• Slide
  Slide
  Slide
  previous arrow
  next arrow
 • ಫೆ.17ಕ್ಕೆ ಬೆಂಗಳೂರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಅತಿಕ್ರಮಣದಾರರು ಭಾಗವಹಿಸಲು ತೀರ್ಮಾನ

  300x250 AD

  ಕುಮಟ: ಬೆಂಗಳೂರಿನಲ್ಲಿ ಜರಗುವ ಅರಣ್ಯ ಭೂಮಿ ಹಕ್ಕಿಗಾಗಿ ‘೩೦ ವರ್ಷ ಹೋರಾಟದ ಸ್ಮರಣ ಸಂಚಿಕೆ’ ಬಿಡುಗಡೆ ಮತ್ತು ರಾಜ್ಯ ಮಟ್ಟದ ಭೂಮಿ ಹಕ್ಕು ಚಿಂತನ ಕೂಟಕ್ಕೆ ಕುಮಟ ತಾಲೂಕಿನಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಅರಣ್ಯ ಅತಿಕ್ರಮಣದಾರರು ತೀರ್ಮಾನಿಸಿದರು.

    ಜಿಲ್ಲಾ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕರ ನೇತ್ರತ್ವದಲ್ಲಿ ಇಂದು ಕುಮಟ ಮಹಾಸತಿ ದೇವಸ್ಥಾನದ ಸಭಾಂಗಣದಲ್ಲಿ ಕುಮಟ ತಾಲೂಕ ಅರಣ್ಯ ಅತಿಕ್ರಮಣದಾರರ ಸಭೆಯಲ್ಲಿ ಮೇಲಿನಂತೆ ತೀರ್ಮಾನಿಸಲಾಯಿತು.

   ತಾಲೂಕಾದ್ಯಂತ ಬಂದಿರುವ ಅರಣ್ಯವಾಸಿಗಳು ಅರಣ್ಯ ಹಕ್ಕು ಕಾಯಿದೆ ಮಂಜೂರಿ ಪ್ರಕ್ರೀಯೆಯಲ್ಲಿ ಉಂಟಾಗುತ್ತಿರುವ ಕಾನೂನಾತ್ಮಕ ಸಮಸ್ಯೆ ಮತ್ತು ಉಪ ಅರಣ್ಯ ಸಂರಕ್ಷಣಾಧಿಕಾರಿಗಳಿAದ ಬರುತ್ತಿರುವ ಒಕ್ಕಲೆಬ್ಬಿಸುವ ನೋಟಿಸಿನ ಕುರಿತು ಆತಂಕವನ್ನು ವ್ಯಕ್ತಪಡಿಸಿದರು. ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಅರ್ಜಿ ಸಲ್ಲಿಸಿ ಇಂದಿನವರೆಗೆ ಜಿಪಿಎಸ್ ಆಗದೇ ಇರುವ ನ್ಯೂನತೆ ಕುರಿತು ಅರಣ್ಯವಾಸಿಗಳು ಪ್ರಸ್ತಾಪಿಸಿದರು. ಅರಣ್ಯ ಅತಿಕ್ರಮಣದಾರರ ಭೂಮಿ ಹಕ್ಕಿಗಾಗಿ ನಿರಂತಹ ಹೋರಾಟ ಮಾಡುವರೆಂದು ಸಭೆಯಲ್ಲಿ ತೀರ್ಮಾನಿಸಲಾಯಿತು.

     ತಾಲೂಕ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ಮಂಜುನಾಥ ಮರಾಠಿ ಸ್ವಾಗತಿಸಿ, ಪ್ರಾಸ್ತವಿಕವಾಗಿ ಮಾತನಾಡುತ್ತಾ ಭೂಮಿ ಹಕ್ಕಿಗಾಗಿ ಹೇಚ್ಚಿನ ಸಂಖ್ಯೆಯಲ್ಲಿ ಅರಣ್ಯ ಅತಿಕ್ರಮಣದಾರರು ಬೆಂಗಳೂರು ಕಾರ್ಯಕ್ರಮಕ್ಕೆ ಭಾಗವಹಿಸಬೇಕೆಂದು ಕರೆ ನೀಡಿದರು.

  300x250 AD

     ಚರ್ಚೆಯಲ್ಲಿ ಜಿಲ್ಲಾ ಸಂಚಾಲಕ ಸೀತಾರಾಮ ಗೌಡ ನೀರಗಾನ, ಸೀತಾರಾಮ ನಾಯ್ಕ ಬೋಗ್ರಿಬೈಲ್, ಸುರೇಶ ಗಜಾನನ ಭಟ್ಟ ನಾಗೂರ, ಹೇಮಾ ಜಟ್ಟಪ್ಪ ನಾಯ್ಕ ನಾಗೂರ, ಶಾರಬಿ ಬೆಟ್ಕುಳಿ, ಯಾಕುಬ್ ಬೇಟ್ಕುಳಿ, ಕಯುಂ ಸಾಬ ಕಿಮಾನಿ, ರಾಮ ಮರಾಠಿ ಶೆಡಿಗದ್ದೆ, ಅನಂತ ಗಣು ಮರಾಠಿ ನಾಗೂರ, ಸುರೇಶ ಪಟಗಾರ ಹೆಗಡೆ, ಶಾಂತಿ ಮುಕ್ರಿ ಮಿರ್ಜಾನ, ಸುರೇÃಶ ಗೌಡ ಮೂರುರು, ವೆಂಕಟರಮಣ ಆಚಾರಿ ಅಘನಾಶಿನಿ ಮುಂತಾದವರು ಉಪಸ್ಥಿತರಿದ್ದರು.

  ಹೋರಾಟ ಅನಿವಾರ್ಯ:
     ಸರ್ವೋಚ್ಛ ನ್ಯಾಯಾಲಯದಲ್ಲಿ ಅನಧೀಕೃತ ಅರಣ್ಯವಾಸಿಗಳನ್ನು ಒಕ್ಕಲೆಬ್ಬಿಸಬೇಕೆಂಬ ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ,  ಅರಣ್ಯ ಭೂಮಿ ಮಂಜೂರಿಗೆ ಸಂಬAಧಿಸಿ, ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ತೀರಸ್ಕಾರವಾದವರನ್ನ ಹಂತ ಹಂತವಾಗಿ ಒಕ್ಕಲೆಬ್ಬಿಸಲಾಗುವುದೆಂಬ ರಾಜ್ಯ ಸರಕಾರದ ಪ್ರಮಾಣ ಪತ್ರವನ್ನ ಈಗಾಗಲೇ ಸಲ್ಲಿಸಿರುವುದರಿಂದ ಅರಣ್ಯ ಭೂಮಿ ಹಕ್ಕಿಗಾಗಿ ಹೋರಾಟ ಅನಿವಾರ್ಯವೆಂದು ಜಿಲ್ಲಾಧ್ಯಕ್ಷ ರವೀಂದ್ರ ನಾಯ್ಕ ಹೇಳಿದರು.

  Share This
  300x250 AD
  300x250 AD
  300x250 AD
  Leaderboard Ad
  Back to top