ಅಂಕೋಲಾ : ನೆಹರು ಯುವ ಕೇಂದ್ರ ಕಾರವಾರ, ಜಿಲ್ಲಾ ಕೈಗಾರಿಕಾ ಕೇಂದ್ರ ಉತ್ತರ ಕನ್ನಡ, ಜಿಲ್ಲಾ ಕೌಶಲ್ಯ ಅಭಿವೃದ್ಧಿ ಸಂಸ್ಥೆ ಉತ್ತರ ಕನ್ನಡ ಮತ್ತು ಶ್ರೀರಾಮ ಸ್ಟಡಿ ಸರ್ಕಲ್ ಇವುಗಳ ಸಂಯುಕ್ತ ಆಶ್ರಯದಲ್ಲಿ ಕೆರೀಯರ್ ಗೈಡನ್ಸ್ ಕಾರ್ಯಕ್ರಮವನ್ನು ವಿರಾಂಜನೇಯ ಸಭಾಭವನ ಅಂಕೋಲಾದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಈ ತರಬೇತಿ ಕಾರ್ಯಕ್ರಮವನ್ನು ನೆಹರು ಯುವ ಕೇಂದ್ರ ಕಾರವಾರದ ಯುವಜನ ಅಧಿಕಾರಿ ಯಶವಂತ ಯಾದವ ಉದ್ಘಾಟಿಸಿ ಮಾತನಾಡುತ್ತಾ “ಮನೆಯ ಪರಿಸರದಿಂದ ಹೊರಬಂದ ವಿದ್ಯಾರ್ಥಿ ಶಾಲೆ ಹಾಗೂ ಕೋಚಿಂಗ್ ಸೆಂಟರ್ ಗಳಲ್ಲಿ ನೀಡಲಾಗುವ ಶಿಸ್ತು ಮತ್ತು ಮೌಲ್ಯಗಳಿಂದ ಭವಿಷ್ಯ ರೂಪಿಸಿಕೊಳ್ಳುತ್ತಾನೆ” ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಡೆಪ್ಯೂಟಿ ಡೈರೆಕ್ಟರ ಶಿವಾನಂದ ವಿ. ಯಾಲಿಗರ್, ಉತ್ತರ ಕನ್ನಡರವರು ವಿವಿಧ ಚಟುವಟಿಕೆಗಳನ್ನು ಮಾಡಿಸುವುದರ ಮೂಲಕ ವ್ಯಕ್ತಿತ್ವ ವಿಕಸನ ತರಬೇತಿ ನೀಡಿದರು.
ಶ್ರೀರಾಮ ಸ್ಟಡಿ ಸರ್ಕಲ್‍ನ ನಿರ್ದೇಶಕರ ಸೂರಜ್ ನಾಯ್ಕ ಸಭಾಧ್ಯಕ್ಷತೆಯನ್ನು ವಹಿಸಿ ಮಾತನಾಡುತ್ತ ವೃತ್ತಿಯನ್ನು ಆಯ್ಕೆ ಮಾಡಿಕೊಳ್ಳುವಲ್ಲಿ ವೈಜ್ಞಾನಿಕ ಹಂತಗಳ ಬಗ್ಗೆ ವಿವರಿಸಿದರು. ಮಹೇಶ ಬೆಂಗಳೂರು ಸ್ವಾಗತ ಗೀತೆ ಹಾಡಿದರು, ವಿದ್ಯಾ ನಾಯ್ಕ ಭಟ್ಕಳ ನಿರೂಪಿಸಿದರು. ಸುದರ್ಶನ ಕುಮಟಾ ವಂದಿಸಿದರು.