ ಮೂಲವಾಗಿದ್ದು, ಯಕ್ಷಗಾನದ ಉಳಿವಿಗೆ ಹವ್ಯಕರ ಕೊಡುಗೆ ಅತ್ಯಂತ ಮಹತ್ವದ್ದು ಎಂದು ಅವರು ಯಕ್ಷಗಾನದ ಪದ್ಯದ ಶಬ್ದಗಳ ಬಳಕೆಯ ಬಗ್ಗೆ ತಿಳಿಸಿದರು.

    ಕೆ.ಡಿ.ಸಿ.ಸಿ ಬ್ಯಾಂಕ್ ನ ನಿರ್ದೇಶಕ ಶಿವಾನಂದ ಹೆಗಡೆ, ಕಡತೋಕಾ ಮಾತನಾಡಿ ಬಡತನದಲ್ಲಿ ಬೆಳೆದು ಬದುಕಿನಲ್ಲಿ ಯಶಸ್ಸು ಸಾಧಿಸಿದ ಜಿ.ಎಲ್ ಹೆಗಡೆಯವರಿಗೆ ಗೌರವ ಸಂದಿರುವುದು ನಮಗೆಲ್ಲರಿಗೂ ಸಂದ ಗೌರವ ಎಂದು ಅಭಿಪ್ರಾಯಪಟ್ಟರು.

    ಸಂಗೀತ ನೃತ್ಯ ಅಕಾಡೆಮಿಯ ಕರ್ನಾಟಕ ಕಲಾಶ್ರೀ ಪುರಸ್ಕೃತರಾದ ಪೆÇ್ರ. ಎಸ್. ಶಂಭು ಭಟ್ಟ, ಕಡತೋಕ ಅಧ್ಯಕ್ಷತೆ ವಹಿಸಿದ್ದರು. ವಿಷ್ಣುಗುಪ್ತ ವಿಶ್ವ ವಿದ್ಯಾಪೀಠ, ಆಶೋಕೆಯ ವ್ಯವಸ್ಥಾ ಪರಿಷತ್ ನ ಅಧ್ಯಕ್ಷ ಮಂಜುನಾಥ ಭಟ್ಟ, ಸುವರ್ಣಗದ್ದೆ ಪ್ರಾಸ್ಥಾವಿಕವಾಗಿ ಮಾತನಾಡಿದರೆ, ಹವ್ಯಕ ಮಂಡಲ ಕುಮಟಾದ ಅಧ್ಯಕ್ಷರಾದ ಶ್ರೀ ಜಿ. ಎಸ್. ಹೆಗಡೆ ಸ್ವಾಗತಿಸಿದರು. ಅಖಿಲ ಹವ್ಯಕ ಮಹಾಸಭಾ ಉತ್ತರ ಕನ್ನಡ ಶಾಖೆಯ ನಿರ್ದೇಶಕರಾದ ಅರುಣ ಹೆಗಡೆ ಜಿ.ಎಲ್ ಹೆಗಡೆಯವರಿಗೆ ಅಭಿನಂದನಾ ನುಡಿಗಳನ್ನು ಆಡಿದರು.

    ಆರ್. ಜಿ. ಹೆಗಡೆ (ಅಧ್ಯಕ್ಷರು ಹವ್ಯಕ ಮಂಡಲ, ಹೊನ್ನಾವರ) ಸುಬ್ರಾಯ ಭಟ್ಟ (ಅಧ್ಯಕ್ಷರು ಶ್ರೀ ರಘೋತ್ತಮ ಮಠ, ಕೆಕ್ಕಾರು) ಅತಿಥಿಗಳಾಗಿ ಜಿ.ಎಲ್ ಹೆಗಡೆಯವರ ಕುರಿತಾಗಿ ಅಭಿಮಾನದ ಮಾತುಗಳನ್ನಾಡಿದರು. ಗಣೇಶ ಜೋಶಿ ಕಾರ್ಯಕ್ರಮ ನಿರೂಪಿಸಿದರು. ಗಣೇಶ ಹೆಗಡೆ ವಂದಿಸಿದರು ಕಾರ್ಯಕ್ರಮದ ಕೊನೆಯಲ್ಲಿ ಶ್ರೀಪಾದ ಭಟ್ಟ ಕಡತೋಕ ಹಾಗೂ ಮಂಜುನಾಥ ಭಂಡಾರಿ ಇವರಿಂದ ಯಕ್ಷ ಗೀತಗಾಯನ ಗಮನಸೆಳೆಯಿತು.

    Share This
    300x250 AD
    300x250 AD
    300x250 AD
    Leaderboard Ad
    Back to top