ಕಾರವಾರ: ಕೋವಿಡ್‍ನಂತಹ ಸಂಕಷ್ಠ ಸನ್ನಿವೇಶದ ನಡುವೆ ಕೂಡ ಕೇಂದ್ರ ಸರಕಾರ 15ನೇ ಹಣಕಾಸು ಯೋಜನೆಯ ಮೂಲಕ ಪ್ರತಿ ಗ್ರಾಮ ಪಂಚಾಯತ್ ಗಳಿಗೆ ಗರಿಷ್ಠಅನುದಾನವನ್ನು ನೀಡಿದ್ದು, ಇದರ ಸದ್ವಿನಿಯೋಗ ಮತ್ತು ಸದ್ಬಳಕೆ ಆಗಬೇಕೆಂದು ಸಮಾಜ ಕಲ್ಯಾಣ, ಹಿಂದುಳಿದ ವರ್ಗ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರಿನಿವಾಸ ಪೂಜಾರಿ ಹೇಳಿದರು.
ಶುಕ್ರವಾರ ಜಿಲ್ಲಾ ಪಂಚಾಯತ್ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಉತ್ತಮ ಸಾಧನೆಗೈದ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಜಿಲ್ಲಾ ಮಟ್ಟದ ಪ್ರಶಸ್ತಿ ಪ್ರಧಾನ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಅವರು ಯೋಜನೆಗೆ ಮತ್ತು ಯೋಚನೆಗೆ ಹೆಚ್ಚು ಶಕ್ತಿ ನೀಡುವಂತಹದ್ದು ಉದ್ಯೋಗ ಖಾತರಿ ಯೋಜನೆಯಾಗಿದೆ , ಗ್ರಾಮ ಪಂಚಾಯತ್ ಅಭಿವೃದ್ದಿ ಅಧಿಕಾರಿ, ಅಧ್ಯಕ್ಷ, ಸದಸ್ಯರು ಸೇರಿ ವಿಚಾರ ಮಾಡಿ ನಮ್ಮ ಪಂಚಾಯತ್ ನಲ್ಲಿ ಎಷ್ಟು ಅನುದಾನವಿದೆ, ಉದ್ಯೋಗ ಖಾತರಿ ಯೋಜನೆ ಮೂಲಕ ಹೇಗೆ ಅನುದಾನ ಬಳಸಿಕೊಳ್ಳಬಹುದು ಎಂಬುದನ್ನು ಗಮನದಲ್ಲಿಟ್ಟಿಕೊಂಡು ಬಡವರ ಮನೆಗೆ ಬಾವಿ, ಶೌಚಾಲಯ, ರಸ್ತೆ, ಹೊಸ ಮನೆಗೆ ಎಷ್ಟು ಅನುದಾನ ನೀಡಬಹುದು ಎಂಬುದನ್ನು ಯೋಚನೆ ಮಾಡಿ ಸ್ಪಷ್ಟವಾದ ಕಲ್ಪನೆಯೊಂದಿಗೆ ಕಾರ್ಯನಿರ್ವಹಿಸಿದ್ದಲ್ಲಿ ಒಂದು ಇಡಿ ಗ್ರಾಮದ ಅಭಿವೃದ್ಧಿಯಾಗುತ್ತದೆ. ಯೋಜನೆಯಡಿ ಅಧಿಕಾರಿಗಳು ಕೋಟ್ಯಾಂತರ ರೂಪಾಯಿ ಅನುದಾನ ಹರಿದುಬರುವಂತಹ ವ್ಯವಸ್ಥೆ ಮಾಡಿ, ಇಂಜಿನಿಯರ್ ಸಹ ಅದಕ್ಕೆ ಪೂರಕವಾದಂತಹ ಯೋಜನಾ ವೆಚ್ಚಗಳನ್ನ ತಯಾರು ಮಾಡಿದ್ದೆ ಆದಲ್ಲಿ ಜನರಿಗೆ ಉದ್ಯೋಗವು ದೊರೆಯುವದರೊಂದಿಗೆ ಗ್ರಾಮೀಣ ಪ್ರದೇಶಗಳು ಅಭಿವೃದ್ಧಿ ಆಗುತ್ತವೆ ಎಂದರು.
ಈಗಾಗಲೇ ಉ.ಕ ಜಿಲ್ಲೆಯು ಮಾದರಿ ಜಿಲ್ಲೆಯಾಗಿದೆ. ಪರಿಸರಕ್ಕೆ ಹಾನಿಯಾಗದಂತೆ ಇನ್ನೂ ಹೆಚ್ಚಿನ ಸಂಪನ್ಮೂಲಗಳನ್ನು ಕ್ರೊಡಿಕರಿಸಿ, ಉದ್ಯೋಗ ಖಾತರಿ ಯೋಜನೆಯಡಿ ಹೆಚ್ಚಿನ ಕಾರ್ಯಗಳನ್ನು ಕೈಗೊಂಡು ಜಿಲ್ಲೆಯು ದೇಶಕ್ಕೆ ಮಾಧರಿಯಾಗುವಂತೆ ಪ್ರಗತಿ ಸಾಧಿಸಬೇಕೆಂದರು.
ಕಾರ್ಮಿಕ ಖಾತೆ ಸಚಿವ ಶಿವರಾಮ್ ಹೆಬ್ಬಾರ್ ಮಾತನಾಡಿ ಜಿಲ್ಲೆಯಲ್ಲಿ ಉದ್ಯೋಗ ಖಾತರಿ ಯೋಜನೆಯಲ್ಲಿ ಅನುದಾನವನ್ನು ಮತ್ತಷ್ಟು ಬಳಸಿಕೊಳ್ಳಬೇಕಾದ ಅವಶ್ಯಕತೆಯಿದೆ. ಯೋಜನೆಯ ಅನುದಾನವನ್ನು ಹೆಚ್ಚೆಚ್ಚು ಬಳಕೆ ಮಾಡಿಕೊಳ್ಳುವುದರ ಮೂಲಕ ಗ್ರಾಮೀಣ ಜನರಿಗೆ ಸಾಮಾಜಿಕ ಆರ್ಥಿಕ ಅನಕೂಲವಾಗುತ್ತದೆ. ಈ ಮೂಲಕ ಜಿಲ್ಲೆಯು ಸರ್ವತೋಮುಖವಾಗಿ ಅಭಿವೃದ್ಧಿ ಹೊಂದಲು ಜಿ.ಪಂ ಸಿ ಇ ಒ ಗಮನವರಿಸುವಂತಾಗಬೇಕೆಂದರು.
ಶಾಸಕಿ ರೂಪಾಲಿ ನಾಯ್ಕ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವಿಧಾನ ಪರಿಷತ್ ಸದಸ್ಯರಾದ ಎಸ್ ವಿ ಸಂಕನೂರ, ಗಣಪತಿ ಡಿ ಉಳ್ವೇಕರ್, ಕಾರವಾರ ನಗರಸಭೆ ಅಧ್ಯಕ್ಷ ನಿತಿನ್ ಎಸ್ ಪಿಕಳೆ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪ್ರಿಯಾಂಗಾ ಎಮ್ ಸೇರಿದಂತೆ ಇತರರು ಇದ್ದರು.
ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಜಿಲ್ಲೆಯಲ್ಲಿ ಸಾಧಿಸಿದ ಪ್ರಗತಿಯ ಕಿರು ಪರಿಚಯ
ಜಿಲ್ಲೆಯಲ್ಲಿ ಕಳೆದ ವರ್ಷ 15.32ಲಕ್ಷ ಮಾನವ ದಿನ ಗುರಿಗೆ 17ಲಕ್ಷ ಮಾನವ ದಿನ ಸ್ರಜನೆ ಮಾಡಲಾಗಿತ್ತು. ಪ್ರಸಕ್ತ ಸಾಲಿನಲ್ಲಿ 17 ಲಕ್ಷ ಮಾನವ ದಿನಗಳ ಗುರಿಗೆ ತಕ್ಕಂತೆ ಇಲ್ಲಿಯವರೆಗೆ 16.91 ಲಕ್ಷ ಮಾನವ ದಿನ ಸೃಜಿಸಿ ಶೇಕಡಾ 98.47% ರಷ್ಟು ಸಾಧನೆ ಮಾಡಲಾಗಿದೆ, ಈ ವರ್ಷವೂ ಸಹ ಹಿಂದಿನ ಸಾಲಿನಂತೆ ಗುರಿ ಮೀರಿ ಹೆಚ್ಚಿನ ಸಾಧನೆ ಮಾಡಲಾಗುವುದು.
1.84 ಲಕ್ಷ ಜಾಬ್ ಕಾರ್ಡ್ ವಿತರಿಸಲಾಗಿದ್ದು, ಅದರಲ್ಲಿ 85 ಸಾವಿರ ಸಕ್ರೀಯ ಜಾಬ್ ಕಾರ್ಡ್ ಇರುತ್ತದೆ. ನಮ್ಮ ಜಿಲ್ಲೆಯಲ್ಲಿ ಸ್ಥಳೀಯ ಕೂಲಿ ದರ ಹೆಚ್ಚಿಗೆ ಇದ್ದು ನರೇಗಾ ಯೋಜನೆಯಡಿ ಕೂಲಿ ಬೇಡಿಕೆ ಕಡಿಮೆ ಇದೆ. ಆದರೂ ಸಹ ವೈಯಕ್ತಿಕ ಕಾಮಗಾರಿಗಳನ್ನು ಕೈಗೊಂಡು ಜನರಿಗೆ ಯೋಜನೆಯ ಲಾಭ ಪಡೆಯುವಂತೆ ಪ್ರೋತ್ಸಾಹಿಸಲಾಗುತ್ತಿದೆ.
ಪ್ರಸ್ತುತ ಜಿಲ್ಲೆಯಲ್ಲಿ 229 ಗ್ರಾಮಗಳನ್ನು ಕೊಳಚೆ ಮುಕ್ತ ಮಾಡಲು ಕ್ರಮವಹಿಸಲಾಗಿದ್ದು. ಇದರಲ್ಲಿ 2801 ಬಚ್ಚಲು ಗುಂಡಿ ಕಾಮಗಾರಿ ಪ್ರಗತಿಯಲ್ಲಿದ್ದು 7102 ಬಚ್ಚಲು ಗುಂಡಿ ಕಾಮಗಾರಿ ಪೂರ್ಣಗೊಂಡಿದೆ. ಜಿಲ್ಲೆಯಲ್ಲಿ ಕಳೇದ ವರ್ಷದಿಂದ ಇಲ್ಲಿಯವರೆಗೆ 15 ಸಾವಿರಕ್ಕಿಂತ ಹೆಚ್ಚು ಬಚ್ಚಲು ಗುಂಡಿ ನಿರ್ಮಾಣಗೊಂಡಿವೆ. ಮಳೆಗಾಲದಲ್ಲಿ ನೀರನ್ನು ದಾಟಲು ಕೆಲವು ಗ್ರಾಮಗಳಲ್ಲಿ ಕಟ್ಟಿಗೆಯಿಂದ ಮಾಡಿದ ಸೇತುವೆ ಬಳಸುತ್ತಿದ್ದರು. ಮಳೆಗಾಲದಲ್ಲಿ ನೀರಿನ ಮಟ್ಟದ ಏರುಪೇರಿನಿಂದ ಕೊಚ್ಚಿ ಹೊಗುತ್ತಿತ್ತು. ಸದರಿ ಸಮಸ್ಯೆ ಪರಿಹಾರಕ್ಕಾಗಿ ಅಂಕೋಲಾ ತಾಲೂಕಿನ ಸುಂಕಸಾಳ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ವೆಂಟೆಡ್ ಡ್ಯಾಮ್/ಫೂಟ್ ಬ್ರಿಡ್ಜ್ ಕಾಮಗಾರಿ ಕೈಗೊಳ್ಳಲಾಗಿದೆ ಸದರಿ ಕಾಮಗಾರಿ ರಾಜ್ಯಕ್ಕೆ ಮಾದರಿಯಾಗಿದ್ದು, ಜಿಲ್ಲೆಯಲ್ಲಿ ಇದೇ ಮಾದರಿಯಲ್ಲಿ 60 ಕಾಮಗಾರಿಗಳನ್ನು ಕೈಗೊಳ್ಳಲು ಯೋಜನೆ ರೂಪಿಸಲಾಗಿದೆ.
ಕೆಲವು ಶಾಲೆಗಳಲ್ಲಿ ಸಮಗ್ರ ಅಭಿವ್ರದ್ಧಿ ಮಾಡಲು ಕ್ರಮ ಕೈಗೊಂಡಿದ್ದು. ಅದರಲ್ಲಿ ಶಾಲಾ ಆಟದ ಮೈದಾನ, ಶೌಚಾಲಯ, ಹೆಚ್ಚಿನ ಹೆಣ್ಣು ಮಕ್ಕಳು ಇರುವ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಇನ್ಸಿನರೇಟರ್ ಮತ್ತು ಡ್ರೇಸಿಂಗ್ ರೂಮ್ ಒಳಗೊಂಡ “ಪಿಂಕ್ ಟಾಯ್ಲೇಟ್”, ಕಂಪೌಂಡ್, ಭೋಜನಾಲಯ ಮತ್ತು ಅಡುಗೆ ಕೋಣೆ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ. 114 ಆಟದ ಮೈದಾನ ಕಾಮಗಾರಿಗಳಲ್ಲಿ ಇಲ್ಲಿಯವರೆಗೆ 25 ಕಾಮಗಾರಿ ಪೂರ್ಣಗೊಂಡಿದೆ. ಜಿಲ್ಲೆಯ 131 ಶಾಲೆಗಳಲ್ಲಿ ನರೇಗಾದಡಿ ಶೌಚಾಲಯ ಕಟ್ಟಿಕೊಡುವ ಗುರಿ ಹೊಂದಲಾಗಿದ್ದು, ಅದರಲ್ಲಿ 44 ಕಾಮಗಾರಿ ಪೂರ್ಣಗೊಂಡಿದೆ.
ಜಿಲ್ಲೆಯಲ್ಲಿ ಮಾದರಿಯಾಗಿ ಹಣಕೋಣ ಪಂಚಾಯತ ವ್ಯಾಪ್ತಿಯಲ್ಲಿ ಪ್ರವಾಸಿ ತಾಣ ಹಾಗೂ ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣೆಯ ಸಲುವಾಗಿ ಭೀಮಕೋಲ್ ಕೆರೆ ಬಂಡ್ ಅಭಿವೃದ್ಧಿ ಕಾಮಗಾರಿಯನ್ನು ಕೈಗೊಳ್ಳಲಾಗುತ್ತಿದೆ. ಇದೇ ರೀತಿ ಅಂಕೋಲಾ ತಾಲೂಕಿನ ಬೊಬ್ರುವಾಡಾ ಗ್ರಾಮ ಪಂಚಾಯತದಲ್ಲಿ ಹೊನ್ನೆಗುಡಿ ಬೀಚ್ ಗಾರ್ಡನ್ ಅಭಿವ್ರದ್ದಿ ಮತ್ತು ಶಿರಸಿ ತಾಲೂಕಿನ ಬನವಾಸಿ ಗ್ರಾಮ ಪಂಚಾಯತದಲ್ಲಿ ಪಂಪ ವನ ಅಭಿವ್ರದ್ಧಿಪಡಿಸುವ ಕಾಮಗಾರಿ ಕೈಗೋಳ್ಳಲು ಯೋಜನೆ ರೂಪಿಸಲಾಗುತ್ತಿದೆ.
ಕಳೆದ ಬೇಸಿಗೆಯಲ್ಲಿ ಕರಾವಳಿಯ 19 ಗ್ರಾಮ ಪಂಚಾಯತಗಳಲ್ಲಿ ನೀರಿನ ಟ್ಯಾಂಕರ್ ಪೂರೈಕೆ ಮಾಡಲಾಗಿತ್ತು. ಈ ನೀರಿನ ಸಮಸ್ಯೆಗಳಿಗೆ ನೈಸರ್ಗಿಕವಾಗಿ ಪರಿಹಾರವನ್ನು ನೀಡಲು ನರೇಗಾ ಹಾಗೂ ಅರಣ್ಯ ಇಲಾಖೆಯ ಅಡಿಯಲ್ಲಿ “ಬಿಂದಿಗೆ” ಕಿರು ಯೋಜನೆಯನ್ನು ಚಟುವಟಿಕೆ ರೂಪದಲ್ಲಿ ಅಂಕೋಲಾ ತಾಲೂಕಿನ ಅಗಸೂರು ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಕೈಗೊಳ್ಳಲಾಗಿ ಯಶಸ್ವಿಯಾಗಿದ್ದು ಇರುತ್ತದೆ. ಮುಂದೇ ಇದೇ ರೀತಿ ಬೇರೆ ಕಡೆಗಳಲ್ಲಿ ಕಾಮಗಾರಿಗಳನ್ನು ಮಾಡಲು ಯೋಜನೆ ರೂಪಿಸಲಾಗುತ್ತಿದೆ.
ಅಂಕೋಲಾ ತಾಲೂಕ ಪಂಚಾಯತಿಯಲ್ಲಿ
ನರೇಗಾ ಅನುಷ್ಟಾನದ ಶ್ರೇಣಿಯಲ್ಲಿಯು ಮುಂಚೂನಿಯ ಜೊತೆಗೆ ವಿಶೇಷ ನರೇಗಾ ಕಾಮಗಾರಿಗಳ ಅನುಷ್ಟಾನ. ಉದಾ: ಬಿಂದಿಗೆ ಪ್ರಾಜೇಕ್ಟ್, ವೆಂಟೆಡ್ ಡ್ಯಾಮ್/ಫೂಟ್ ಬ್ರೀಡ್ಜ್(ರಾಜ್ಯಕ್ಕೆ ಮಾದರಿ ಕಾಮಗಾರಿ) ಮತ್ತು ಉಪ್ಪು ನೀರು ತಡೆಗೋಡೆ (ಇದು ಕೂಡಾ ರಾಜ್ಯಕ್ಕೆ ಮಾದರಿ ಕಾಮಗಾರಿ)
ಹಳಿಯಾಳ ತಾಲೂಕಿನ ಅರ್ಲವಾಡ ಗ್ರಾಮ ಪಂಚಾಯತಿಯಲ್ಲಿ
ಗುರಿಗೆ ತಕ್ಕಂತೆ ಮಾನವ ದಿನ ಸೃಜನೆ, ಸಕಾಲದಲ್ಲಿ ಕೂಲಿ ಪಾವತಿ ಮಾಡಿದ್ದು, ಕಾಮಗಾರಿ ಪೂರ್ಣಗೊಳಿಸುವಿಕೆ ಮತ್ತು ಜಿಯೋಟ್ಯಾಗ್ ಪೋಟೋ ತೆಗೆದುಕೊಂಡಿದ್ದು ವಿಶೇಷ ಪ್ರಯತ್ನ: 18ಎಕರೆ 07 ಗುಂಟೆ ಪಂಚಾಯತ ಗೈರಾಣ ಜಮೀನನ್ನು ಒತ್ತುವರಿದಾರರಿಂದ ಬಿಡಿಸಿ ಸದರಿ ಜಾಗೆಯಲ್ಲಿ ಸುಮಾರು 2000 ಸಸಿಗಳನ್ನು ನೆಟ್ಟಿರುತ್ತಾರೆ 18 ಎಕರೆ 07 ಗುಂಟೆ ಪಂಚಾಯತ ಗೈರಾಣ ಜಮೀನನ್ನು ಒತ್ತುವರಿದಾರರಿಂದ ಬಿಡಿಸಿ ಜಾಗೆಯಲ್ಲಿ ಸುಮಾರು 2000 ಸಸಿಗಳನ್ನು ನೆಟ್ಟಿರುತ್ತಾರೆ.