ಹೊನ್ನಾವರ: ಯಾವುದೋ ದ್ವೇಷದಿಂದ ಇದ್ದ ವ್ಯಕ್ತಿಗಳು ಇನ್ನೊರ್ವನ ಮೇಲೆ ಹಲ್ಲೆ ನಡೆಸಿದ ಘಟನೆ ತಾಲೂಕಿನ ಚಂದಾವರದ ಸುಲ್ತಾನ ಕೇರಿಯಲ್ಲಿ ಗುರುವಾರ ನಡೆದಿದೆ.
ಹೊದಿಕೆಶಿರೂರ ಜಡ್ಡಿಗದ್ದೆ ಕ್ರಾಸ್ ನಿವಾಸಿ ಶ್ರೀನಿವಾಸ ಶಂಕರ ಮಡಿವಾಳ ಎನ್ನುವವರು ಹಲ್ಲೆಗೊಳಗಾದವರಾಗಿದ್ದಾರೆ. ಗುರುವಾರ ಬೆಳಗ್ಗೆ 10 ಗಂಟೆಗೆ ಇವರು ತಮ್ಮ ಬೈಕ್ ಮೇಲೆ ಬರುತ್ತಿದ್ದಾಗ ಹಲ್ಲೆ ನಡೆದಿದೆ ಎಂದು ದೂರಿದ್ದಾರೆ. ಆರೋಪಿ ಕಡ್ನಿರದ ಕೃಷ್ಣ ಗೌಡ, ಈತನು ತನ್ನ ಗೆಳೆಯರಾದ ಹೊದಿಕೆ ಶಿರೂರಿನ ಆರೋಪಿತರಾದ ಗುರು ಐಗಳ, ನವೀನ ದತ್ತಾ ನಾಯ್ಕ, ಇವರೊಂದಿಗೆ ಸೇರಿ ಅಡ್ಡಗಟ್ಟಿ ತಡೆದು, ಕೈಯಿಂದ ಎಲ್ಲರೂ ಸೇರಿ ಬೆನ್ನಿಗೆ ಮೈಮೇಲೆ ಹೊಡೆದು, ಬೈಕ್ ಮೇಲೆ ಕುಳಿತಿದ್ದಾಗ ಎಳೆದು ಬೈಕ್ ದೂಡಿ ಹಾಕಿ, ಅವಾಚ್ಯ ಶಬ್ದದಿಂದ ಬೈದು, ನಿನಗೆ ಸುಮ್ಮನೆ ಬಿಡುವದಿಲ್ಲ ಎಂದಿದ್ದಾರೆ. ಕೃಷ್ಣ ಗೌಡ ಈತನು ದೊಣ್ಣೆಯಿಂದ ಬೆನ್ನಿಗೆ ಹೊಡೆದು, ಎಲ್ಲರೂ ಸೇರಿ ಗಟಾರದಲ್ಲಿ ದೂಡಿ ಹಾಕಿ ನೆಲಕ್ಕೆ ತಿಕ್ಕಿ, ಗಾಯಪಡಿಸಿ, ಕೊಲೆ ಮಾಡುತ್ತೇನೆ ಅಂತಾ ಜೀವ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಈ ಕುರಿತು ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.