
ಯಲ್ಲಾಪುರ: ತಾಲೂಕಿನ ಸ.ಹಿ.ಪ್ರಾ.ಶಾಲೆ ಉಚಗೇರಿಯಲ್ಲಿ ಅರಣ್ಯ ಇಲಾಖೆ, ಗ್ರಾಮ ಪಂಚಾಯತ ಹಾಗೂ ಸ.ಹಿ.ಪ್ರಾ.ಶಾಲೆ ಉಚಗೇರಿಯ ಸಹಯೋಗದಲ್ಲಿ ಶಾಲೆಯ ಆವರಣ ಹಾಗೂ ನವಗ್ರಹ ದೇವಸ್ಥಾನದ ಆವರಣದಲ್ಲಿ ಗಿಡಗಳನ್ನು ನೆಡುವ ಮೂಲಕ ವನಮಹೋತ್ಸವ ಕಾರ್ಯಕ್ರಮವನ್ನು ವಿಧಾನ ಪರಿಷತ್ ಸದಸ್ಯ ಶಾಂತಾರಾಮ ಸಿದ್ದಿ ನೇರವೆರಿಸಿ ಮಾತನಾಡಿದರು.ನಂತರ ಮಾತನಾಡಿದ ಶಾಂತಾರಾಮ ಸಿದ್ದಿ ಕಳೆದ ಸುಮಾರು ಒಂದು ತಿಂಗಳಿಂದ ಜಿಲ್ಲೆಯ ಕಾರವಾರ ಹಾಗೂ ಸಿದ್ದಾಪುರ ಹೊರತುಪಡಿಸಿ ಎಲ್ಲಾ ತಾಲೂಕಿನ ವಿವಿಧ ಕಡೆ ಗಿಡಗಳನ್ನು ನೆಡುವ ಕಾರ್ಯಕ್ರಮ ಮಾಡಲಾಗಿದೆ. ಬೇರೆ ಕಾರ್ಯಕ್ರಮಗಳಿಗೆ ಬಂದಷ್ಟು ಜನರು ಬಾರದೆ ಇದ್ದರು ಬಂದಂತಹ ಜನರಲ್ಲಿ ಪರಿಸರ ಪ್ರೇಮ ಇರುವುದು ಸಂತಷದ ವಿಷಯ, ಮುಂದಿನ ದಿನಗಳಲ್ಲಿ ಇನ್ನು ಹೆಚ್ಚು ಜನರು ಗಿಡ ನೆಡುವ ಕೆಲಸ ವಾಗಬೇಕು ಎಂದರು.ವಿಧಾನ ಪರಿಷತ್ ಶಾಸಕರಾಗಿ ಪ್ರಥಮ ಬಾರಿಗೆ ಶಾಲೆಗೆ ಭೇಟಿ ನೀಡಿದಕ್ಕೆ ಶಾಲಾ ಸಮಿತಿಯವರು ಹಾಗೂ ಅರಣ್ಯ ಇಲಾಖೆ ವತಿಯಿಂದ ಶಾಸಕರನ್ನು ಸನ್ಮಾನಿಸಿದರು. ಈ ಸಂದರ್ಭದಲ್ಲಿ ಕುಂದರಗಿ ಪಂಚಾಯತ ಅಧ್ಯಕ್ಷೆ ದೀಪಾ, ಉಪಾಧ್ಯಕ್ಷೆ ಧಾಕ್ಲು ಪಾಟೀಲ್ ಸದಸ್ಯರು, ಅರಣ್ಯ ಇಲಾಖೆ ಮಂಚಿಕೇರಿ ವಲಯ ಅರಣ್ಯಾಧಿಕಾರಿ ಮಹೇಶ್.ಕೆ., ಉಪವಲಯ ಅರಣ್ಯಾಧಿಕಾರಿ ಜಗದೀಶ ಊರಿನ ಪ್ರಮುಖರು, ಸಂಘ ಸಂಸ್ಥೆಯ ಸದಸ್ಯರು, ಅರಣ್ಯ ಇಲಾಖೆ ಅಧಿಕಾರಿಗಳು, ಶಿಕ್ಷಕರು ಉಪಸ್ಥಿತರಿದ್ದರು.