ಯಲ್ಲಾಪುರ :ತಾಲೂಕಿನ ಹಂಸನಗದ್ದೆ ಸರಕಾರಿ ಪ್ರೌಢಶಾಲೆ ಶಾಲೆಯ 10 ನೇ ತರಗತಿಯ ವಿದ್ಯಾರ್ಥಿ ಎಚ್.ಎಸ್. ಸಂದೇಶ, ಬಳಗಾರ ಇವನು 2020-21 ನೇ ಸಾಲಿನ ಜಿಲ್ಲಾ ಮಟ್ಟದ ಇನಸ್ಪೆರ್ ಅವಾರ್ಡ್ (INSPIRE AWARD) ಸ್ಪರ್ಧೆಯಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾನೆ.
‘ತರಕಾರಿ ಸಂರಕ್ಷಣಾ ಪೆಟ್ಟಿಗೆ’ ಮಾದರಿಯನ್ನು ತಯಾರಿಸಿ ಆನ್‌ಲೈನ್ ಮೂಲಕ ಪ್ರಸ್ತುತಿಪಡಿಸಿ, ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾನೆ. ವಿದ್ಯಾರ್ಥಿಗೆ ವಿಜ್ಞಾನ ಶಿಕ್ಷಕರಾದ ದಿನೇಶ್ ಆಚಾರಿ ಮಾರ್ಗದರ್ಶನ ಮಾಡಿದ್ದರು. ಸಾಧನೆ ಮಾಡಿರುವ ಎಚ್ ಎಸ್ ಸಂದೇಶನಿಗೆ ಶಾಲೆಯ ಮುಖ್ಯೋಪಾಧ್ಯಾಯರು, ಶಿಕ್ಷಕರು ಹಾಗೂ ಎಸ್.ಡಿ.ಎಮ್.ಸಿ ಯವರು ಅಭಿನಂದಿಸಿದ್ದಾರೆ.